ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಕಷ್ಟವಾದ ಪ್ರಶ್ನೆ ಕೇಳ್ತೀರ ಯಾಕೆ..? ಟಿವಿ ಶೋನಲ್ಲಿ ಟ್ರಂಪ್ ರಂಪಾಟ..!

|
Google Oneindia Kannada News

ಇಂದಿನಿಂದ ಲೆಕ್ಕ ಹಿಡಿದರೂ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ನ. 3ರಂದು ಮತದಾನ ಅಂತಿಮವಾಗಲಿದೆ. ಆದರೆ ಈ ಹೊತ್ತಲ್ಲೇ ಟ್ರಂಪ್ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಪ್ರತಿಷ್ಠಿತ '60 Minutes' ಶೋನಲ್ಲಿ ಭಾಗವಹಿಸಿದ್ದ ಟ್ರಂಪ್, ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲರಾದರು. ಅಲ್ಲದೆ ಜೋ ಬಿಡೆನ್‌ಗೆ ಮಾತ್ರ ಸುಲಭವಾದ ಪ್ರಶ್ನೆಗಳನ್ನ ಕೇಳ್ತೀರ, ನನಗೆ ಮಾತ್ರ ಕಷ್ಟಕರವಾದ ಪ್ರಶ್ನೆಗಳನ್ನ ಕೇಳೋದು ಏಕೆ..? ಎಂದು ಕೋಪಗೊಂಡು ಶೋನಿಂದ ಹೊರನಡೆದೇ ಬಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಳ್ಮೆ ಕಳೆದುಕೊಂಡು ವರ್ತಿಸಿರುವ ಈ ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ.

ಅಮೆರಿಕ ನಾಯಕರು ಕೂಡ ಟ್ರಂಪ್ ವರ್ತನೆ ವಿರುದ್ಧ ತಿರುಗಿಬಿದ್ದಿದ್ದಾರೆ. ಪತ್ರಕರ್ತರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಎಂದು ಟ್ರಂಪ್‌ಗೆ ಬುದ್ಧಿ ಹೇಳುತ್ತಿದ್ದಾರೆ. ಹೀಗೆ ಬುದ್ಧಿ ಹೇಳಿದ ನಾಯಕರ ಸಾಲಿನಲ್ಲಿ ಒಬಾಮಾ ಕೂಡ ಇದ್ದು, ಶನಿವಾರ ಅಮೆರಿಕದಲ್ಲಿ ಮಾತನಾಡಿದ್ದ ಒಬಾಮಾ ಟ್ರಂಪ್‌ ವರ್ತನೆಯನ್ನು ಖಂಡಿಸಿದ್ದರು. 60 ನಿಮಿಷಗಳ ಶೋ ಎದುರಿಸಲು ಆಗದವರ ಕೈಯಲ್ಲಿ ನಾವು ಅಮೆರಿಕ ಕೊಡಬೇಕಾ ಎಂದು ಪ್ರಶ್ನಿಸಿದ್ದರು. ಒಬಾಮಾ ಬಿಡೆನ್ ಪರ ಕ್ಯಾಂಪೇನ್ ಮಾಡುವಾಗ ಈ ವಿಚಾರ ಪ್ರಸ್ತಾಪಿಸಿದ್ದರು. ಒಬಾಮಾ ವಿಷಯ ಪ್ರಸ್ತಾಪ ಮಾಡಿದ್ದೇ ತಡ, ಟ್ರಂಪ್ ವೀಡಿಯೋ ವೈರಲ್ ಆಗಿದೆ.

 ‘60 Minutes’ ಶೋ ಎಂಬ ಅದ್ಭುತ..!

‘60 Minutes’ ಶೋ ಎಂಬ ಅದ್ಭುತ..!

ಅಮೆರಿಕ ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಎಷ್ಟು ಸತ್ಯವಾದ ಮಾತೋ, ಅಲ್ಲಿ ಮಾಧ್ಯಮಗಳಿಗೆ ಅಷ್ಟೇ ಸ್ವಾತಂತ್ರ್ಯ ಇದೆ ಎಂಬುದು ಕೂಡ ವಾಸ್ತವ. ಭಾರತದಲ್ಲಿ ಇರುವಂತೆ ಅಮೆರಿಕದಲ್ಲೂ ಕೆಲವೊಂದು ಪ್ರತಿಷ್ಠಿತ ಟಿವಿ ಶೋ ನಡೆಯುತ್ತಿವೆ. ಅದರಲ್ಲಿ '60 Minutes' ಬರೋಬ್ಬರಿ 50 ವರ್ಷ ಎಂದರೆ ಅರ್ಧ ಶತಮಾನಗಳ ಇತಿಹಾಸ ಹೊಂದಿದೆ. ನಿಮಗಿದು ತಿಳಿದಿರಲಿ ಅಮೆರಿಕದಲ್ಲಿ ಸಿಗರೇಟ್ ಕಂಪನಿಗಳ ಕುತಂತ್ರ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು ಸಿಗರೇಟ್‌ನಲ್ಲಿವೆ ಎಂಬುದನ್ನು ಬಯಲು ಮಾಡಿದ್ದು ಇದೇ '60 Minutes' ಶೋ. ಅಲ್ಲಿಯವರೆಗೂ 'ಸಿಬಿಎಸ್ ನ್ಯೂಸ್' ಹಾಗೂ '60 Minutes' ಶೋ ಬಹುಪಾಲು ಜನರಿಗೆ ತಿಳಿದೇ ಇರಲಿಲ್ಲ. ಯಾವಾಗ ಸಿಗರೇಟ್ ಕಂಪನಿಗಳ ಬಣ್ಣವನ್ನು '60 Minutes' ಶೋ ಬಯಲು ಮಾಡುತ್ತೋ, ಅಂದು ಇಡೀ ಅಮೆರಿಕದಲ್ಲಿ 'ಸಿಬಿಎಸ್ ನ್ಯೂಸ್' ಹಾಗೂ '60 Minutes' ಶೋ ಪ್ರತಿಯೊಬ್ಬರ ಮನೆಮಾತಾಗಿಬಿಡುತ್ತದೆ. ಅಲ್ಲದೆ ಅಮೆರಿಕದ ಸಿಗರೇಟ್ ಕಂಪನಿಗಳಿಗೆ ಕೋರ್ಟ್ ಬರೋಬ್ಬರಿ 250 ಬಿಲಿಯನ್ ಡಾಲರ್ (ಈಗಿನ ಲೆಕ್ಕದಲ್ಲಿ 18 ಲಕ್ಷ ಕೋಟಿ ರೂಪಾಯಿ) ದಂಡ ಹಾಕುವಲ್ಲಿ '60 Minutes' ಶೋ ಪಾತ್ರ ದೊಡ್ಡದು.

60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ

‘60 Minutes’ ಶೋಗೆ ಕರೆಯೋದೆ ಸೌಭಾಗ್ಯ..!

‘60 Minutes’ ಶೋಗೆ ಕರೆಯೋದೆ ಸೌಭಾಗ್ಯ..!

ಅಮೆರಿಕ ಅಧ್ಯಕ್ಷರೇ ಇರಲಿ, ಇನ್ಯಾರೇ ಆಗಲಿ '60 Minutes' ಶೋನಲ್ಲಿ ಭಾವಹಿಸಬೇಕೆಂದರೆ ಸೌಭಾಗ್ಯವೇ ಸರಿ. ಯಾರನ್ನೋ ಕರೆದು ಸುಖಾಸುಮ್ಮನೆ ನಡೆಯುವ ಶೋ ಅಲ್ಲ ಅದು. ಹೀಗಿರುವಾಗ ಟ್ರಂಪ್‌ಗೆ ಎಲೆಕ್ಷನ್ ಸಂದರ್ಭದಲ್ಲಿ ಮಹತ್ವದ ಅವಕಾಶ ಸಿಕ್ಕಿತ್ತು. ಆದರೆ ಟ್ರಂಪ್ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ. ಪತ್ರಕರ್ತೆ ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಟ್ರಂಪ್ ಅರ್ಧಕ್ಕೆ ಶೋ ಬಿಟ್ಟು ಹೊರನಡೆದಿರುವುದು ವಿಪಕ್ಷ ನಾಯಕರಿಗೆ ಸಹಾಯ ಮಾಡಿದ್ದಂತಾಗಿದೆ. ಟ್ರಂಪ್ ವಿರುದ್ಧ ವಾಗ್ದಾಳಿಗೆ ಇದು ವೇದಿಕೆ ಒದಗಿಸಿಕೊಟ್ಟಿದೆ.

Recommended Video

Surya Kumar Yadav ರನ್ನು Australia ತಂಡಕ್ಕೆ ಈಗಲೂ ಆಯ್ಕೆ ಮಾಡಿಲ್ಲ | Oneindia Kannada
ಟ್ರಂಪ್‌ರ ಈ ವರ್ತನೆ ಮೊದಲೇನಲ್ಲ

ಟ್ರಂಪ್‌ರ ಈ ವರ್ತನೆ ಮೊದಲೇನಲ್ಲ

ಅಂದಹಾಗೆ ಟ್ರಂಪ್ ಪತ್ರಕರ್ತರ ಜೊತೆಗೆ ತಾಳ್ಮೆ ಕಳೆದುಕೊಂಡು ವರ್ತಿಸುತ್ತಿರುವುದು ಇದೇ ಮೊದಲೇನಲ್ಲ. ತಾವು ಅಧ್ಯಕ್ಷರಾಗಿ ಬಂದಾಗಿನಿಂದಲೂ ಇದೇ ರೀತಿ ವರ್ತಿಸುತ್ತಿರುವ ಆರೋಪ ಟ್ರಂಪ್ ಮೇಲಿದೆ. ಅದಕ್ಕೂ ಮೊದಲು ಅಂದರೆ ಅಧ್ಯಕ್ಷರಾಗುವುದಕ್ಕೂ ಮೊದಲು ಕೂಡ ಟ್ರಂಪ್ ಪತ್ರಕರ್ತರ ಜೊತೆ ಇದೇ ರೀತಿಯಾಗಿ ವರ್ತಿಸಿ ವಿವಾದ ಮೈಮೇಲೆ ಎಳದುಕೊಳ್ಳುತ್ತಿದ್ದರು. ಆದರೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ತಮ್ಮ ಈ ಗುಣ ಹಾಗೂ ಸಿಟ್ಟನ್ನು ಟ್ರಂಪ್ ಬಿಡಲಿಲ್ಲ. ಅದರ ಪರಿಣಾಮವನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅನುಭವಿಸುವಂತಾಗಿದೆ.

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ

ಟ್ರಂಪ್‌ಗೆ ಸಣ್ಣ ವಿಚಾರವೂ ಅರ್ಥವಾಗಲ್ಲ..!

ಟ್ರಂಪ್‌ಗೆ ಸಣ್ಣ ವಿಚಾರಗಳು ಕೂಡ ಅರ್ಥವಾಗಲ್ಲ, ಆದರೆ ಕೋಪ ಮಾತ್ರ ದಿಢೀರ್ ಎಂದು ಬಂದುಬಿಡುತ್ತೆ. ಮಾಧ್ಯಮ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಸುಖಾಸುಮ್ಮನೆ ಟ್ರಂಪ್ ಕೋಪ ಮಾಡಿಕೊಳ್ಳುತ್ತಾರೆ. ಟ್ರಂಪ್ ನಡೆಗೆ ಅರ್ಥ ಇದೆಯಾ ಎಂದಿದ್ದರು ಒಬಾಮಾ. ಕಳೆದ ಶನಿವಾರ ಮಿಯಾಮಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಡೆನ್ ಪರ ಒಬಾಮಾ ಮತಯಾಚನೆ ಮಾಡಿದ್ದರು. ಆದರೆ ಕ್ಯಾಂಪೇನ್ ಭಾಷಣದಲ್ಲಿ ಬಿಡೆನ್ ಪರ ಮತ ಕೇಳುವುದಕ್ಕಿಂತ ಹೆಚ್ಚಾಗಿ ಟ್ರಂಪ್ ಮಾಡುತ್ತಿರುವ ಎಡವಟ್ಟುಗಳನ್ನು ವಿವರಿಸುವುದಕ್ಕೇ ಒಬಾಮಾ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ಒಬಾಮಾ ಈ ಭಾಷಣ ಮಾಡಿ ಕೆಲವೇ ದಿನಗಳಲ್ಲಿ ಟ್ರಂಪ್ ತಾಳ್ಮೆ ಕಳೆದುಕೊಂಡಿರುವುದು ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ.

English summary
A video of Trump losing his patience with the 60 Minutes Show is going viral. American leaders are condemning Trump's behavior.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X