Bengaluru Rain: ನಗರದಲ್ಲಿಂದು 50 ಮಿಮೀ ಮಳೆ ದಾಖಲು, ರಸ್ತೆಗಳು ಸಂಪೂರ್ಣ ಜಲಾವೃತ, ಮುನ್ಸೂಚನೆ ಏನಿದೆ?

Bengaluru Weather Forecast: ರಾಜಧಾನಿ ಬೆಂಗಳೂರಿನ ಅರ್ಧ ಭಾಗಕ್ಕೆ ಇಂದು ಮಂಗಳವಾರ ಮಧ್ಯಾಹ್ನ ನಂತರ ಭರ್ಜರಿ ಮಳೆ ಸುರಿದಿದೆ. ಮುಂಗಾರು ಆಗಮನ ಮುನ್ನವೇ ಪೂರ್ವ ಮುಂಗಾರು ಮಳೆಯೇ ಪ್ರವಾಹ ವಾತಾವರಣ ಸೃಷ್ಟಿ ಮಾಡಿದೆ. ಎಚ್‌ಎಎಲ್ ವಿಮಾನ ನಿಲ್ದಾಣ ಭಾಗದಲ್ಲಿ 50 ಮಿ.ಮೀ. ಮಳೆ ದಾಖಲಾಗಿದೆ. ನಗರದ ಹೊರ ವಲಯದಲ್ಲಿ ಗಾಳಿ, ಮಿಂಚು ಸಹಿತ ಜೋರು ಮಳೆ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡು ಸಂಚಾರ ನಿಧಾನಗತಿಯಲ್ಲಿದ್ದದ್ದು ಕಂಡು ಬಂತು.

ಮಾರತ್ತಹಳ್ಳಿ, ಬೆಳ್ಳಂದೂರು, ಹೊರಮಾವು, ಎಚ್‌ಎಎಲ್ ವಿಮಾನ ನಿಲ್ದಾಣ, ಹೂಡಿ, ಜಕ್ಕೂರು, ಕೆ.ಆರ್.ಪುರಂ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಜೋರು ಮಳೆ ಆಗಿದ್ದು, ಕೆಲವೆಡೆ ಹಗುರು ಮಳೆ ಆಗಿದೆ. ನಗರ ಹೊರವರ್ತುಲ ರಸ್ತೆ, ಮಹಾದೇವಪುರ ವ್ಯಾಪ್ತಿಯಲ್ಲಿ, ಕೆ.ಆರ್‍‌.ಪುರಂ ಮುಖ್ಯ ರಸ್ತೆ, ವರ್ತೂರು ರಸ್ತೆ, ಫೂರಂ ಮಾಲ್, ವೈಟ್‌ಫಿಲ್ಡ್, ಪಣತ್ತೂರು ರೈಲ್ವೆ ಅಂಡರ್ ಪಾಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ವಾಟರ್‌ಲಾಗಿಂಗ್ ಸಮಸ್ಯೆ ಉಂಟಾಗಿ ಸಮಸ್ಯೆ ಆಯಿತು.

Heavy Rain

ಮಳೆ ನೀರು ಸರಾಗವಾಗಿ ಹರಿದು ಹೋಗದೇ ಅನೇಕ ರಸ್ತೆಗಳಲ್ಲಿ ನಿಂತು ಅವಾಂತರ ಸೃಷ್ಟಿಸಿತು. ರಸ್ತೆಯಲ್ಲಿ ಸುಮಾರು ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ಸವಾರರು ಪರದಾಡಿದರು. ಬೈಕ್, ಕಾರುಗಳು ಜಲಾವೃತ ರಸ್ತೆಗಳಲ್ಲಿ ಸಂಚರಿಸಿದವು. ಪ್ರವಾಹ ಸ್ಥಿತಿಯಿಂದಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಕೆಲಸ ಮುಗಿಸಿ ತೆರಳುತ್ತಿದ್ದ ಉದ್ಯೋಗಿಗಳು, ಸಾರ್ವಜನಿಕರು ಜಿಟಿ ಜಿಟಿ ಮಳೆಗೆ ತೊಂದರೆ ಅನುಭವಿಸಿದರು.

Monsoon Rain 2026: ಜೂನ್ 2 ಕಳೆದರೂ ಕೇರಳಕ್ಕೆ ಬಾರದ ಮುಂಗಾರು, ಮಳೆ ವಿಳಂಬ ಮುನ್ಸೂಚನೆ ಕೊಟ್ಟ ಐಎಂಡಿ
Monsoon Rain 2026: ಜೂನ್ 2 ಕಳೆದರೂ ಕೇರಳಕ್ಕೆ ಬಾರದ ಮುಂಗಾರು, ಮಳೆ ವಿಳಂಬ ಮುನ್ಸೂಚನೆ ಕೊಟ್ಟ ಐಎಂಡಿ

50 ಮಿಲಿ ಮಿಟರ್ ಮಳೆ ದಾಖಲು

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ಪ್ರಕಾರ ಇಂದು ಸಂಜೆ 7 ಗಂಟೆ ಹೊತ್ತಿಗೆ ಎಚ್‌ಎಎಲ್ ವಿಮಾನ ನಿಲ್ದಾಣ 50 ಮಿಲಿ ಮೀಟರ್, ಹೊರಮಾವು-2 34.5 ಮಿಲಿ ಮೀಟರ್, ಮಾರತ್ತಹಳ್ಳಿ 33 ಮಿಲಿ ಮೀಟರ್, ದೊಡ್ಡಾನೆಕುಂದಿ 27.5 ಮಿಲಿ ಮೀಟರ್, ಜಕ್ಕೂರು-2 27 ಮಿಲಿ ಮೀಟರ್, ಹೂಡಿ 18 ಮಿಲಿ ಮೀಟರ್, ಹೊರಮಾವು 17.4 ಮಿಲಿ ಮೀಟರ್, ರಾಮಮೂರ್ತಿ ನಗರ 17 ಮಿಲಿ ಮೀಟರ್, ಬೆಳ್ಳಂದೂರು 16 ಮಿಲಿ ಮೀಟರ್ ಕೆ.ಆರ್.ಪುರಂ 14.5 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಕೋರಮಂಗಲ, ಡೈರಿ ವೃತ್ತ, ಹೆಬ್ಬಾಳ, ಯಲಹಂಕ, ವಿಜಯನಗರ, ರಾಜರಾಜೇಶ್ವರಿ ನಗರ ಸೇರಿದಂತೆ ವಿವಿಧೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಈಗಲೋ ಆಗಲೋ ಮಳೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಸೋನೆ ಮುಳೆ ಆಗಿದ್ದು, ಮಂಗಳವಾರ ತಡರಾತ್ರಿವರೆಗೂ ಮಳೆ ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ.

ಬೆಂಗಳೂರಿಗೆ ಮುನ್ಸೂಚನೆ ಏನಿದೆ?

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದೆರಡು ದಿನ ಇದೇ ರೀತಿ ಮಳೆ ವಾತಾವರಣ ಕಂಡು ಬರಲಿದೆ. ಗರಿಷ್ಠ 32-33 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದ್ದು, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40ಕಿಲೋ ಮೀಟರ್ ವೇಗದಲ್ಲಿ ಬೀಸಲಿದ್ದು, ಕೆಲವೆಡೆ ಜೋರು ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಭಾರೀ ಮಳೆಯ ಸಂಭವ ಸದ್ಯಕ್ಕಿಲ್ಲ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+