ಹಾವಿಗೂ ಹಣ್ಣಿಗೂ ತಿಳಿಯದ ವ್ಯತ್ಯಾಸ: ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಪ್ರಕೃತಿಯು ತನ್ನ ಸೃಷ್ಟಿಯಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯೂ ವಿಭಿನ್ನವಾಗಿವೆ. ಪ್ರಾಣಿ, ಪಕ್ಷಿ ಹಾಗೂ ಮನುಷ್ಯನಲ್ಲಿ ಭಿನ್ನತೆಯನ್ನು ಹೊಂದಿದೆ. ಉದಾಹರಣೆಗೆ ನಾಯಿಗಳು ನಮಗಿಂತ ಹೆಚ್ಚು ಬಲವಾದ ವಾಸನೆಯನ್ನು ಹೊಂದಿವೆ. ಪರಭಕ್ಷಕ ಪಕ್ಷಿಗಳು ತಮ್ಮ ಬೇಟೆಯನ್ನು ಹೆಚ್ಚು ದೂರದಿಂದ ಗುರುತಿಸುತ್ತವೆ. ಆದರಿದು ಮನುಷ್ಯರಿಗೆ ಅಸಾಧ್ಯವಾಗಿದೆ. ಆದರೆ ಇಲ್ಲೊಂದು ವಿಚಿತ್ರ ಹಾಗೂ ಆಶ್ಚರ್ಯಕರ ದೃಶ್ಯವೊಂದು ವೈರಲ್ ಆಗಿದೆ. ಇಲ್ಲಿ ಹಾವಿಗೂ ಹಣ್ಣಿಗೂ ಯಾವುದೇ ವ್ಯತ್ಯಾಸವಿಲ್ಲ.

Difference between snake and fruit: Shocking video goes viral

ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಡಿಯೋ ವೈರಲ್ ಆಗಿದ್ದು, ಇಲ್ಲಿ ಹಾವಿಗೂ ಹಣ್ಣಿಗೂ ವ್ಯತ್ಯಾಸವೇ ತಿಳಿಯುತ್ತಿಲ್ಲ. ಇದು ಬಾಳೆಹಣ್ಣು ಅಂದುಕೊಂಡೆ ಸುಲಭವಾಗಿ ಮೂರ್ಖರಾಗಬಹುದು. ಅಷ್ಟೊಮದು ಹೋಲಿಕೆಯನ್ನು ಈ ಚೆಂಡು ಹೆಬ್ಬಾವು ಹೊಂದಿದೆ. ವಿಡಿಯೋದಲ್ಲಿ ಎರಡು ಬಾಳೆಹಣ್ಣು ಇವೆ ಎಂದೆನಿಸುತ್ತದೆ. ಆದರೆ ಅದು ಬಾಳೇಹಣ್ಣು ಅಲ್ಲ ಬದಲಿಗೆ ಬಾಳೆಹಣ್ಣಿನಂತೆಯೇ ಚರ್ಮವನ್ನು ಹೊಂದಿರುವ ಜೀವಂತ ಹೆಬ್ಬಾವು. ಈ ವಿಡಿಯೊವನ್ನು ಸೈನ್ಸ್ ಹುಡುಗಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ: "ಈ ಚೆಂಡು ಹೆಬ್ಬಾವು ಬಾಳೆಹಣ್ಣಿನಂತಿದೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಹೆಬ್ಬಾವು ತನ್ನ ರಕ್ಷಣಾ ಕಾರ್ಯತಂತ್ರಕ್ಕೆ ಹೆಸರುವಾಸಿಯಾಗಿದೆ. ಅದು ಬೆದರಿಕೆಯೊಡ್ಡಿದಾಗ ಬಿಗಿಯಾಗಿ ಚೆಂಡಿನಂತೆ ಸುತ್ತಿಕೊಳ್ಳುತ್ತದೆ. ಅದರ ತಲೆ ಮತ್ತು ಕುತ್ತಿಗೆಯನ್ನು ಮಧ್ಯದಲ್ಲಿ ಇರಿಸುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ತುಂಬಾನೇ ಅಪರೂಪವಾಗಿದೆ. ಬಾಳೆಹಣ್ಣಿನಂತಿರುವ ಹಾವನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+