ಗುರು ಸೂರ್ಯನ ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ :ಒಲಿದು ಬರುವಳು ಲಕ್ಷ್ಮೀ, ಹಣ ಸಿಗುವುದು, ಇಷ್ಟಾರ್ಥ ನೆರವೇರುವುದು
ಈ ತಿಂಗಳ 15 ರಿಂದ ಗುರು ಮತ್ತು ಸೂರ್ಯ ಕರ್ಕ ರಾಶಿಯಲ್ಲಿ ಒಟ್ಟಿಗೆ ಸೇರುತ್ತಾರೆ. ಈ ಗುರು ಸೂರ್ಯ ಸಂಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತು ಹೆಚ್ಚಾಗುವುದು. ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಅವರ ಜೊತೆಗಿರುವುದು. ಗುರು ಮತ್ತು ಸೂರ್ಯನ ಸಂಚಾರದ ಕಾರಣದಿಂದಾಗಿ ಮೇಷ, ಕರ್ಕ, ಕನ್ಯಾ, ತುಲಾ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಕೆಲವು ಅದೃಷ್ಟ ಯೋಗಗಳಿಂದ ಲಾಭವಾಗುವ ಸಾಧ್ಯತೆಯಿದೆ.
ಮೇಷ ರಾಶಿ (Aries): ಈ ರಾಶಿಯ ನಾಲ್ಕನೇ ಮನೆಯಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಜನೆಯು ರಾಜಯೋಗವನ್ನು ರೂಪಿಸುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಸಂಬಳ ಮತ್ತು ಭತ್ಯೆಗಳಲ್ಲಿ ಹೆಚ್ಚಳ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಆಸ್ತಿ ಸಮಸ್ಯೆಗಳು ಬಗೆಹರಿಯುತ್ತವೆ.ಸ್ವಂತ ಮನೆ ನಿರ್ಮಾಣದ ಕಾರ್ಯಕ್ಕೆ ಮುಂದಾಗುವಿರಿ. ಸಾಮಾಜಿಕ ಸ್ಥಾನಮಾನ, ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಯದಲ್ಲಿಯೂ ಏರಿಕೆಯಾಗುವುದು. ವೈಯಕ್ತಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ (Cancer): ಈ ರಾಶಿಯಲ್ಲಿ ಸಂಪತ್ತಿನ ಅಧಿಪತಿ ರವಿ ಮತ್ತು ಭಾಗ್ಯದ ಅಧಿಪತಿ ಗುರುವಿನ ಸಾಮೀಪ್ಯದಿಂದಾಗಿ, ಈ ರಾಶಿಯವರಿಗೆ ಅನೀರೀಕ್ಷಿತ ಧನ ಲಾಭವಾಗುವುದು. ಇವರು ಕಂಡ ಕನಸು ನನಸಾಗುವ ಕಾಲ ಇದು. ಧನ ಯೋಗದೊಂದಿಗೆ ಇವರಿಗೆ ರಾಜಯೋಗದಿಂದಲೂ ಲಾಭವಾಗುವುದು. ಎಲ್ಲಾ ಮೂಲಗಳಿಂದಲೂ ಹಣ ಸಿಗುವುದು. ಷೇರು ಮಾರುಕಟ್ಟೆ, ಆರ್ಥಿಕ ವಹಿವಾಟುಗಳ ಮೂಲಕ ನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಾಮುಖ್ಯತೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು.
ಕನ್ಯಾ ರಾಶಿ (Virgo): ಲಾಭ ಸ್ಥಾನದಲ್ಲಿ ಗುರು ಮತ್ತು ಸೂರ್ಯನ ಸಂಯೋಗವು ಈ ರಾಶಿಯವರ ಜೀವನದ ದಿಕ್ಕನ್ನು ಬದಲಾಯಿಸುತ್ತದೆ. ಇವರು ಏನೂ ಮುಟ್ಟಿದರೂ ಚಿನ್ನವಾಗುವ ಸಮಯ. ಕೆಲಸದಲ್ಲಿ ಬಡ್ತಿ ಸಿಗುವುದು. ಉತ್ತಮ ಕಂಪನಿಗೆ ಉದ್ಯೋಗ ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಅಪರೂಪದ ಕೊಡುಗೆಗಳು ಸಿಗುತ್ತವೆ. ಆದಾಯವು ಹಲವು ರೀತಿಯಲ್ಲಿ ಹೆಚ್ಚಾಗುತ್ತದೆ. ಹೆಚ್ಚಿನ ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷೆಗಳನ್ನು ಮೀರಿ ಲಾಭ ದೊರೆಯುತ್ತದೆ.
ತುಲಾ ರಾಶಿ (Libra): ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಗುರುಗಳು ಸಂಧಿಸಿರುವುದರಿಂದ, ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ ಇದೆ. ಹೊಸ ವ್ಯವಹಾರ ಆರಂಭಿಸಲು ಸೂಕ್ತ ಸಮಯ. ವೃತ್ತಿ ಮತ್ತು ವ್ಯವಹಾರ ಲಾಭದಾಯಕವಾಗಿರುತ್ತದೆ. ವಿದೇಶ ಪ್ರಯಾಣದ ಯೋಗವಿದೆ. ಆಸ್ತಿ ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳು ಅನುಕೂಲಕರವಾಗಿ ಬಗೆಹರಿಯುತ್ತವೆ. ಆದಾಯದ ಮೂಲಗಳು ಹೆಚ್ಚುವುದು. ಹಠಾತ್ ಆರ್ಥಿಕ ಲಾಭದ ಸಾಧ್ಯತೆಯೂ ಇದೆ.
ಮಕರ ರಾಶಿ (Capricorn): ಏಳನೇ ಮನೆಯಲ್ಲಿ ಗುರು ಮತ್ತು ರಾಹು ಸಂಧಿಸಿದ್ದು, ಈ ರಾಶಿಯವರಿಗೆ ಶುಭ ಸಮಯ ಆರಂಭವಾಗಿದೆ. ಆದಾಯದ ಹೆಚ್ಚಳದ ಜೊತೆಗೆ, ಅಧಿಕಾರ ಯೋಗದ ಸಾಧ್ಯತೆಯೂ ಇದೆ. ಬ್ಯಾಂಕ್ ಬ್ಯಾಲೆನ್ಸ್ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಣದ ಸಮಸ್ಯೆಗಳೆಲ್ಲವೂ ಬಗೆಹರಿಯುವುದು. ಬಡ್ತಿಯೊಂದಿಗೆ ವೇತನದಲ್ಲಿ ದೊಡ್ಡ ಮಟ್ಟದ ಹೆಚ್ಚ್ಳ ಕಂಡು ಬರುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ಆದಾಯ ನಿರೀಕ್ಷೆಗಳನ್ನು ಮೀರಿ ಹೆಚ್ಚಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ (Scorpio): ಅದೃಷ್ಟ ಸ್ಥಾನದಲ್ಲಿ ಸೂರ್ಯನು ಗುರುವಿನ ಜೊತೆ ಸಂಧಿಸುವುದರಿಂದ, ಈ ರಾಶಿಯವರಿಗೆ ಅಧಿಕಾರ ಯೋಗ ಬರುತ್ತದೆ. ಸಂಪತ್ತು ಹೆಚ್ಚಾಗುವುದು. ಕಚೇರಿಯಲ್ಲಿ ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಆರ್ಥಿಕ ಪರಿಸ್ಥಿತಿ ಉನ್ನತ ಮಟ್ಟವನ್ನು ತಲುಪುತ್ತದೆ. ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರಗಳು ಲಾಭ ತರುವುದು. ಮನಸ್ಸಿನ ಆಸೆಗಳು ಈಡೇರುವುದು. ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications