Cauvery: ಕರುನಾಡಿನಲ್ಲಿ ನೀರಿಗೆ ಕೊರತೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ವಿಪಕ್ಷ ನಾಯಕ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಉತ್ತಮ ಮಳೆ ಆಗಿದ್ದು, ಕೊನೆಗೂ ಮುಂಗಾರು ಮತ್ತೆ ದುರ್ಬಲವಾಗಿದೆ. ಇದರ ನಡುವೆ ತಮಿಳುನಾಡಿಗೆ ನೀರು ಹರಿಸಲು ಉದ್ದೇಶದಿಂದಲೇ ರಾಜ್ಯ ಸರ್ಕಾರ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಿದೆ ಎಂದು ಮಂಡ್ಯ ರೈತರು ವಿನೂತನವಾಗಿ ಪ್ರತಿಭಟಿಸಿದ್ದರು. 'ರಾಜ್ಯದಲ್ಲಿ ನೀರಿಲ್ಲದೇ ಕೆರೆಗಳು, ಕಾಲುವೆಗಳು ಒಣಗುತ್ತಿಗೆ. ಈ ನಡುವೆ ಕೃಷ್ಣ ರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ, ನಮ್ಮ ರಾಜ್ಯದ ರೈತರ ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಐಸಿಸಿ ಹಾಗೂ ಸಂಬಂಧಿತ ಸಭೆಗಳನ್ನು ನಡೆಸುವಂತೆ ವಿಪಕ್ಷ ನಾಯಕ ಆರ್.ಅಶೊಕ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ರೈತರ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ತಮಿಳುನಾಡಿಗೆ ಕಾವೇರಿ ನೀರು ಧಾರೆ ಎರೆಯುತ್ತಿರುವ ನಿಮ್ಮ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದ KRS ಡ್ಯಾಂನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಕೊಂಚ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ ತಮಿಳುನಾಡಿಗೆ ನೀರು ಅಕ್ರಮವಾಗಿ ನೀರು ಬಿಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ನೀರುವ ಹರಿಸುವ ನಡೆಯನ್ನು ಕನ್ನಡಿಗರು ಆಕ್ಷೇಪಿಸುತ್ತಿದ್ದಾರೆ.
ನೆರೆ ರಾಜ್ಯಕ್ಕೆ ಕದ್ದು ಮುಚ್ಚು ನೀರು ಬಿಡುಗಡೆ
ಕಾವೇರಿ ಜಲಾನಯನ ಪ್ರದೇಶದ ನಮ್ಮ ಅನ್ನದಾತರು ನಡುನೀರಿನಲ್ಲಿ ನಿಂತು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶದ ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲದೆ ಕೆರೆಗಳು ಒಣಗುತ್ತಿವೆ, ನಾಲೆಗಳು ಬತ್ತುತ್ತಿವೆ, ರೈತರ ಜಮೀನುಗಳು ಒಣಗಿ ಕರಕಲಾಗುತ್ತಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವುದು ರೈತರಿಗೆ ಮಾಡುತ್ತಿರುವ ಮಹಾದ್ರೋಹ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೈತರ ಸಮಸ್ಯೆ ಆಲಿಸಬೇಕು. ಕೂಡಲೇ ಐಸಿಸಿ (ICC) ಸಭೆ ನಡೆಸುವಂತೆ ಒತ್ತಾಯಿಸಿದರು. ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣವೇ ಕರೆದು, ನಮ್ಮ ರಾಜ್ಯದ ಜಲಾಶಯಗಳ ನೈಜ ಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಬೇಕು ಎಂದು ರೈತರ ಪರ ಕೋರಿದರು.
ಕಾವೇರಿ ನೀರು ಹರಿಸದಂತೆ ಮನವಿ
ರಾಜ್ಯ ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ನೆರೆಯ ತಮಿಳುನಾಡಿಗೆ ನೀರು ಹರಿಸುವ ನಿಮ್ಮ ರಹಸ್ಯ ಒಪ್ಪಂದವನ್ನು ತಕ್ಷಣವೇ ಕೈಬಿಡಬೇಕು. ಕೃಷ್ಣ ರಾಜ ಸಾಗರ (KRS) ಕಾವೇರಿ ಗೇಟ್‌ಗಳನ್ನು ಬಂದ್ ಮಾಡಬೇಕು. ಕಾವೇರಿ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿನ ಹಳ್ಳಿಗಳ ಕೆರೆಗಳಿಗೆ ಮತ್ತು ನಾಲೆಗಳಿಗೆ ತಕ್ಷಣ ನೀರು ಬಿಡಬೇಕು. ರೈತರ ಜಮೀನುಗಳಿಗೆ ಮತ್ತು ಬೆಳೆಗಳಿಗೆ ನೀರು ಒದಗಿಸುವ ತುರ್ತು ಕೆಲಸವಾಗಬೇಕೆಂದು ಅವರು ಕೋರಿದರು.
ಕನ್ನಡಿಗರ ತಾಳ್ಮೆ ಪರೀಕ್ಷಿಸಿದರೆ ಉಗ್ರ ಹೋರಾಟ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಒಮ್ಮೆ ಮಂಡ್ಯದ ನದಿಯೊಳಗೆ ಇಳಿದು ಹೋರಾಡುತ್ತಿರುವ ರೈತರ ಪರಿಸ್ಥಿತಿಯನ್ನು ನೋಡಿ. ರೈತರಿಗೆ ಕೊಡಲು ನೀರಿಲ್ಲದಿದ್ದರೂ, ನಿಮ್ಮ ಹೈಮಂಡ್ ನಾಯಕರನ್ನು, ನೆರೆ ರಾಜ್ಯದವರನ್ನು ತೃಪ್ತಿಪಡಿಸಲು ನೀವು ಮುಂದಾಗಿರುವುದು ಇಡೀ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯವ ಎಂದು ಬಣ್ಣಿಸಿದರು. ರಾಜ್ಯದ ರೈತರ ಹೊಟ್ಟೆಗೆ ಹೊಡೆದು ನೀವು ಯಾರನ್ನು ಉದ್ಧಾರ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದರು.
ನಿಮಗೆ ಕೊನೆಯ ಎಚ್ಚರಿಕೆ, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ನೀರಾವರಿ ಸಲಹಾ ಸಮಿತಿ (ICC) ಸಭೆ ನಡೆಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇಡೀ ಕಾವೇರಿ ಕೊಳ್ಳದ ಸಾವಿರಾರು ರೈತರನ್ನು ಒಟ್ಟುಗೂಡಿಸಿ ಕೆ ಆರ್ ಎಸ್ (KRS) ಜಲಾಶಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.













Click it and Unblock the Notifications