ವಿರಾಟ್ ಕೊಹ್ಲಿ ಬಗ್ಗೆ ಏನಿದು ಆರ್‌ಬಿಐ ಮಾಜಿ ಗವರ್ನರ್ ಹೇಳಿಕೆ!
ವಿರಾಟ್ ಕೊಹ್ಲಿ ಅಂದ್ರೆ ಭಾರತೀಯರು ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತಿಗೆ ಇಷ್ಟವಾಗುವ ಒಬ್ಬ ಅದ್ಭುತ ಆಟಗಾರ. ಹಾಗೇ ಭಾರತೀಯ ಕ್ರಿಕೆಟ್ ತಂಡದ ಪಾಲಿಗೆ ವಿರಾಟ್ ಕೊಹ್ಲಿ ಅವರನ್ನು, ರನ್ ಮಷಿನ್ ಅಂತಾನೆ ಕರೆಯಲಾಗುತ್ತದೆ. ಆದರೆ ಇದೇ ವಿರಾಟ್ ಕೊಹ್ಲಿ ಅವರ ಬಗ್ಗೆ ಈಗ, ಆರ್‌ಬಿಐ ಮಾಜಿ ಗವರ್ನರ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.
ಹೌದು, ವಿರಾಟ್ ಕೊಹ್ಲಿ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಅಲ್ಲದೆ ವಿರಾಟ್ ಆಟ ನೋಡಲು ಪ್ರತಿಯೊಬ್ಬರು ಉಸಿರು ಬಿಗಿಹಿಡಿದು ಕಾಯುತ್ತಾರೆ. ಆದರೆ ಇದೀಗ ಆರ್‌ಬಿಐನ ಮಾಜಿ ಗವರ್ನರ್, ರಘುರಾಮ್ ರಾಜನ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಅತ್ತ ಯಾವುದೋ ವಿಚಾರಕ್ಕೆ, ಇನ್ಯಾರದ್ದೋ ಉದಾಹರಣೆ ನೀಡಿದ್ದಾರೆ ಅಂತಾ ಚರ್ಚೆ ಕೂಡ ಶುರು ಆಗಿದೆ. '2047 ರ ಸಮಯಕ್ಕೆ ಭಾರತವು ಮುಂದುವರಿದ ಆರ್ಥಿಕತೆಯ ದೇಶ ಆಗಬೇಕೆಂದರೆ ಏನು ಮಾಡಬೇಕು?' ಎಂಬ ವಿಚಾರದ ಬಗ್ಗೆ ಚರ್ಚೆ ಮಾಡುವಾಗ, ವಿರಾಟ್ ಕೊಹ್ಲಿ ಅವರ ವಿಷಯ ಎಳೆದು ತರಲಾಗಿದೆ.

ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು?
ಅಂದಹಾಗೆ ಅಮೆರಿಕದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ನಡೆದ '2047 ರ ಸಮಯಕ್ಕೆ ಭಾರತವು ಮುಂದುವರಿದ ಆರ್ಥಿಕತೆಯ ದೇಶ ಆಗಬೇಕೆಂದರೆ ಏನು ಮಾಡಬೇಕು?' ಎಂಬ ವಿಚಾರ ಸಂಕಿರಣದಲ್ಲಿ ವಿರಾಟ್ ಕೊಹ್ಲಿ ಅವರ ವಿಚಾರವು ಪ್ರಸ್ತಾಪ ಆಗಿದೆ. ಈ ವಿಚಾರ ಸಂಕಿರಣದಲ್ಲಿ ಮಾತನಾಡಿದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವಿರಾಟ್ ಕೊಹ್ಲಿ ವಿಚಾರವನ್ನ ಪ್ರಸ್ತಾಪ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಹಾಗಾದರೆ, ಅಸಲಿಗೆ ವಿರಾಟ್ ಕೊಹ್ಲಿ ಬಗ್ಗೆ ರಘುರಾಮ್ ರಾಜನ್ ಅವರು ಹೇಳಿದ್ದೇನು? ಮುಂದೆ ಓದಿ.
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, 'ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ರೀತಿಯ ಮನಃಸ್ಥಿತಿ ಹೊಂದಿರುವ ಯುವ ಭಾರತ ನಮ್ಮ ಮುಂದಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆ ಆರಂಭವಾಗಿದೆ. ನಾವು ಜನಸಂಖ್ಯಾ ಲಾಭಾಂಶ ಮಧ್ಯೆ ಇದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ರೆ ಸಮಸ್ಯೆ ಎಂದರೆ ನಾವು ಪ್ರಯೋಜನಗಳನ್ನು ಪಡೆಯುತ್ತಿಲ್ಲ. ಭಾರತದಲ್ಲಿ ಜಿಡಿಪಿ ದರ ಶೇಕಡಾ 6 ಮಾತ್ರವೇ ಇರುವುದು. ಜನಸಂಖ್ಯಾ ಬಲ ಇದ್ದರೂ ಅದರ ಫಲ ಪಡೆಯಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕೂಡ ರಘುರಾಮ್ ರಾಜನ್ ಹೇಳಿದ್ದಾರೆ.
ಚೀನಾ ಬಗ್ಗೆ ಹೇಳಿದ್ದು ಏನು?
ಮತ್ತೊಂದು ಕಡೆ ಚೀನಾ & ಕೊರಿಯಾ ದೇಶಗಳ ವಿಚಾರವನ್ನೂ ಪ್ರಸ್ತಾಪ ಮಾಡಿರುವ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ಚೀನಾ ಹಾಗೂ ಕೊರಿಯಾ ದೇಶಗಳು ತಮ್ಮ ಜನಸಂಖ್ಯಾ ಬಲದ ಫಲ ಎಷ್ಟು ಪಡೆದಿದ್ದವು ನೋಡಿ. ಅದಕ್ಕೆಲ್ಲಾ ಹೋಲಿಸಿದರೆ, ಭಾರತ ಪಡೆಯುತ್ತಿರುವುದು ತುಂಬಾ ಕಡಿಮೆ ಇದೆ. ನಾವು ಸಾಧಿಸುತ್ತಿರುವ ಬೆಳವಣಿಗೆಯೇ ಅದ್ಬುತ ಎಂದು ಹೇಳಿದರೆ ಅದು ಅತಿರೇಕದಂತೆ ಅನಿಸುತ್ತದೆ ಎಂದಿದ್ದಾರೆ ರಘುರಾಮ್ ರಾಜನ್. ಈಗ ರಘುರಾಮ್ ರಾಜನ್ ಅವರ ಹೇಳಿಕೆ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ.












Click it and Unblock the Notifications