RCB Vs KKR: ವಿರಾಟ್ ಕೊಹ್ಲಿ ವಿರುದ್ಧ ವಿವಾದಾತ್ಮಕ ತೀರ್ಪು: ಐಸಿಸಿ ನಿಯಮ ಹೇಳುವುದೇನು?

ಭಾನುವಾರ ನಡೆದ ಐಪಿಎಲ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಔಟಾದ ರೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಆರ್‌ಸಿಬಿ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ, ವೇಗದ ಬೌಲರ್ ಹರ್ಷಿತ್ ರಾಣಾ ಅವರ ಫುಲ್-ಟಾಸ್ ಅನ್ನು ಕೊಹ್ಲಿ ರಕ್ಷಣಾತ್ಮಕವಾಗಿ ಆಡಿದರು. ಆದರೆ ಚೆಂಡು ಮೇಲೆ ಹೋದ ಕಾರಣ ರಾಣಾ ಅದನ್ನು ಸುಲಭವಾಗಿ ಕ್ಯಾಚ್ ಹಿಡಿದರು.

Virat Kohli Upset Over Disputed Dismissal Against KKR Clarifying ICC Regulation

ಆದರೆ ಚೆಂಡು ಸೊಂಟಕ್ಕಿಂತ ಎತ್ತರ ಬಂದ ಕಾರಣ ಕೊಹ್ಲಿ ತಕ್ಷಣ ಮೂರನೇ ಅಂಪೈರ್ ಗೆ ವಿಮರ್ಶೆಗಾಗಿ ಮನವಿ ಮಾಡಿದರು. ಆದರೆ, ಅಂಪೈರ್ ತಾವೇ ಅದನ್ನು ನೋಬಾಲ್‌ಗೆ ಪರೀಕ್ಷೆಗೆ ಮನವಿ ಮಾಡುತ್ತಿರುವುದಾಗಿ ಹೇಳಿ, ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದರು.

ಮೂರನೇ ಅಂಪೈರ್ ಅದನ್ನು ಪರಿಶೀಲನೆ ಮಾಡಿ ನೋ ಬಾಲ್ ಅಲ್ಲ ಎಂದು ಹೇಳಿ, ವಿರಾಟ್ ಕೊಹ್ಲಿ ಔಟ್ ಎಂದು ನಿರ್ಣಯ ಕೊಟ್ಟರು. ಈ ನಿರ್ಧಾರದಿಂದ ವಿರಾಟ್ ಕೊಹ್ಲಿ ಅಸಮಾಧಾನಗೊಂಡರು. ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ನಿರ್ಧಾರದ ನಂತರ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು.

ಕೊಹ್ಲಿ ಅವರು ಡಗೌಟ್‌ಗೆ ಹಿಂತಿರುಗುತ್ತಿದ್ದಂತೆ ಸಿಕ್ಕಾಪಟ್ಟೆ ಕೋಪಗೊಂಡಿದ್ದರು ಮತ್ತು ಅವರ ಮುಖಭಾವವು ಅವರು ಸಂತೋಷವಾಗಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.

ಐಸಿಸಿ ನಿಯಮ ಹೇಳುವುದೇನು?

ಐಸಿಸಿ ಪ್ಲೇಯಿಂಗ್ ಕಂಡೀಷನ್ಸ್‌ನ ಕಾನೂನು 41.7.1 ರ ಪ್ರಕಾರ, ಕ್ರೀಸ್‌ನಲ್ಲಿ ನೇರವಾಗಿ ನಿಂತಿರುವ ಬ್ಯಾಟರ್ ನ ಸೊಂಟದ ಎತ್ತರದ ಮೇಲೆ ಪಿಚ್ ಮಾಡದೆಯೇ ಹಾದುಹೋಗುವ ಅಥವಾ ಹಾದುಹೋಗುವ ಯಾವುದೇ ಎಸೆತವನ್ನು ಅನ್ಯಾಯದ ಎಸೆತ ಎಂದು ಪರಿಗಣಿಸಬೇಕು. ಇದು ಸ್ಟ್ರೈಕರ್ ಮೇಲೆ ದೈಹಿಕ ಗಾಯವನ್ನು ಉಂಟುಮಾಡುವ ಸಾಧ್ಯತೆಯಿದೆ. ಬೌಲರ್ ಅಂತಹ ಎಸೆತವನ್ನು ಬೌಲ್ ಮಾಡಿದರೆ ಅಂಪೈರ್ ತಕ್ಷಣವೇ ನೋ ಬಾಲ್ ಅನ್ನು ಸೂಚಿಸುತ್ತಾರೆ." ಎಂದು ಹೇಳಿದೆ.

ಚೆಂಡು ತನ್ನ ಬ್ಯಾಟ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ತನ್ನ ಸೊಂಟದ ಮೇಲಿತ್ತು ಎಂದು ಕೊಹ್ಲಿಗೆ ಸ್ಪಷ್ಟವಾಗಿ ಗೊತ್ತಿತ್ತು. ಕೊಹ್ಲಿ ಕ್ರೀಸ್ ಒಳಗೆ ನಿಂತಿದ್ದರೆ ಅವರ ಸೊಂಟದ ಕೆಳಗೆ ಬರುತ್ತಿತ್ತು. ಕೊಹ್ಲಿ ಬ್ಯಾಟಿಂಗ್ ಕ್ರೀಸ್‌ನ ಹೊರಗೆ ನಿಂತಿದ್ದರಿಂದ ನಿರ್ಧಾರವು ಬೌಲರ್‌ನ ಪರವಾಗಿ ಹೋಯಿತು.

ಸದ್ಯ ಅಂಪೈರಿಂಗ್ ನಿರ್ಣಯದ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿವೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅದು ನೋ ಬಾಲ್ ಎಂದು ಹೇಳಿದರೆ. ನವಜೋತ್ ಸಿಂಗ್ ಸಿಧು ಅದು ನೋಬಾಲ್ ಎಂದು ಹೇಳಿದರು.

ಏನೇ ಆದರೂ ಆರ್ ಸಿಬಿ ವಿಚಾರದಲ್ಲಿ ಅಂಪೈರಿಂಗ್ ದೊಡ್ಡ ಶತ್ರುವಾಗಿರುವುದಂತೂ ನಿಜ. ಈ ಆವೃತ್ತಿಯಲ್ಲಿ ಹಲವು ವಿವಾದಾತ್ಮಕ ಅಂಪೈರಿಂಗ್‌ ಅನ್ನು ನೋಡಿದ್ದು, ಇದರ ವಿರುದ್ಧ ಎಬಿ ಡಿ ವಿಲಿಯರ್ಸ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+