Good News: ರೈಲು ತಡವಾದರೂ ಟೆನ್ಷನ್ ಬೇಡ! ನಿಲ್ದಾಣದಲ್ಲೇ ಹೈಫೈ ಮಲಗುವ ವ್ಯವಸ್ಥೆ ಪರಿಚಯ

Indian Railways: ದೇಶದ ನಾನಾ ರಾಜ್ಯಗಳ ವ್ಯಾಪ್ತಿಯಲ್ಲಿ ಹೊಸ ರೈಲು ಮಾರ್ಗ, ರೈಲ್ವೆ ಬ್ರಿಡ್ಜ್, ಹಳಿ ಡಬ್ಲಿಂಗ್ ಸೇರಿದಂತೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಕರ್ನಾಟಕದಲ್ಲಿ ಸುಮಾರು 52,000 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಹೀಗೆ ಪ್ರಯಾಣಿಕಸ್ನೇಹಿ ಉಪಕ್ರಮ, ಯೋಜನೆ ಕೈಗೆತ್ತಿಕೊಳ್ಳುತ್ತಿರುವ ರೈಲ್ವೆ ಇಲಾಖೆ ದೇಶದಲ್ಲೇ ಇದೇ ಮೊದಲ ಬಾರಿಗೆ ರೈಲು ಪ್ರಮುಖ ನಿಲ್ದಾಣವೊಂದರಲ್ಲಿ 'ಪ್ರಯಾಣಿಕರಿಗೆ ಮಲಗಲು ಅತ್ಯಾಧುನಿಕ ಹೈಫೈ ವ್ಯವಸ್ಥೆ'ಯೊಂದನ್ನು ಪರಿಚಯಿಸಿದೆ. ಬೆಂಗಳೂರಿನ ನಿಲ್ದಾಣದಲ್ಲೂ ಪ್ರಯಾಣಿಕರಿಗೆ ಇಂತಹ ವ್ಯವಸ್ಥೆ ಸಿಗುತ್ತಾ..?

ರೈಲ್ವೆ ನಿಲ್ದಾಣದಲ್ಲಿ ಕೆಲವೊಮ್ಮೆ ರೈಲು ಬರುವುದು ತಡವಾಗುತ್ತದೆ. ಮಹಿಳೆಯರು, ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ನಿಲ್ದಾಣಗಳಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ಇರುತ್ತದೆ. ಅದಕ್ಕಾಗಿ ಇಷ್ಟು ದಿನ ವಿಶ್ರಾಂತಿ ಕೊಠಡಿಗಳಿದ್ದವು. ಆದರೆ ಇದೇ ಮೊದಲ ಬಾರಿಗೆ 'ವಿಶ್ರಾಂತಿ/ಮಲಗಲು ಪ್ರತ್ಯೇಕ ಕೋಣೆಗಳ ರೀತಿಯ ಹಾಸಿಗೆಯ ವ್ಯವಸ್ಥೆ'ಯನ್ನು (ಸ್ಲೀಪಿಂಗ್ ಪಾಡ್ಸ್) ದಕ್ಷಿಣ ಕರಾವಳಿ ರೈಲ್ವೆ (South Coast Railways) ಪರಿಚಯಿಸಿದೆ.

Indian Railways

ಆಂಧ್ರ ಪ್ರದೇಶದ ಪ್ರಮುಖ ನಗರವಾದ ವಿಜಯವಾಡ (Vijayawada Railway Station) ರೈಲು ನಿಲ್ದಾಣದಲ್ಲಿ ಈ ಹೊಸ ವ್ಯವಸ್ಥೆಯನ್ನು ರೈಲ್ವೆ ಅಧಿಕಾರಿಗಳು ಪರಿಚಯಿಸಿದ್ದಾರೆ. ನಿಲ್ದಾಣದ ಪ್ಲಾಟ್‌ಫಾರ್ಮ್‌-1ರಲ್ಲಿನ ಕೊಠಡಿಯೊಂದರಲ್ಲಿ ಪ್ರಯಾಣಿಕರಿಗೆ ಮಲಗಲು ಹಾಸಿಗೆ, ದಿಂಬು ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯ ಒದಗಿಸಲಾಗಿದೆ.

ಯಶವಂತಪುರ, ಕಂಟೋನ್ಮೆಂಟ್ ಬೆನ್ನಲ್ಲೇ KSR ರೈಲು ನಿಲ್ದಾಣ 1,370 ಕೋಟಿ ರೂ, ವೆಚ್ಚದಲ್ಲಿ ವಿಶ್ವದರ್ಜೆಗೆ..
ಯಶವಂತಪುರ, ಕಂಟೋನ್ಮೆಂಟ್ ಬೆನ್ನಲ್ಲೇ KSR ರೈಲು ನಿಲ್ದಾಣ 1,370 ಕೋಟಿ ರೂ, ವೆಚ್ಚದಲ್ಲಿ ವಿಶ್ವದರ್ಜೆಗೆ..

ಹೊಸ ವ್ಯವಸ್ಥೆಯಲ್ಲಿ ಏನೇನು ಸೌಲಭ್ಯಗಳಿವೆ?

ವಿಜಯವಾಡ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಈ ವಿಶೇಷ ಸ್ಲೀಪಿಂಗ್ ಪಾಡ್ಸ್ ವ್ಯವಸ್ಥೆಯನ್ನು ಒದಗಿಸಲಾಗಿದೆ. 'ಇಲ್ಲಿ ವಾಸ್ತವ್ಯವಿರಬಹುದು, 168 ಬೆಡ್‌ಗಳನ್ನು ಪ್ರತ್ಯೇಕ ಕೋಣೆಗಳಂತಿರುವ ಜಾಗದಲ್ಲಿ ನೀಡಲಾಗಿದೆ. ಪ್ರತಿ ಪ್ರಯಾಣಿಕರು ಪ್ರತ್ಯೇಕವಾಗಿ ಮಲಗಬಹುದು. ಒಂದರ ಮೇಲೊಂದರಂತೆ ಒಟ್ಟು ಮೂರು ಬೆಡ್‌ಗಳನ್ನು ಹಾಕಲಾಗಿದೆ. ನೋಡಲು ಹಾಸ್ಟೇಲ್‌ನಲ್ಲಿರುವಂತೆ ಕಾಣುತ್ತದೆ. ಆದರೆ ಅತ್ಯಾಧುನಿಕವಾಗಿದೆ. ಲಗೇಜ್ ಇಡಲು ಪ್ರತ್ಯೇಕ ವ್ಯವಸ್ಥೆ ಇದೆ. ಸ್ಪೀಡ್‌ ವೈಫೈ, ಫ್ಯಾನ್, ಪಿಲ್ಲೋ, ವಿದ್ಯುತ್, ಅಗ್ನಿ ಸುರಕ್ಷತಾ ಉಪಕರಣದ, ಹವಾನಿಯಂತ್ರಿತ (ಎಸಿ) ಸೇರಿದಂತೆ ಅತ್ಯಗತ್ಯ ವ್ಯವಸ್ಥೆ ಇಲ್ಲಿದೆ.

ಮಹಿಳೆಯರಿಗೆ 14 ವಿಶೇಷ ಬೆಡ್, ಕೈಗೆಟುಕುವ ದರಕ್ಕೆ ಸೌಲಭ್ಯ

ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 14 ವಿಶೇಷ ಹಾಸಿಗೆಗಳನ್ನು ಒದಗಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಇದು ಉಚಿತವಲ್ಲ. ಬದಲಾಗಿ ಕೈಗೆಟುಕುವ ದರದಲ್ಲಿ ಈ ಸೌಲಭ್ಯಗಳನ್ನು ನೀವು ಪಡೆಯಬಹುದಾಗಿದೆ. ಮೂರು ಗಂಟೆ ನಿದ್ರಿಸುವುದಾದರೆ ಅದಕ್ಕೆ 200 ರೂಪಾಯಿ ಮತ್ತು 12ಗಂಟೆಗೆ 400 ರೂಪಾಯಿ ನಿಗದಿಪಡಿಸಲಾಗಿದೆ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಬೆಂಗಳೂರಿನ ನಿಲ್ದಾಣಕ್ಕೂ ಈ ವ್ಯವಸ್ಥೆ ಬರುತ್ತಾ?

ರೈಲ್ವೆ ಇಲಾಖೆ ಆರಂಭಿಕ ಹಂತದಲ್ಲಿ ಇಂಥದ್ದೊಂದು ಪ್ರಯತ್ನ ಮಾಡಿದೆ. ಇದಕ್ಕೆ ಸಿಗುವ ಸ್ಪಂದೆನ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ಮಹಾನಗರಗಳ ರೈಲು ನಿಲ್ದಾಣಗಳಲ್ಲಿನ ಅಗತ್ಯತೆ ನೋಡಿಕೊಂಡು ಈ ಸ್ಲೀಪಿಂಗ್ ಪಾಡ್ಸ್ ವ್ಯವಸ್ಥೆಯನ್ನು ಹಂತ ಹಂತವಾಗಿ ಪರಿಚಯಿಸಲು ಚಿಂತನೆ ನಡೆಸಿದೆ. ಒಂದು ವೇಳೆ ವಿಸ್ತರಣೆ ಮಾಡಲು ಮುಂದಾಗಿದ್ದೇ ಆದಲ್ಲಿ ದೇಶದ ಪ್ರಮುಕ ಐಟಿ ಕೇಂದ್ರವಾಗಿರುವ, ಹಲವಾರು ವಿಶೇಷತೆಗಳನ್ನು ಹೊಂದಿರುವ ಕರ್ನಾಟಕದ ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಪರಿಚಯಿಸಿದರೆ ಅಚ್ಚರಿ ಇಲ್ಲ. ಆದರೆ ಅದಕ್ಕಾಗಿ ಇನ್ನೂ ಕೆಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+