ಡಿಕೆಶಿ ಸಂಪುಟದ ಸಂಭಾವ್ಯ ಸಚಿವರಿವರು: ಯತೀಂದ್ರ, ಜಾರ್ಜ್ ಸೇರಿ 13 ಮಂದಿಯ ಹೆಸರು ಇಲ್ಲಿದೆ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜೂನ್ 3) ಮಧ್ಯಾಹ್ನ 04:05 ಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ವಿಧಿಗಳು ನೆರವೇರಲಿವೆ. ಡಿಕೆಶಿ ಸಂಪುಟದಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ ಸಚಿವರ ಪಟ್ಟಿ 'ಒನ್ ಇಂಡಿಯಾ ಕನ್ನಡ' ಜಾಲತಾಣಕ್ಕೆ ಲಭ್ಯವಾಗಿದೆ. ಕೊನೆಯ ಕ್ಷಣದ ಬದಲಾವಣೆಗಳ ಹೊರತಾಗಿ ಈ 13 ಮಂದಿ ಇಂದು ಸಚಿವರಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಡಿಕೆ ಶಿವಕುಮಾರ್ ಅವರೊಂದಿಗೆ ಎಷ್ಟು ಮಂದಿ ಸಚಿವರು ಅಧಿಕಾರ ಸ್ವೀಕರಿಸುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಈ ಕೆಳಗಿನ 13ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಹೆಸರು ಸಹಿತ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದೆ.

13 ನೂತನ ಸಚಿವರು ಯಾರು ಯಾರು?
1. ಡಾ. ಜಿ. ಪರಮೇಶ್ವರ
2. ಕೆ.ಎಚ್. ಮುನಿಯಪ್ಪ
3. ಕೆ.ಜೆ. ಜಾರ್ಜ್
4. ಎಂ.ಬಿ. ಪಾಟೀಲ್
5. ರಾಮಲಿಂಗಾ ರೆಡ್ಡಿ,
6. ಸತೀಶ್ ಜಾರಕಿಹೊಳಿ
7. ಕೃಷ್ಣ ಬೈರೇಗೌಡ
8. ಪ್ರಿಯಾಂಕ್ ಖರ್ಗೆ
9. ಯು.ಟಿ. ಖಾದರ್
10. ಈಶ್ವರ ಖಂಡ್ರೆ
11. ಯತೀಂದ್ರ ಸಿದ್ದರಾಮಯ್ಯ
12. ಬೈರತಿ ಸುರೇಶ್
13. ಶರಣ ಪ್ರಕಾಶ ಪಾಟೀಲ್
ಸಮುದಾಯವಾರು ನಾಯಕರಿಗೆ ಮಣೆ, ಹೈಕಮಾಂಡ್ ಜಾಣ ನಡೆ
ಮೊದಲ ಪಟ್ಟಿಯಲ್ಲಿ ಹೈಕಮಾಂಡ್ ಎಲ್ಲ ಸಮುದಾಯದವರ ವಿಶ್ವಾಸ ಗಳಿಸಲು ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಒಕ್ಕಲಿಗ ಸಮುದಾಯದ ಇಬ್ಬರಾದ ಡಿಕೆ ಶಿವಕುಮಾರ್ (ಕನಕಪುರ ಕ್ಷೇತ್ರ) ಮತ್ತು ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ ಕ್ಷೇತ್ರ), 3 ದಲಿತರಿಗೆ ಸ್ಥಾನ ಸಿಕ್ಕಿದ್ದು ಅದರಲ್ಲಿ ಡಾ.ಜಿ.ಪರಮೇಶ್ವರ (ಕೊರಟಗೆರೆ ಕ್ಷೇತ್ರ), ಕೆ.ಎಚ್ ಮುನಿಯಪ್ಪ (ದೇವನಹಳ್ಳಿ ಕ್ಷೇತ್ರ) ಮತ್ತು ಸತೀಶ್ ಜಾರಕಿಹೊಳಿ (ಯಮಕನಮರಡಿ ಕ್ಷೇತ್ರ), ಲಿಂಗಾಯತ ಮೂವರು ನಾಯಕರಾದ ಎಂಬಿ ಪಾಟೀಲ್ (ವಿಜಯಪುರ ಕ್ಷೇತ್ರ), ಈಶ್ವರ್ ಖಂಡ್ರೆ (ಬಾಲ್ಕಿ) ಮತ್ತು ಶರಣ ಪ್ರಕಾಶ್ ಪಾಟೀಲ್ (ಸೇಡಂ), ರಾಮಲಿಂಗಾ ರೆಡ್ಡಿ (ಬಿಟಿಎಂ ಬಡಾವಣೆ) ಅವರು ರೆಡ್ಡಿ ಸಮುದಾಯ ಹಾಗೂ ಅಲ್ಪಸಂಖ್ಯಾತರಲ್ಲಿ ಕೆಜೆ ಜಾರ್ಜ್ (ಸರ್ವಜ್ಞನಗರ ಕ್ಷೇತ್ರ), ಯುಟಿ ಖಾದರ್ (ಮಂಗಳೂರು ಕ್ಷೇತ್ರ) ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಹೈಕಮಾಂಡ್ ಜಾಣ ನಡೆ ಪ್ರದರ್ಶಿಸಿದೆ.
ಮೊದಲ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಸಚಿವ ಸ್ಥಾನ
ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಮೊದಲ 13ಮಂದಿ ಸಚಿವರ ಪಟ್ಟಿಯಲ್ಲಿ ಯಾರೊಬ್ಬರ ಮಹಿಳಾ ಶಾಸಕರಿಯರಿಗೆ ಅವಕಾಶ ಸಿಕ್ಕಿಲ್ಲ. ಮುಂದಿನ ಎರಡನೇ ಹಂತದಲ್ಲಿ ಮಹಿಳಾ ನಾಯಕರಿಗೆ ಸಚಿವ ಸ್ಥಾನ ಸಿಕ್ಕರೂ ಸಿಗಬಹುದಾಗಿದೆ.












Click it and Unblock the Notifications