IPL 2024: ಕೊಹ್ಲಿಗೊಂದು ನ್ಯಾಯ, ಧೋನಿಗೊಂದು ನ್ಯಾಯ: ಅಂಪೈರಿಂಗ್ ಬಗ್ಗೆ ಮೊಹಮ್ಮದ್ ಕೈಫ್ ಅಸಮಾಧಾನ
ಐಪಿಎಲ್ 2024ರ ಆವೃತ್ತಿಯಲ್ಲಿ ಅಂಪೈರಿಂಗ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಆನ್‌ಫೀಲ್ಡ್ ಮಾತ್ರವಲ್ಲದೇ ಮೂರನೇ ಅಂಪೈರ್ ಕೂಡ ಹಲವು ಪ್ರಮಾದ ಎಸಗಿದ್ದು ಮಾಜಿ ಕ್ರಿಕೆಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಔಟ್ ಕೊಟ್ಟ ಅಂಪೈರ್ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಸೊಂಟದ ಎತ್ತರಕ್ಕಿಂತ ಮೇಲಿದ್ದ ಕಾರಣ ಅದು ನೋ ಬಾಲ್ ಎಂದು ಕೆಲವರು ವಾದಿಸಿದರೆ, ಅವರು ಕ್ರೀಸ್ ಬಿಟ್ಟು ಮುಂದೆ ಬಂದಿದ್ದ ಕಾರಣ ಅದು ನೋ ಬಾಲ್ ಅಲ್ಲ, ಔಟ್ ಕೊಟ್ಟಿದ್ದು ನ್ಯಾಯವಾಗಿದೆ ಎಂದು ವಾದಿಸುತ್ತಿದ್ದಾರೆ.

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಈಗ ಐಪಿಎಲ್ ಅಂಪೈರಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಧೋನಿ ಇಬ್ಬರಿಗೂ ಎರಡು ವಿಭಿನ್ನ ಅಂಪೈರಿಂಗ್ ನಿರ್ಣಯಗಳ ಬಗ್ಗೆ ಫೋಟೊ ಹಂಚಿಕೊಂಡಿರುವ ಅವರು, ಕಳಪೆ ಅಂಪೈರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಕೈಫ್ ಹೇಳಿದ್ದೇನು?
ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, "ಕೊಹ್ಲಿ ಮತ್ತು ಧೋನಿ ಫೋಟೊ ಹಂಚಿಕೊಂಡಿರುವ ಅವರು, ಸಷ್ಟವಾದ ಆಡಲಾಗದ ಬೀಮರ್ ಎಸೆತದಲ್ಲಿ ಕೊಹ್ಲಿಯನ್ನು ಔಟ್ ಎಂದು ಘೋಷಿಸಲಾಗಿದೆ ಮತ್ತು ಧೋನಿಯ ಬ್ಯಾಟ್ ಅಡಿಯಲ್ಲಿ ಹಾದುಹೋದ ಚೆಂಡು ವೈಡ್ ಎಂದು ಘೋಷಿಸಿತು. ಕ್ಯಾಮೆರಾಗಳು, ರಿಪ್ಲೇಗಳು, ತಂತ್ರಜ್ಞಾನ ಇದ್ದರೂ ಇಂತಹ ತಪ್ಪುಗಳನ್ನು ಮಾಡಲಾಗುತ್ತಿದೆ. ಕಳಪೆ ಅಂಪೈರಿಂಗ್." ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Clear unplayable beamer gets Kohli out and a ball that passed under Dhoni's bat declared wide. Cameras, replays, technology but still such mistakes being made. Poor umpiring. pic.twitter.com/NGqxdbIHPl
— Mohammad Kaif (@MohammadKaif) April 22, 2024
ಪರ - ವಿರೋಧ ಚರ್ಚೆ
ಕೊಹ್ಲಿಯನ್ನು ಔಟ್ ಕೊಟ್ಟ ಅಂಪೈರ್ ನಿರ್ಣಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಔಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಔಟ್ ಎಂದು ಹೇಳಿದ್ದಾರೆ.
ಎಬಿಡಿ ವಿಲಿಯರ್ಸ್ ಕೂಡ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಫುಟ್‌ಬಾಲ್‌ನಲ್ಲಿ ಆಫ್‌ಸೈಡ್ ನಿಯಮದಂತೆ, ಗೆರೆಗಳನ್ನು ಎಳೆಯಿರಿ ಮತ್ತು ವೈಡ್‌ಗಳಿಗೆ (ಎತ್ತರ, ಆಫ್‌ಸೈಡ್ ಮತ್ತು ಲೆಗ್-ಸೈಡ್) ನಿರ್ಧಾರವನ್ನು ಸರಳಗೊಳಿಸಿ ಎಂದು ಹೇಳಿದ್ದಾರೆ.
ಆಟದಲ್ಲಿನ ಗ್ರೇ ಏರಿಯಾಗಳು ಕೋಪ ಮತ್ತು ಗೊಂದಲಕ್ಕೆ ಕಾರಣವಾಗುತ್ತವೆ. ಇದನ್ನು ಸರಿಪಡಿಸುವುದು ಕಠಿಣವಲ್ಲ. ಬ್ಯಾಟರ್ ನಿಲುವು ಪಡೆಯಿರಿ, ಗೆರೆಗಳನ್ನು ಎಳೆಯಿರಿ ಮತ್ತು ಬಾಲ್ ಟ್ರ್ಯಾಕಿಂಗ್ ಅನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications