• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು

|
Google Oneindia Kannada News

ದುಬೈ, ಆಗಸ್ಟ್ 29: ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 5 ವಿಕೆಟ್ ಗಳ ಜಯ ದಾಖಲಿಸಿದೆ. ಆಗಸ್ಟ್ 28ರಂದು ನಡೆದ ಪಂದ್ಯದಲ್ಲಿ ಆಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದು ವಿಶೇಷ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಯಲ್ಲೂ 100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫಾರ್ಮ್ ಕಳೆದುಕೊಂಡು, ಕ್ರಿಕೆಟ್ ಬ್ಯಾಟ್ ಹಿಡಿಯದೆ ತಿಂಗಳು ಕಳೆದಿದ್ದ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ವಿಶೇಷ ಬ್ಯಾಟ್‌ನೊಂದಿಗೆ ಕೊಹ್ಲಿ ಕಣಕ್ಕಿಳಿದಿದ್ದರು. ಎಂಆರ್ ಎಫ್‌ ಗೋಲ್ಡ್ ವಿಝಾರ್ಡ್ ಗುಣಮಟ್ಟದ ವಿಶೇಷ ಬ್ಯಾಟ್ ಹಿಡಿದು ಕ್ರೀಸ್ ನಲ್ಲಿ ಕಾಣಿಸಿಕೊಂಡ ಕೊಹ್ಲಿ ಮತ್ತೆ ಲಯಕ್ಕೆ ಮರಳಿರುವ ಕುರುಹು ತೋರಿದರು.

ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಕ್ಕೆ ಬಹುಪರಾಕ್ ಎಂದ ಮೋದಿಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಕ್ಕೆ ಬಹುಪರಾಕ್ ಎಂದ ಮೋದಿ

ಅಂದ ಹಾಗೆ, ಆಗಸ್ಟ್ 27ರಂದು ಆಫ್ಘಾನಿಸ್ತಾನ-ಶ್ರೀಲಂಕಾ ಪಂದ್ಯದೊಂದಿಗೆ ಏಷ್ಯಾಕಪ್ 2022ರ ಪಂದ್ಯಾವಳಿಗೆ ಚಾಲನೆ ದೊರೆದಿತ್ತು, ಮೊದಲ ಪಂದ್ಯದಲ್ಲೇ ಶ್ರೀಲಂಕಾವನ್ನು ಅಫ್ಘಾನಿಸ್ತಾನ ಮಣಿಸಿ ಭರ್ಜರಿ ಆರಂಭ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಆಲ್ ರೌಂಡ್ ಆಟದ ಮೂಲಕ ಟೀಂ ಇಂಡಿಯಾ ಕೂಡಾ ಶುಭಾರಂಭ ಮಾಡಿದೆ.

ಪಂದ್ಯಕ್ಕೂ ಮುನ್ನ ಕೊಹ್ಲಿ ಹೇಳಿದ್ದೇನು

ಪಂದ್ಯಕ್ಕೂ ಮುನ್ನ ಕೊಹ್ಲಿ ಹೇಳಿದ್ದೇನು

''ಇಂಗ್ಲೆಂಡ್‌ನಲ್ಲಿ ಆದ ಅನುಭವದಿಂದ ಪಾಠ ಕಲಿತಿದ್ದೇನೆ. ಅಲ್ಲಿ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ನನಗೆ ಅನಿಸಲಿಲ್ಲ. ಯಾವ ವಿಭಾಗದಲ್ಲಿ ನಾನು ಸುಧಾರಣೆಯಾಗಬೇಕು ಎಂದು ಕಂಡುಕೊಂಡಿದ್ದೇನೆ. ನನ್ನನ್ನು ನಾನು ಸುಧಾರಿಸಲು ಅಭ್ಯಾಸ ಮಾಡುತ್ತಿದ್ದೇನೆ. ಬ್ಯಾಟಿಂಗ್‌ನಲ್ಲಿ ಉತ್ತಮ ಲಯವನ್ನು ಕಂಡುಕೊಂಡಾಗ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿದೆ'' ಎಂದು ವಿರಾಟ್ ಕೊಹ್ಲಿ ಹೇಳಿದ್ದರು.

ಲಯಕ್ಕೆ ಮರಳುವ ಕುರುಹು ತೋರಿದ್ದಾರೆ

ಲಯಕ್ಕೆ ಮರಳುವ ಕುರುಹು ತೋರಿದ್ದಾರೆ

ಪಾಕಿಸ್ತಾನ ನೀಡಿದ 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಕಾದಿತ್ತು. ಕೆಎಲ್ ರಾಹುಲ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಚೊಚ್ಚಲ ಟಿ20 ಪಂದ್ಯವನ್ನು ಆಡುತ್ತಿರುವ ನಸೀಮ್ ಶಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಂದ 49 ರನ್‌ಗಳ ಜೊತೆಯಾಟ ಸಾಧಿಸಿದರು. ಕೊಹ್ಲಿ 34 ಎಸೆತಗಳಲ್ಲಿ 35 ರನ್(3 ಬೌಂಡರಿ, 1 ಸಿಕ್ಸರ್) ಗಳಿಸಿದರು. ಈ ಮೂಲಕ ಮತ್ತೆ ಎಂದಿನ ಲಯಕ್ಕೆ ಮರಳುವ ಕುರುಹು ತೋರಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಆರಂಭದ ದಿನಗಳು

ಕೊಹ್ಲಿ ಆರಂಭದ ದಿನಗಳು

2010ರಲ್ಲಿ ಜಿಂಬಾಬ್ವೆ ವಿರುದ್ಧ ಚೊಚ್ಚಲ ಟಿ20ಐ ಪಂದ್ಯವಾಡಿದ ಕೊಹ್ಲಿ 21 ಎಸೆತಗಳಲ್ಲಿ 26ರನ್ ಗಳಿಸಿ, ಗೆಲುವಿಗೆ ತಮ್ಮ ಕೊಡುಗೆ ನೀಡಿದ್ದರು. ಭರ್ಜರಿ ಸ್ಟ್ರೈಕ್ ರೇಟ್ ಬಗ್ಗೆ ಗಮನ ಹರಿಸದೆ, ನಿರಂತರವಾಗಿ ರನ್ ಗಳಿಕೆ ಮೂಲಕ ರನ್ ಚೇಸ್ ಮಾಡಿ, ತಂಡಕ್ಕೆ ಗೆಲುವು ತಂದು ಕೊಡುವ ಅಭ್ಯಾಸ ಮಾಡಿಕೊಂಡ ಕೊಹ್ಲಿ ಈ ಮಾದರಿಯಲ್ಲಿ ದಿಗ್ಗಜ ಕ್ರಿಕೆಟರ್ ಎನಿಸಿಕೊಂಡರು.

ಪಾಕ್ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಅಂಕಿ ಅಂಶ
100 ಪಂದ್ಯ; 92 ಇನ್ನಿಂಗ್ಸ್; 25 ಬಾರಿ ನಾಟೌಟ್; 3343 ರನ್; ಅಜೇಯ 84 ಗರಿಷ್ಠ ರನ್; 49.9 ರನ್ ಸರಾಸರಿ; 137.2 ಸ್ಟ್ರೈಕ್ ರೇಟ್; 30 ಅರ್ಧಶತಕ; 302 ಬೌಂಡರಿ; 94 ಸಿಕ್ಸರ್
ಅತಿ ಹೆಚ್ಚು ರನ್ ಗಳಿಸಿದವರು

ಅತಿ ಹೆಚ್ಚು ರನ್ ಗಳಿಸಿದವರು

ರೋಹಿತ್ ಶರ್ಮ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 3499ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 3497, ಕೊಹ್ಲಿಯಿಂದ ಮುಂದಿದ್ದಾರೆ. ರೋಹಿತ್ 4 ಶತಕ ಬಾರಿಸಿದ್ದು, 31 ಬಾರಿ 50ರನ್ ಗಡಿ ದಾಟಿದ್ದಾರೆ. ಕೊಹ್ಲಿ 30 ಅರ್ಧಶತಕ ಗಳಿಸಿದ್ದು, ಶತಕ ಇನ್ನೂ ಬಾರಿಸಿಲ್ಲ. ಹಾಗೆ ನೋಡಿದರೆ ನವೆಂಬರ್ 2019ರ ಬಳಿಕ ಕೊಹ್ಲಿ 100ರನ್ ಗಡಿ ದಾಟಿಲ್ಲ, ಸುಮಾರು 1000 ದಿನಗಳಿಂದ ಅಭಿಮಾನಿಗಳು ಅಂತಾರಾಷ್ಟ್ರೀಯ ಮಟ್ಟದ ಶತಕಕ್ಕೆ ಕಾದಿದ್ದಾರೆ.

ತ್ವರಿತ ಗತಿಯಲ್ಲಿ 1000ರನ್ ಗಳಿಕೆ

ತ್ವರಿತ ಗತಿಯಲ್ಲಿ 1000ರನ್ ಗಳಿಕೆ

ಟಿ20ಐಯಲ್ಲಿತ್ವರಿತ ಗತಿಯಲ್ಲಿ 1000ರನ್ ಗಳಿಕೆ ಪಟ್ಟಿಯಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. 27 ಇನ್ನಿಂಗ್ಸ್ ನಲ್ಲಿ 1000ರನ್ ದಾಟಿ, ನಾಲ್ಕನೇ ಸ್ಥಾನದಲ್ಲಿದ್ದರೆ, 56 ಇನ್ನಿಂಗ್ಸ್ ನಲ್ಲಿ 2000ರನ್ (2ನೇ ತ್ವರಿತ ಗತಿ ಗಳಿಕೆ) ಹಾಗೂ 68 ಇನ್ನಿಂಗ್ಸ್ ನಲ್ಲಿ 2500ರನ್ ಗಳಿಸಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಟಿ20ಐಯಲ್ಲಿ 12 ಬಾರಿ ಗಳಿಸಿದ್ದರೆ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 13 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ, ಸರಣಿ ಶ್ರೇಷ್ಠ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 7 ಬಾರಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

English summary
Indian cricket star Virat Kohli played his 100th T20I match when he takes to the field against Pakistan in the much-anticipated Asia Cup 2022 campaign opener. He become the first Indian to play a century of matches in all formats of the sport at international level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X