ಸಾವಯವ ಕೃಷಿಯಲ್ಲಿ ಖುಷಿಕಂಡ ಮಸ್ಕಿ ತಾಲೂಕಿನ ಅಮೀನಗಡ ಸಹೋದರರು
ರಾಯಚೂರು, ಅಕ್ಟೋಬರ್, 03: ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದ ಗಂಗಪ್ಪ ಕಾರಟಗಿ ಮತ್ತು ಹನುಮಂತ ಕಾರಟಗಿ ಎಂಬ ರೈತ ಸಹೋದರರಿಬ್ಬರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ನಿತ್ಯ ಆದಾಯದ ಮೂಲ ಕಂಡುಕೊಂಡಿದ್ದಾರೆ. ಅವರು ಬೆಳೆದ ರಾಸಾಯನಿಕ ರಹಿತ ಬಾಳೆ ಹಣ್ಣಿಗೆ ಇದೀಗ ಬೇಡಿಕೆಯೂ ಹೆಚ್ಚಿದೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಕೊಳವೆ ಬಾವಿ, ಕೃಷಿ ಹೊಂಡದ ಜೊತೆ ಸಂಪೂರ್ಣ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಜಮೀನಿನ ಬದುವಿಗೆ 500ಕ್ಕೂ ಹೆಚ್ಚಿನ ಹೆಬ್ಬೇವು, ನಿಂಬೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಕೆಂಪು ಕಬ್ಬು, ಬಾಳೆ, ಪೇರಲ, ಸೀತಾಫಲ, ಅಂಜೂರ, ಚಿಕ್ಕು, ಮಾವು, ತೆಂಗು, ಕರಿಬೇವು, ಮೆಣಸಿನಕಾಯಿ, ಮಹಾಘನಿ, ನುಗ್ಗೆ, ಎಲೆ ಬಳ್ಳಿ, ಸುಗಂಧರಾಜ ಮಲ್ಲಿಗೆ, ಚೆಂಡುಹೂವು ಮತ್ತು ಅರಿಶಿಣ ಬೆಳೆಗಳನ್ನು ಬೆಳೆದಿದ್ದಾರೆ.
'ಬಾಳೆ ನಾಟಿ ಸಂದರ್ಭದಲ್ಲಿ ಕೀಟ ಬಾಧೆ ನಿಯಂತ್ರಣಕ್ಕೆ ಅಲ್ಪ ಪ್ರಮಾಣದ ರಾಸಾಯನಿಕ ಬಳಸಿದ್ದೆವು. ಇದನ್ನು ಹೊರತುಪಡಿಸಿ ಇದುವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕವನ್ನು ಬಳಸಿಲ್ಲ. ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಜೀವಾಮೃತ ಬಳಸುತ್ತೇವೆ' ಎಂದು ರೈತ ಗಂಗಪ್ಪ ಹೇಳಿದರು. ಇನ್ನು ರೈತ ಹನುಮಂತ ಮಾತನಾಡಿ, 'ಪ್ರತಿ ದಿನ 10 ಕೆ.ಜಿ. ಮಲ್ಲಿಗೆ ಹೂವು ಮತ್ತು 20 ಡಜನ್ ಬಾಳೆಹಣ್ಣು ಮಾರಾಟದಿಂದ 2 ಸಾವಿರ ರೂಪಾಯಿ ಆದಾಯ ಬರುತ್ತಿದೆ. ಬಾಳೆ ಹಣ್ಣಿಗೆ ರಾಸಾಯನಿಕ ಬಳಸದ ಕಾರಣ ಸಿಹಿ ಮತ್ತು ರುಚಿಕರವಾಗಿದ್ದು, ಹಣ್ಣಿಗೆ ಬೇಡಿಕೆ ಹೆಚ್ಚಿದೆ' ಎಂದು ಹೇಳಿದರು.

ರೈತ ಗಂಗಪ್ಪನ ಸ್ವಾವಲಂಬಿ ಕೃಷಿ
ಯಂತ್ರಗಳ ಬಳಕೆ ಮತ್ತು ಕುಟುಂಬದ 6 ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೂಲಿ ಕಾರ್ಮಿಕರ ಅಗತ್ಯವಿಲ್ಲ. ಹೀಗಾಗಿ ಖರ್ಚು ಕಡಿಮೆ ಎನ್ನುವುದು ರೈತ ಸಹೋದರರ ಅನಿಸಿಕೆ ಆಗಿದೆ. 'ಮಾರುಕಟ್ಟೆಯಲ್ಲಿನ ಹಣ್ಣಿಗೂ ಇದಕ್ಕೂ ರುಚಿ, ವಾಸನೆ ಮತ್ತು ಸಿಹಿಯಲ್ಲಿ ಬಹಳ ವ್ಯತ್ಯಾಸವಿದೆ' ಎಂದು ಗ್ರಾಹಕ ಅಯ್ಯನಗೌಡ ಅವರು ತಿಳಿಸಿದರು. ರಾಸಾಯನಿಕ ಮುಕ್ತ ಹಣ್ಣುಗಳು ಮತ್ತಿತರ ಮಾಹಿತಿಗೆ ರೈತ ಗಂಗಪ್ಪ ಅವರ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ 97414 57122 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಮಲ್ಲಿಗೆ ಹೂವು ಮತ್ತು ಬಾಳೆ ಹಣ್ಣು ಮಾರಾಟದಿಂದ ನಿಶ್ಚಿತ ಆದಾಯ ಬರುತ್ತಿದೆ. ಆಯಾ ಋತುವಿನಲ್ಲಿ ಬೇಡಿಕೆಗೆ ತಕ್ಕತೆ ಹಣ್ಣುಗಳು ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಪ್ರಗತಿ ಪರ ರೈತ ಗಂಗಪ್ಪ ಕಾರಟಗಿ ಹೇಳಿದರು.

ಬೆಳೆಗಳನ್ನು ಕಳೆದುಕೊಂಡ ರೈತರು ತತ್ತರ
ಈಗಾಗಲೇ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೂರಾರು ಎಕರೆ ಬೆಳೆ ಹಾಳಾಗಿ, ಬೆಳೆಗಳನ್ನು ಕಳೆದುಕೊಂಡ ರೈತರು ರೈತರು ತತ್ತರಿಸಿ ಹೋಗಿದ್ದರು. ಅಲ್ಲದೇ 189 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರವೂ ದೊರೆತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದರು. ಇಷ್ಟೆಲ್ಲ ಅವಘಡಗಳು ಆಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಒಂದು ದಿನವೂ ಭೇಟಿ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದರು.

ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ
ಮಳೆ ಹಾನಿ ವೀಕ್ಷಿಸಲು ರಾಜ್ಯದಲ್ಲಿ ನಾನಾ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೇ ಮಳೆಗಾಲದ ಸಂಕಷ್ಟ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಮಳೆ, ಪರಿಸ್ಥಿತಿಗಳ ನಿರ್ವಹಣೆಗೆ ಸಚಿವರಿಂದ ಯಾವ ಸೂಚನೆಯನ್ನು ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

ಭರವಸೆಯ ಗೂಡಾದ ಅಭಿವೃದ್ಧಿ ಕಾರ್ಯ
ಜಿಲ್ಲೆಯ 7 ತಾಲೂಕುಗಳಲ್ಲಿ ಬೆಳೆದ ಸೂರ್ಯಕಾಂತಿ, ಭತ್ತ, ಹತ್ತಿ, ಮೆಕ್ಕೆಜೋಳ ಬೆಳೆದಿದ್ದು, ಸುರಿದ ಭಾರಿ ಮಳೆಗೆ ಅಂದಾಜು 100 ಹೆಕ್ಟೇರ್‌ಗಿಂತಲೂ ಹೆಚ್ಚು ಹಾನಿ ಸಂಭವಿಸಿತ್ತು. ಆದರೆ ಇದುವರೆಗೆ ಅಧಿಕಾರಿಗಳ ತಂಡ ಭೇಟಿ ನೀಡಿಲ್ಲ. ಸಮೀಕ್ಷೆ ನಡೆಸುತ್ತಿರುವುದಾಗಿ ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದ್ದು, ಯಾವುದೇ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸದಿರುವುದು ನಮ್ಮ ದುರದೃಷ್ಟಕರ ಸಂಗತಿ ಆಗಿದೆ ಎಂದು ರೈತರು ಅಳು ತೋಡಿಕೊಂಡಿದ್ದರು.
ಆದರೆ ಈನಡುವೆಯೇ ಅಮೀನಗಡ ಗ್ರಾಮದ ಗಂಗಪ್ಪ ಕಾರಟಗಿ ಮತ್ತು ಹನುಮಂತ ಕಾರಟಗಿ ಎಂಬ ರೈತ ಸಹೋದರರಿಬ್ಬರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಾ ಇತರರಿಗೂ ಮಾದರಿ ಆಗಿದ್ದಾರೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications