ನಾವು ಯಾರಿಗೂ ಕಮ್ಮಿ ಇಲ್ಲ ಅಂದ್ರು ಯಶ್-ರಾಧಿಕಾ; ಸೆಲೆಬ್ರಿಟಿಗಳ ಫೇವರೆಟ್ ಜಾಗದಲ್ಲೇ ದುಬಾರಿ ಆಸ್ತಿ ಖರೀದಿಸಿದ ದಂಪತಿ

"ಕೆಜಿಎಫ್‌" ಸಿನಿಮಾದಲ್ಲಿ ನಟ ಯಶ್‌ ಅವರು ಚಿನ್ನದ ಖಜಾನೆಯ ಒಡೆಯನಾಗಿದ್ದು ಗೊತ್ತೇ ಇದೆ. ಈಗ ನಿಜ ಜೀವನದಲ್ಲಿಯೂ ರಾಕಿಭಾಯ್‌ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ಸದ್ಯ ಟಾಕ್ಸಿಕ್‌ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್, ಎಲ್ಲರ ಹುಬ್ಬೇರಿಸುವ ಕೆಲಸವೊಂದನ್ನು ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ತಾರಾ ದಂಪತಿಯಾಗಿರುವ ಯಶ್ ಮತ್ತು ರಾಧಿಕಾ ಪಂಡಿತ್ ಕರ್ನಾಟಕದಲ್ಲಿ ಮಾತ್ರವಲ್ಲದೆ, ಈಗ ಹೊರರಾಜ್ಯದ ಪ್ರಸಿದ್ಧ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಖರೀದಿಸಿದ್ದಾರೆ.

ಹೌದು, ಬಾಲಿವುಡ್‌ನ ಘಟಾನುಘಟಿ ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಮುಂಬೈ ಸನಿಹದ ಕರಾವಳಿ ಪಟ್ಟಣ ಅಲಿಬಾಗ್‌ನಲ್ಲಿ (Alibaug) ಈ ಜೋಡಿ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಂತ ಐಷಾರಾಮಿ ಸಮುದ್ರ ತೀರದ (Beachfront) ಆಸ್ತಿಯೊಂದನ್ನು ಖರೀದಿ ಮಾಡಿದೆ. ಈ ಹೂಡಿಕೆಯ ಅಧಿಕೃತ ನೋಂದಣಿ ಪ್ರಕ್ರಿಯೆಯು ಮೇ 18ರಂದೇ ಅಲಿಬಾಗ್‌ನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.

Yash

ಈ ಜಾಗದ ವಿಶೇಷತೆ ಏನು?

ಯಶ್ ಮತ್ತು ರಾಧಿಕಾ ಅವರು ರಾಯಗಢ ಜಿಲ್ಲೆಯ ಅಲಿಬಾಗ್ ತಾಲೂಕಿನ 'ಕಾಮತ್' ಗ್ರಾಮದಲ್ಲಿ ಪಕ್ಕಪಕ್ಕದಲ್ಲಿರುವ ಎರಡು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಪ್ರೀಮಿಯಂ ಆಸ್ತಿಯ ಒಟ್ಟು ವಿಸ್ತೀರ್ಣ ಸುಮಾರು 5,289 ಚದರ ಮೀಟರ್‌ಗಳಷ್ಟಿದೆ (ಅರ್ಧ ಹೆಕ್ಟೇರ್‌ಗೂ ಅಧಿಕ). ಪ್ರಸಿದ್ಧ 'ಕಿಹಿಮ್ ಬೀಚ್' ಪ್ರದೇಶಕ್ಕೆ ಅತ್ಯಂತ ಹತ್ತಿರದಲ್ಲಿರುವ ಈ ಜಾಗವು ನೇರವಾಗಿ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿಕೊಂಡಿದ್ದು, ಒಂದು ಬದಿಗೆ ಹಳ್ಳಿಯ ರಸ್ತೆ ಹಾಗೂ ಮತ್ತೊಂದು ಬದಿಗೆ ನೇರವಾಗಿ ಬೀಚ್‌ಗೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ಗಲ್ಲಿಯನ್ನು ಹೊಂದಿದೆ. ಈ ಬೃಹತ್ ಜಾಗದೊಂದಿಗೆ ಒಂದು ವಸತಿ ಕಟ್ಟಡವೂ ಸಹ ಈ ಡೀಲ್‌ನಲ್ಲಿ ಸೇರಿದೆ ಎಂದು ತಿಳಿದುಬಂದಿದೆ.

₹24 ಕೋಟಿಗೆ ಆಸ್ತಿ ಖರೀದಿ

ಈ ಬಿಗ್ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಯಶ್ ದಂಪತಿ ಭಾರಿ ಮೊತ್ತದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. ಲಭ್ಯವಿರುವ ದಾಖಲೆಗಳ ಪ್ರಕಾರ, ₹24 ಕೋಟಿ ಮೌಲ್ಯದ ಈ ಜಾಗದ ನೋಂದಣಿಗಾಗಿ ಬರೋಬ್ಬರಿ ₹1.44 ಕೋಟಿಗೂ ಅಧಿಕ ಮುದ್ರೆ ಶುಲ್ಕ (Stamp Duty) ಹಾಗೂ ಅಗತ್ಯವಿರುವ ನೋಂದಣಿ ಮತ್ತು ದಾಖಲೆ ನಿರ್ವಹಣಾ ಶುಲ್ಕಗಳನ್ನು ಪಾವತಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲಿಬಾಗ್ ಪ್ರದೇಶವು ಸ್ಟಾರ್ ಸೆಲೆಬ್ರಿಟಿಗಳು ಹಾಗೂ ದೊಡ್ಡ ಉದ್ಯಮಿಗಳ ಹೂಡಿಕೆಯ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಈಗ ರಾಕಿಂಗ್ ದಂಪತಿಯೂ ಇಲ್ಲಿ ಭದ್ರವಾಗಿ ಹೆಜ್ಜೆ ಇಟ್ಟಿದ್ದಾರೆ.

ನನ್ನ ಗರ್ಭಪಾತಕ್ಕೆ ಸಿಎಂ ವಿಜಯ್ ಅವರೇ ಕಾರಣ, ಮೊದಲ ಮಗು ಬದುಕಲು ಅವಕಾವಿತ್ತು: ಕಣ್ಣೀರಿಟ್ಟ ಖ್ಯಾತ ನಟಿ
ನನ್ನ ಗರ್ಭಪಾತಕ್ಕೆ ಸಿಎಂ ವಿಜಯ್ ಅವರೇ ಕಾರಣ, ಮೊದಲ ಮಗು ಬದುಕಲು ಅವಕಾವಿತ್ತು: ಕಣ್ಣೀರಿಟ್ಟ ಖ್ಯಾತ ನಟಿ

ಅಲಿಬಾಗ್ ಕೇವಲ ಪ್ರವಾಸಿ ತಾಣವಲ್ಲ, ಬದಲಿಗೆ ಇದು ಮುಂಬೈನ ಅತ್ಯಂತ ಐಷಾರಾಮಿ ಬಿಲಿಯನೇರ್ಸ್‌ಗಳ ನೆಚ್ಚಿನ ಜಾಗವೂ ಎನಿಸಿಕೊಂಡಿದೆ. ಯಶ್ ದಂಪತಿ ಜಾಗ ಖರೀದಿಸಿರುವ ಕಿಹಿಮ್ ಬೀಚ್ ಪರಿಸರದಲ್ಲೇ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹಾಗೂ ಪ್ರಮುಖ ಉದ್ಯಮಿಗಳಾದ ರತನ್ ಟಾಟಾ ಮತ್ತು ಗೋಯೆಂಕಾ ಅವರ ಐಷಾರಾಮಿ ಬಂಗಲೆಗಳಿವೆ.

ಇವರೆಲ್ಲ ತಮ್ಮ ಬಿಡುವಿನ ಸಮಯ ಕಳೆಯಲು ಇಲ್ಲಿ ಆಸ್ತಿಗಳನ್ನು ಖರೀದಿಸಿದ್ದು, ಈ ಸಾಲಿಗೆ ರಾಕಿಂಗ್‌ ಜೋಡಿಯೂ ಸೇರಿಕೊಂಡಿದೆ. ಮುಂಬೈನಿಂದ ಅಲಿಬಾಗ್‌ಗೆ ಕೇವಲ ರಸ್ತೆ ಮಾರ್ಗ ಮಾತ್ರವಲ್ಲದೆ, ದೋಣಿ ಸೇವೆ ಮತ್ತು ಸ್ಪೀಡ್ ಬೋಟ್‌ಗಳ ಸೌಲಭ್ಯವಿದೆ. ಇದರಿಂದಾಗಿ ಮುಂಬೈನ ಮುಖ್ಯ ಭೂಭಾಗದಿಂದ ಕೇವಲ 45 ನಿಮಿಷಗಳಲ್ಲಿ ಅಲಿಬಾಗ್ ತಲುಪಬಹುದು. ಮುಂಬೈನಲ್ಲಿ ಶೂಟಿಂಗ್ ಮುಗಿಸಿ ವೀಕೆಂಡ್ ಕಳೆಯಲು ಇದು ಸೆಲೆಬ್ರಿಟಿಗಳಿಗೆ ಅತ್ಯಂತ ಸುಲಭದ ದಾರಿಯಾಗಿದೆ.

Yash

ಯಶ್‌ ಆಸ್ತಿ ವಿವರ

ಸದ್ಯ ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್‌ಶೈರ್‌ನಲ್ಲಿರುವ ಐಷಾರಾಮಿ ಡ್ಯುಪ್ಲೆಕ್ಸ್ ಮನೆ ಹಾಗೂ ಹಾಸನದಲ್ಲಿರುವ ಫಾರ್ಮ್‌ಹೌಸ್ ಹೊರತುಪಡಿಸಿದರೆ, ಮುಂಬೈನ ಕನೆಕ್ಟಿವಿಟಿ ಹೊಂದಿರುವ ಈ ಅಲಿಬಾಗ್ ಆಸ್ತಿ ಅವರ ರಜಾದಿನಗಳ ಪ್ರಮುಖ ತಾಣವಾಗುವ ಸಾಧ್ಯತೆಯಿದೆ. ವೃತ್ತಿ ಬದುಕಿನ ವಿಚಾರಕ್ಕೆ ಬಂದರೆ, ಯಶ್ ಸದ್ಯ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಗಳಾದ 'ಟಾಕ್ಸಿಕ್' (Toxic) ಮತ್ತು ರಣಬೀರ್ ಕಪೂರ್ ಜೊತೆಗಿನ 'ರಾಮಾಯಣ' (Ramayana) ಸಿನಿಮಾಗಳ ಬ್ಯುಸಿ ಶೆಡ್ಯೂಲ್‌ನಲ್ಲಿದ್ದಾರೆ. ತಮ್ಮ ಸ್ವಂತ ಬ್ಯಾನರ್ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಅಡಿಯಲ್ಲಿ ಅವರು ಈ ಎರಡೂ ಚಿತ್ರಗಳನ್ನು ಸಹ-ನಿರ್ಮಾಣ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+