• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

60 ನಿಮಿಷ ಸಂದರ್ಶನ ಎದುರಿಸಲಾಗದ ಟ್ರಂಪ್ ಕೈಗೆ ದೇಶ ಕೊಡಬೇಕೇ?: ಒಬಾಮಾ

|

ವಾಶಿಂಗ್ಟನ್, ಅಕ್ಟೋಬರ್.25: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ಅಮೆರಿಕನ್ನರು ಯಾವುದೇ ಕಾರಣಕ್ಕೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎರಡನೇ ಅವಧಿ ಅಧಿಕಾರ ನೀಡಬಾರದು ಎಂದು ಯುಎಸ್ಎ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಫ್ಲೋರಿಡಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಕಾರ್ ರ್ಯಾಲಿಯಲ್ಲಿ ನಡೆಸಿದರು. ಈ ವೇಳೆ ಜೋ ಬಿಡೆನ್ ಪರವಾಗಿ ಪ್ರಚಾರ ಕೈಗೊಂಡ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು, ಡೊನೊಲ್ಡ್ ಟ್ರಂಪ್ ವಿರುದ್ಧ ಕಿಡಿ ಕಾರಿದ್ದಾರೆ.

ಟ್ರಂಪ್ ಚೀನಾ ಪರ ನಿಂತಿದ್ದಾರೆ, ಒಬಾಮಾ ಗಂಭೀರ ಆರೋಪ

ಸಿಬಿಎಸ್ ನ್ಯೂಸ್‌ನ ವರದಿಗಾರ ಲೆಸ್ಲೆ ಸ್ಟಾಲ್ ಅವರ ಜೊತೆಗಿನ ಸಂದರ್ಶನದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯದಲ್ಲೇ ಎದ್ದು ಹೋದ ನಡೆಯನ್ನು ಟೀಕಿಸಲಾಗಿದೆ. 60 ನಿಮಿಷಗಳ ಸಂದರ್ಶನದಲ್ಲಿ ಹುಚ್ಚುತನ ಪ್ರದರ್ಶಿಸಿದ್ದಾರೆ ಎಂದು ಬರಾಕ್ ಒಬಾಮಾ ವಾಗ್ದಾಳಿ ನಡೆಸಿದ್ದಾರೆ.

ಕಠಿಣ ಪ್ರಶ್ನೆಗೆ ಉತ್ತರಿಸಲಾಗದೇ ಹುಚ್ಚಾಟ:

ಸಿಬಿಎಸ್ ನ್ಯೂಸ್‌ನ ವರದಿಗಾರ ಲೆಸ್ಲೆ ಸ್ಟಾಲ್ ಅವರೊಂದಿಗಿನ ಕೇವಲ 60 ನಿಮಿಷಗಳ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳು ಡೊನಾಲ್ಡ್ ಟ್ರಂಪ್ ಅವರಿಗೆ ಕಠಿಣ ಎನಿಸಿವೆ. ಎರಡನೇ ಅವಧಿಯಲ್ಲಿ ಅಧಿಕಾರ ಸಿಕ್ಕಿದ್ದಲ್ಲಿ ಏನೆಲ್ಲಾ ಯೋಜನೆಗಳನ್ನು ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಲಾಗದೇ ಅವರು ಹುಚ್ಚುತನ ಪ್ರದರ್ಶಿಸಿದ್ದಾರೆ. ಸಂದರ್ಶನ ಪೂರ್ಣಗೊಳ್ಳುವ ಮೊದಲೇ ಅಲ್ಲಿಂದ ಎದ್ದು ಹೋಗಿದ್ದಾರೆ. ಮುಂದಿನ ಆಡಳಿತ ಅವಧಿಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದ ವ್ಯಕ್ತಿಯನ್ನು ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವುದು ಬೇಡ ಎಂದು ಬರಾಕ್ ಒಬಾಮಾ ಮನವಿ ಮಾಡಿಕೊಂಡಿದ್ದಾರೆ.

ಭವಿಷ್ಯ ಯೋಜನೆ ಮತ್ತು ವಾಸ್ತವನ ಅರಿವಿಲ್ಲ:

ಅಮೆರಿಕಾದಲ್ಲಿ ಕೊರೊನಾವೈರಸ್ ಎರಡನೇ ಅಲೆ ನಿಯಂತ್ರಿಸುವುದಕ್ಕೆ ಯಾವೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೀರಾ ಎಂಬ ಸರಳ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಸುಲಭವಾಗಿ ಅವರು ಉತ್ತರಿಸುತ್ತಾರೆ ಎಂದುಕೊಂಡೆ. ಆದರೆ ಅಲ್ಲಿ ಅವರಿಗೆ ಯಾವುದೇ ಯೋಜನೆ ಇರಲಿಲ್ಲ. ಭವಿಷ್ಯದ ಬಗ್ಗೆ ಯೋಜನೆಯನ್ನೂ ಹಾಕಿಕೊಂಡಿರಲಿಲ್ಲ. ಇದರ ಜೊತೆಗೆ ವಾಸ್ತವದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ಕೂಡಾ ಅವರಿಗೆ ಇರಲಿಲ್ಲ ಎಂದು ಬರಾಕ್ ಒಬಾಮಾ ದೂರಿದ್ದಾರೆ.

English summary
USA Presidential Election: Barak Obama Request To Voters For Not To Choose Trump For Second Term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X