ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಪ್ಲಾಸ್ಟಿಕ್ ಚೀಲ ಹಾಕಿಕೊಂಡು ಬಾಳೆಹಣ್ಣು ತಿಂದ ಮಹಿಳೆ

|
Google Oneindia Kannada News

ಜನರ ವಿಚಿತ್ರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಕೆಲವರು ಹೀಗೂ ಪ್ರಯಾಣಿಸುತ್ತಾರೆ ಎನ್ನುವುದಕ್ಕೆ ಈ ಫೋಟೋಗಳೇ ಸಾಕ್ಷಿ. ಅಷ್ಟಕ್ಕು ಆಗಿದ್ದೇನು ಗೊತ್ತಾ. ರೈಲಿನಲ್ಲಿ ಮಹಿಳೆಯೊಬ್ಬರು ವಿಚಿತ್ರವಾಗಿ ಪ್ರಯಾಣ ಮಾಡಿದ್ದಾರೆ. ಮಹಿಳೆಯೊಬ್ಬರು ಪ್ಲಾಸ್ಟಿಕ್ ಚೀಲವನ್ನು ಮೈತುಂಬಾ ಹಾಕಿಕೊಂಡು ಪ್ರಯಾಣಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ಇಷ್ಟು ಮಾತ್ರವಲ್ಲದೆ ಮಹಿಳೆ ಮೈ ಮೇಲೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಮತ್ತೊಂದು ಕೆಲಸ ಮಾಡಿದ್ದಾರೆ.

ಈ ಮಹಿಳೆ ಸದ್ದಿಲ್ಲದೆ ಪ್ಲಾಸ್ಟಿಕ್ ಚೀಲದಲ್ಲಿ ಬಾಳೆಹಣ್ಣು ತಿಂದಿದ್ದಾಳೆ. ರೈಲಿನಲ್ಲಿ ಕುಳಿತಿದ್ದ ಇತರ ಪ್ರಯಾಣಿಕರು ಮಹಿಳೆಯ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಇದನ್ನು ನೋಡಿದ ಜನ ಮಹಿಳೆಯ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಜನರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಈ ಘಟನೆ ಚೀನಾದಲ್ಲಿ ನಡೆದಿದೆ. 'ಡೈಲಿ ಸ್ಟಾರ್' ಸುದ್ದಿ ಪ್ರಕಾರ, ಇಲ್ಲಿ ವಾಂಗ್ ಎಂಬ ವ್ಯಕ್ತಿ ರೈಲಿನೊಳಗೆ ದೊಡ್ಡ ಪ್ಲಾಸ್ಟಿಕ್ ಚೀಲವನ್ನು ಧರಿಸಿದ್ದ ಮಹಿಳೆಯನ್ನು ನೋಡಿದ್ದಾನೆ. ಮಹಿಳೆಯನ್ನು ಈ ರೀತಿ ನೋಡಿದ ವ್ಯಕ್ತಿ ಸಾಕಷ್ಟು ಆಶ್ಚರ್ಯಚಕಿತನಾದನು. ಮಹಿಳೆ ಪ್ಲಾಸ್ಟಿಕ್ ಚೀಲವನ್ನು ಧರಿಸಿ ಬಾಳೆಹಣ್ಣು ತಿನ್ನುತ್ತಿರುವುದನ್ನು ವಿಡಿಯೋ ಮಾಡಿದ್ದಾನೆ. ಶೀಘ್ರದಲ್ಲೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿತು.

Woman sitting in train wearing plastic bag, suddenly started eating banana

ರೈಲಿನಲ್ಲಿ ಕುಳಿತಿದ್ದ ಮಹಿಳೆಯನ್ನು ನೋಡಿದ ಜನ ಹೇಳಿದ್ದೇನು?

ವಿಡಿಯೋ ನೋಡಿದ ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ರೈಲಿನಲ್ಲಿ ಏನನ್ನೂ ತಿನ್ನುವುದು ಕಾನೂನುಬಾಹಿರ. ಹೀಗಾಗಿ ಮಹಿಳೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಕಾಣದಂತೆ ಬಾಳೆಹಣ್ಣು ತಿಂದಿದ್ದಾಳೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಈ ಮಹಿಳೆಗೆ ವಿಪರೀತ ಹಸಿವಾಗಿರಬಹುದು ಹೀಗಾಗಿ ಕಲವರ್ ಹಾಕಿಕೊಂಡು ಬಾಳೆಹಣ್ಣು ತಿಂದಿದ್ದಾರೆ.

'ಚೀನಾದಲ್ಲಿ ಕೊರೊನಾ ಹರಡುತ್ತಿದೆ'

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನೊಂದಿಗೆ ಮಾತನಾಡುತ್ತಾ, ವಾಂಗ್ ಎಂಬ ವ್ಯಕ್ತಿ ಇಡೀ ವುಹಾನ್‌ನಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ಹೇಳಿದರು. ಆದರೆ ನನ್ನ ಅಭಿಪ್ರಾಯದಲ್ಲಿ ಮಹಿಳೆ ತನ್ನನ್ನು ಈ ರೀತಿ ರಕ್ಷಿಸಿಕೊಂಡಿರಬಹುದು ಎಂದಿದ್ದಾರೆ.

Woman sitting in train wearing plastic bag, suddenly started eating banana

ವಿಡಿಯೋ ನೋಡಿದ ಜನರು ಪ್ರತಿಕ್ರಿಯೆ

ಮಹಿಳೆಯ ಈ ವಿಚಿತ್ರ ವರ್ತನೆಯ ವಿಡಿಯೋವನ್ನು 7000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಮಹಿಳೆಯ ನಡವಳಿಕೆಯನ್ನು ವಿಚಿತ್ರ ಎಂದು ವಿವರಿಸಿದ್ದಾರೆ.

ಅನೇಕ ಜನರು ಮಹಿಳೆಗೆ ಬೆಂಬಲ ನೀಡಿದ್ದಾರೆ. ಮಹಿಳೆ ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೂ ಪ್ಲಾಸ್ಟಿಕ್ ಕವರ್ ಹಾಕಿರಬಹುದು ಎಂದಿದ್ದಾರೆ. ಚೀನಾದಲ್ಲಿ ಕೊರೊನಾ ಆಗಾಗ ಹೆಚ್ಚಾಗುತ್ತಲೇ ಇರುತ್ತದೆ. ಇದರ ಪರಿಣಾಮ ಜಾಗೃತಿ ಮೂಡಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

English summary
Woman sitting in train wearing plastic bag, suddenly started eating banana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X