ಮತ್ತೆ ಘಮಘಮಿಸಲಿದೆಯಾ ಮೈಸೂರು ಮಲ್ಲಿಗೆ, ರಸಬಾಳೆ, ವೀಳ್ಯದೆಲೆ: ಪಾರಂಪರಿಕ ಬೆಳೆ ಉಳಿಸಲು ಸರ್ಕಾರ ಸಜ್ಜು
ಮೈಸೂರು, ಆಗಸ್ಟ್ 21 ಪ್ರವಾಸಿ ತಾಣಗಳು, ಸಿಹಿತಿನಿಸು, ಆಹಾರ ಪದಾರ್ಥಗಳು, ಮಾತ್ರವಲ್ಲದೆ ವೀಳ್ಯದೆಲೆ, ಮಲ್ಲಿಗೆ ಮತ್ತು ರಸಬಾಳೆ ಮೈಸೂರಿನ ಹೆಸರನ್ನು ಜಗದಗಲಕ್ಕೂ ಪಸರಿಸುವಂತೆ ಮಾಡಿದೆ. ಆದರೆ ಕೆಲವೊಂದು ಕಾರಣಗಳಿಂದ ಇಲ್ಲಿನ ಹೆಗ್ಗುರುತಾಗಿರುವ ಭೌಗೋಳಿಕ ಬೆಳೆಗಳು ನಶಿಸಿ ಹೋಗುತ್ತಿವೆಯೇನೋ? ಎಂಬ ಭಯವೂ ಕಾಡಲಾರಂಭಿಸಿದೆ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂಬ ಒತ್ತಾಯಗಳು ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದೀಗ ಅದಕ್ಕೆ ವೇಗ ಸಿಕ್ಕಂತಾಗಿದೆ.
ಭೌಗೋಳಿಕ ಬೆಳೆಗಳನ್ನು ಉಳಿಸುವುದು ರೈತರಿಂದ ಮಾತ್ರ ಸಾಧ್ಯ. ಕೆಲವೊಂದು ಬೆಳೆಗಳನ್ನು ಬೆಳೆಯುವುದು ಸುಲಭದ ಕೆಲಸವಾಗಿ ಉಳಿದಿಲ್ಲ. ಹೀಗಾಗಿ ಅದರ ಸಹವಾಸವೇ ಬೇಡವೆಂದು ರೈತರು ಇತರೆ ಬೆಳೆಗಳತ್ತ ಮುಖ ಮಾಡುತ್ತಾರೆ. ಇದರಿಂದ ನಿಧಾನವಾಗಿ ಆ ಬೆಳೆಗಳು ಅವನತಿ ಹಾದಿ ಹಿಡಿಯುತ್ತವೆ. ಇವತ್ತು ಮೈಸೂರಿನ ಭೌಗೋಳಿಕೆ ಹೆಗ್ಗುರುತಾಗಿ ಗುರುತಿಸಿಕೊಂಡಿರುವ ನಂಜನಗೂಡಿನ ರಸಬಾಳೆ, ಮೈಸೂರಿನ ರಸಬಾಳೆ ಮತ್ತು ವೀಳ್ಯದೆಲೆಯ ಕಥೆಯೂ ಇದಕ್ಕೆ ಹೊರತಾಗಿಲ್ಲ. ರಸಬಾಳೆ, ಮಲ್ಲಿಗೆ, ವೀಳ್ಯದೆಲೆ ಬಗ್ಗೆ ಹೇಳಬೇಕೆಂದರೆ, ಇವು ಕೇವಲ ಭೌಗೋಳಿಕ ಹೆಗ್ಗುರುತುಗಳು ಮಾತ್ರವಲ್ಲದೆ, ನಮ್ಮ ಪರಂಪರೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ 42 ವಿಶೇಷತೆಗಳಿಗೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಸಿಕ್ಕಿದ್ದು, ಅದರಲ್ಲಿ ಮೈಸೂರಿನ 18 ಉತ್ಪನ್ನಗಳು ಸ್ಥಾನ ಪಡೆದಿರುವುದು ವಿಶೇಷ. ಈ ಪೈಕಿ ಒಂದು ಕಾಲದಲ್ಲಿ ಮೈಸೂರಿನ ಅಸ್ಮಿತೆಯಾಗಿ ಜನಮಾನಸದಲ್ಲಿ ನೆಲೆಯೂರಿದ್ದ ಜನಪ್ರಿಯ ಉತ್ಪನ್ನಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಎಲ್ಲೋ ಒಂದು ಕಡೆ ಮೊದಲಿನಂತೆ ಎಲ್ಲೆಂದರಲ್ಲಿ ಸಿಗದೆ ಅದು ನಿಧಾನವಾಗಿ ಕಣ್ಮರೆಯಾಗುತ್ತಿದೆ.
ರುಚಿಕರವಾದ ನಂಜನಗೂಡು ರಸಬಾಳೆ
ಈ ಬಗ್ಗೆ ಗಮನಹರಿಸಿರುವ ತಪ್ಪಿಸಲು ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಅದರ ಉತ್ತೇಜನದತ್ತ ಗಮನಹರಿಸಿದೆ. ಇವುಗಳು ನಶಿಸಿ ಹೋಗದಂತೆ ಹಾಗೂ ಮುಂದಿನ ತಲೆಮಾರಿನವರಿಗೆ ಉಳಿಸಿ, ಬೆಳೆಸುವ ಮತ್ತು ಅದರ ಮಹತ್ವವನ್ನು ಇವತ್ತಿನ ತಲೆಮಾರಿಗೆ ತಿಳಿಸಿಕೊಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಇದನ್ನು ಬೆಳೆಯಲು ರೈತರನ್ನು ಪ್ರೇರೇಪಿಸುವುದು, ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದು ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಈ ಬೆಳೆಗಳನ್ನು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಬೆಳೆಯುವಂತೆ ರೈತರಲ್ಲಿ ಉತ್ತೇಜನ ನೀಡುತ್ತಿದೆ.

ಒಂದು ಕಾಲದಲ್ಲಿ ನಂಜನಗೂಡು ಭಾಗದಲ್ಲಿ ಬೆಳೆಯುತ್ತಿದ್ದ ರಸಬಾಳೆಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಹಣ್ಣುಗಳು ಕೂಡ ಸವಿಯಾಗಿ, ರುಚಿಕರವಾಗಿದ್ದವು. ರೈತರು ಇವುಗಳನ್ನು ಬೆಳೆಯುತ್ತಿದ್ದರು. ರೋಗಬಾಧೆಗಳಿರಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದನ್ನು ಬೆಳೆಯುವುದು ಕಷ್ಟವಾಗುತ್ತಿದ್ದು, ರೈತರು ಬೆಳೆದರೂ ಹಣ್ಣುಗಳ ತಿರುಳುಗಳಲ್ಲಿ ಗಂಟುಗಳು ಕಾಣಿಸುತ್ತಿದ್ದು, ರುಚಿಯೂ ಮೊದಲಿನಂತೆ ಬರುತ್ತಿಲ್ಲ. ಇದೆಲ್ಲ ಸಮಸ್ಯೆಗಳಿಂದ ತೊಂದರೆ ಅನುಭವಿಸಿದ ಕೆಲವು ರೈತರು ರಸಬಾಳೆ ಬೆಳೆಯಲು ಹಿಂದೇಟು ಹಾಕಲಾರಂಭಿಸಿದರು. ಸದ್ಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಭಾಗದಲ್ಲಿ 15 ಎಕರೆ ಜಾಗದಲ್ಲಿ 10 ರೈತರು ರಸಬಾಳೆ ಬೆಳೆಯುತ್ತಿದ್ದಾರೆ.
ಮೈಸೂರು ಮಲ್ಲಿಗೆ ಬಳೆಯಲು ಪ್ರೋತ್ಸಾಹ
ಇಷ್ಟಕ್ಕೂ ರಸಬಾಳೆ ಎಲ್ಲ ಮಣ್ಣಿನಲ್ಲಿ ಬೆಳೆದರೆ ಅದಕ್ಕೆ ಅದರದ್ದೇ ಆದ ರುಚಿ ಇರುವುದಿಲ್ಲ. ಅದು ಕಪ್ಪು ಮೆಕ್ಕಲು ಅಥವಾ ಲವಣಯುಕ್ತ ಮಣ್ಣಿನಲ್ಲಿ ಬೆಳೆದರೆ ಮೂಲಗುಣವನ್ನು ಹೊಂದಿರುತ್ತದೆ. ಇದನ್ನರಿತು ಈ ಭಾಗದ 5 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಇಲಾಖೆಯು ನಂಜನಗೂಡು ರಸಬಾಳೆ ಬೆಳೆಸುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ 20 ರೈತರಿಗೆ ತಲಾ 500 ರಸಬಾಳೆಯ ಗಿಡಗಳನ್ನು ವಿತರಣೆ ಮಾಡುವುದರೊಂದಿಗೆ ಬಾಳೆ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರು ರಸಬಾಳೆ ಬೆಳೆಯುವ ಮನಸ್ಸು ಮಾಡಿ ಶ್ರಮಪಟ್ಟು ಬೆಳೆದರೆ ರಸಬಾಳೆಯ ವೈಭವವನ್ನು ಮರಳಿ ಪಡೆಯಬಹುದು.

ಇನ್ನೊಂದು ಬೆಳೆಯಾದ ಮೈಸೂರು ಮಲ್ಲಿಗೆ ಕೂಡ ನಿಧಾನವಾಗಿ ರೈತರಿಂದ ಕೈತಪ್ಪಿ ಹೋಗುತ್ತಿದೆ. ಇದರ ಉಳಿವಿಗೆ ಕೂಡ ಗಮನಹರಿಸಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮೈಸೂರು ತಾಲೂಕಿನ ಇಲವಾಲದ ಸಮೀಪದಲ್ಲಿ ಮಾತ್ರ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದಾರೆ. ಆದರೆ, ಮಲ್ಲಿಗೆ ತಳಿ ಬಿತ್ತನೆ ದುಬಾರಿಯಾಗಿದೆ.
ಬೆಳೆ ನಿರ್ವಹಣೆಗೂ ಹೆಚ್ಚು ಹಣ ಖರ್ಚಾಗುತ್ತದೆ. ಇದರಿಂದ ರೈತರು ಮೈಸೂರು ಮಲ್ಲಿಗೆ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದು, ಕೇವಲ ಒಂದು ಎಕರೆ ಪ್ರದೇಶದಲ್ಲಿ ಒಬ್ಬ ರೈತ, ಅಲ್ಲದೆ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಬಳಿ ನಾಲ್ಕು ಎಕರೆ ಜಾಗದಲ್ಲಿ ರೈತರು ಮೈಸೂರು ಮಲ್ಲಿಗೆ ಬೆಳೆಸಲಾಗುತ್ತಿದ್ದಾರೆ. ಮಲ್ಲಿಗೆ ಕೃಷಿಯ ಉತ್ತೇಜನದ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಹದಿನೈದು ರೈತರಿಗೆ ಮಲ್ಲಿಗೆ ಗಿಡಗಳನ್ನು ನೀಡಿ ಕೃಷಿಗೆ ಪ್ರೋತ್ಸಾಹಿಸಿದೆ.
ವಿಶೇಷ ಗುಣದ ಮೈಸೂರು ವೀಳ್ಯದೆಲೆ
ಇದೆರಡು ಬೆಳೆಯ ಜತೆಗೆ ಮೈಸೂರು ವೀಳ್ಯದೆಲೆಯ ಕಥೆಯೂ ಭಿನ್ನವಾಗಿಲ್ಲ. ಮೈಸೂರು ವಾತಾರವಣಲ್ಲಿ ಬೆಳೆಯುವ ಮೈಸೂರು ವೀಳ್ಯದೆಲೆ ಇತರೆಡೆಯ ವೀಳ್ಯದೆಲೆಗಿಂತ ರುಚಿಯಲ್ಲಿ ವಿಭಿನ್ನವಾಗಿವೆ. ಮೈಸೂರು ಅರಸರ ಕಾಲದಿಂದಲೂ ವೀಳ್ಯದೆಲೆಗೆ ಮಹತ್ವ ನೀಡಲಾಗಿದೆ. ವೀಳ್ಯದೆಲೆ ತೋಟವನ್ನು ನಿರ್ಮಿಸಲು ಪ್ರೋತ್ಸಾಹ ನೀಡಿದ್ದರು. ಇವತ್ತು ವೀಳ್ಯದೆಲೆ ಬೆಳೆಯಲು ನೀರು, ಭೂಮಿ ಎಲ್ಲವೂ ಇದೆ. ಆದರೆ, ಬೆಲೆ ಮತ್ತು ಮಾರುಕಟ್ಟೆ ಸಮಸ್ಯೆಯಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.
ಇದೀಗ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಉದ್ಬೂರು ಗ್ರಾಮದಲ್ಲಿ ವೀಳ್ಯದೆಲೆ ಮಾರುಕಟ್ಟೆ ಇದ್ದು, ಪ್ರತಿ ದಿನ ಸಂಜೆ ವ್ಯಾಪಾರ ನಡೆಯುತ್ತದೆ. ಮೈಸೂರು ವಿಳ್ಯದೆಲೆ ತನ್ನ ವಿಶಿಷ್ಟ ರುಚಿಯಿಂದಾಗಿ ರಾಜ್ಯದೆಡೆ ಹೆಸರು ಪಡೆದಿದೆ. ನಗರೀಕರಣದ ಪರಿಣಾಮ ಮೈಸೂರಿನಲ್ಲಿ ವೀಳ್ಯದೆಲೆ ಬೆಳೆಯಲು ಜಾಗದ ಕೊರತೆ ಉಂಟಾಗಿದೆ. ಇದೆಲ್ಲ ಸಮಸ್ಯೆಗಳನ್ನು ಬಗೆಹರಿಸಿ ವೀಳ್ಯದೆಲೆ ಬೆಳೆಯಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲ್ಲಿ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ದೊರೆಯುವಂತಾದರೆ ರೈತರು ಅವುಗಳತ್ತ ಆಸಕ್ತಿ ವಹಿಸಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
-
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications