Get Updates
Get notified of breaking news, exclusive insights, and must-see stories!

ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್‌

ಇತ್ತೀಚಿನ ದಿನಗಳಲ್ಲಿ ರೈತರಿಗೆ ಕನ್ಯಾ ಕೊಡಲು ಮುಂದೆ ಬರುವವರೇ ಕಡಿಮೆ ಆಗಿದ್ದು, ಇದು ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಹಾಗೆಯೇ ಚಿಮ್ಮನಹಳ್ಳಿ ನಡೆದ ದುರ್ಗಾಂಬಿಕೆ ರಥೋತ್ಸವದಲ್ಲಿ ಯುವ ರೈತನೊಬ್ಬ ಬಾಳೆಹಣ್ಣನ ಮೇಲೆ "ರೈತರಿಗೆ ಕನ್ಯೆ ಕೊಡಲಿ" ಎಂದರು

ಬಳ್ಳಾರಿ, ಫೆಬ್ರವರಿ, 02: ಇತ್ತೀಚಿನ ದಿನಗಳಲ್ಲಿ ರೈತರಿಗೆ ಕನ್ಯಾ ಕೊಡಲು ಮುಂದೆ ಬರುವವರೇ ಕಡಿಮೆ ಆಗಿದ್ದು, ಇದು ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ ಬಾಳೆಹಣ್ಣನ ಮೇಲೆ "ರೈತರಿಗೆ ಕನ್ಯೆ ಕೊಡಲಿ" ಎಂದು ಬರೆದು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ಹರಕೆ ತೀರಿಸಿದ್ದಾನೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ ಬುಧವಾರ ಸಂಜೆ (ಫೆಬ್ರವರಿ 02) ಜರುಗಿದೆ‌. ಈ ರಥೋತ್ಸವದಲ್ಲಿ, ಓರ್ವ ಯುವ ರೈತ "ರೈತರಿಗೆ ಕನ್ಯೆ ಕೊಡಲಿ"ಎಂದು ಬಾಳೆಹಣ್ಣಿನ ಮೇಲೆ ಬರೆದು ಹರಕೆ ತೀರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. "ಬಹುಸಂಖ್ಯಾ ಹೆಣ್ಣೆತ್ತವರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ನಮನ," ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಭಕ್ತರ ಕೋರಿಕೆ ಪತ್ರಗಳು ವೈರಲ್‌

ಇನ್ನು ದೇವರಿಗೆ ನಾನಾ ಬಗೆಯ ಕೋರಿಕೆಗಳು, ಪ್ರಾರ್ಥನೆಗಳು ಸಲ್ಲಿಸಿರುವುದು, ಬೇಡಿಕೆ ಪತ್ರಗಳನ್ನು ನೀಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಚಾಮರಾಜನಗರ ಭಕ್ತನೊಬ್ಬ ಒಂದು ಕುಟುಂಬ ಸರ್ವನಾಶ ಆಗಲೇ ಬೇಕು ಎನ್ನುವ ವಿಚಿತ್ರ ಹಾಗೂ ಆಘಾತಕಾರಿ ಬೇಡಿಕೆಯನ್ನು ಇತ್ತೀಚೆಗಷ್ಟೇ ದೇವರಿಗೆ ಸಲ್ಲಿಸಿದ್ದ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀನಾರಾಯಣ ದೇವಾಲಯದ ಹುಂಡಿ ಎಣಿಕೆಯು ಮಂಗಳವಾರ ನಡೆದಿದ್ದು, ಈ ವೇಳೆ ಭಕ್ತರ ಕೋರಿಕೆ ಪತ್ರಗಳು ಸಿಕ್ಕಿತ್ತು. ಅದರಲ್ಲಿ, ಬಳ್ಳಾರಿ ಜಿಲ್ಲೆ ನಮೂದಿಸಿರುವ ಭಕ್ತನೋರ್ವ "ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಕಾರಿ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಬೇಕು, ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು, ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು, ಇವರೆಲ್ಲರೂ ಒಂದು ವರ್ಷದ ಒಳಗೆ ಸಾಯಬೇಕು ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿತ್ತು.

Chimmanahalli: Give bride to farmers, change peoples minds, viral

ಇನ್ನು ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಹೋಗಿದ್ದರು. ಈ‌ ರೀತಿ ದೇವರಿಗೆ ಸಲ್ಲಿಸುವ ಬೇಡಿಕೆ ಇರುತ್ತವೆಯೇ..? ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ..? ಎಂದು ಹೌಹಾರಿದ್ದರು. ಇನ್ನು ಲಕ್ಷ್ಮೀನಾರಾಯಣ ದೇವಾಲಯದ ಹುಂಡಿಯಲ್ಲಿ ಮತ್ತೊಂದು ಪತ್ರ ಸಿಕ್ಕಿತ್ತು. ಹುಂಡಿಯಲ್ಲಿ ಒಂದು ಅಂತರ ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿತ್ತು. ಅದರಲ್ಲಿ, ಯುವತಿಯೊಬ್ಬಳು ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು. ನಾನು ಹಿಂದೂ ಅವನು ಮುಸ್ಲಿಂ ಆದರೆ ನಾನು ತಪ್ಪು ಮಾಡುತ್ತಿಲ್ಲ. ನನಗೆ ಅವನಿಷ್ಟ ಅವನಿಗೆ ನಾನು ಇಷ್ಟ. ನನ್ನ ಜೀವನವೇ ಅವನು, ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳೊಮ್ಮೆ ನಿನ್ನ ಸನ್ನಿಧಿಗೆ ಬರುವೆ ಎಂದು ಯುವತಿ ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+