Get Updates
Get notified of breaking news, exclusive insights, and must-see stories!

T20 World Cup: ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡಿದ ವೀರೇಂದ್ರ ಸೆಹ್ವಾಗ್‌: ಮುಂಬೈ ಸ್ಟಾರ್‌ ಪ್ಲೇಯರ್‌ಗೆ ಇಲ್ಲ ಸ್ಥಾನ

ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್‌ ತಂಡವನ್ನು ಟೀಮ್ ಇಂಡಿಯಾ ಪ್ರಕಟವಾಗಲಿದೆ. ಈ ವೇಳೆ ಯಾವ ಆಟಗಾರನಿಗೆ ಮಣೆ ಹಾಕಬೇಕು ಎಂಬ ಟೆನ್ಷನ್‌ ಶುರುವಾಗಿದೆ. ಯುವ ಆಟಗಾರರು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಯಂಗ್ ಪ್ಲೇಯರ್ಸ್‌ ತಾವು ಸಹ ಚುಟುಕು ವಿಶ್ವಕಪ್‌ಗೆ ನಾವು ರೆಡಿ ಎಂದು ಹೇಳುತ್ತಿದ್ದಾರೆ.

ಈಗ ಮಾಜಿ ಆಟಗಾರರು ಸಹ ತಮ್ಮ ಪ್ಲೇಯಿಂಗ್ ಇಲೆವೆನ್‌ನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಸಾಲಿಗೆ ಟೀಮ್ ಇಂಡಿಯಾ ಮಾಜಿ ಸ್ಪೋಟಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌ ಸೇರಿದ್ದಾರೆ. ವೀರೂ ಟಿ20 ವಿಶ್ವಕಪ್‌ಗೆ ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್‌ನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಯುವ ಆಟಗಾರರಿಗೆ ಆರಂಭಿಕ ಆಟಗಾರ ಹೆಚ್ಚಿನ ಅವಕಾಶವನ್ನು ನೀಡಿದ್ದಾರೆ.

Virender Sehwag s Bold Move Hardik Pandya Left Out of T20 World Cup Playing XI

ಓಪನರ್‌ ಯಾರು?

ಸದ್ಯ ಟೀಮ್ ಇಂಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿರುವ ಓಪನರ್‌ ಬಗ್ಗೆ ವೀರೇಂದ್ರ ಸೆಹ್ವಾಗ್‌ ತುಟಿ ಬಿಚ್ಚಿದ್ದಾರೆ. ರೋಹಿತ್ ಶರ್ಮಾ ಅವರ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇನಿಂಗ್ಸ್‌ ಆರಂಭಿಸಬಹುದು ಎಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ಉತ್ತರ ನೀಡಿರುವ ವೀರೂ, ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್‌ ಟೀಮ್‌ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಬೇಕು ಎಂದು ಆಶಯ ವ್ತಕ್ತ ಪಡಿಸಿದ್ದಾರೆ.

ಮಿಡ್ಲ್‌ ಆರ್ಡರ್‌ನಲ್ಲಿ ಯಾರು?

ವೀರೇಂದ್ರ ಸೆಹ್ವಾಗ್‌ ಅವರ ಪ್ರಕಾರ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್ ಕಾಣಿಸಿಕೊಳ್ಳಲಿದ್ದು, ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ಕಾಣಿಸಿಕೊಂಡಿದ್ದಾರೆ. ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ಅವರನ್ನು ವೀರೇಂದ್ರ ಸೆಹ್ವಾಗ್ ತಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಸಂಜು ಸ್ಯಾಮ್ಸನ್‌ ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರೂ, ಅವರನ್ನು ತಂಡಕ್ಕೆ ಆಯ್ಕೆ ಮಾಡುವಲ್ಲಿ ವೀರೂ ಹಿಂದೆ ಬಿದ್ದಿದ್ದಾರೆ.

Virender Sehwag s Bold Move Hardik Pandya Left Out of T20 World Cup Playing XI

ಮ್ಯಾಚ್‌ ಫಿನಿಶರ್‌ ಯಾರು?

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ವೀರೂ, ಆಲ್‌ರೌಂಡರ್‌ಗಳನ್ನು ಅಳೆದು ತೂಗಿ ಮಣೆ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿಲ್ಲ. ಇನ್ನುಮ್ಯಾಚ್‌ ಫಿನಿಶರ್‌ ರೂಪದಲ್ಲಿ ರಿಂಕು ಸಿಂಗ್‌, ಶಿವಂ ದುಬೆ ಇಬ್ಬರ ನಡುವೆ ಫೈಟ್‌ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನು ಆಲ್‌ರೌಂಡರ್‌ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರಿಗೆ ಸ್ಥಾನ ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಹಾರ್ದಿಕ್ ಪಾಂಡ್ಯ ಅವರು ನೀಡುತ್ತಿರುವ ಪ್ರದರ್ಶನವನ್ನು ಗಮನಿಸಿ ಅವರನ್ನು ಟಿ20 ವಿಶ್ವಕಪ್‌ನಲ್ಲಿ ಆಯ್ಕೆ ಮಾಡಬಾರದು ಎಂದು ವಿಮರ್ಷಕರು ಹೇಳುತ್ತಿದ್ದಾರೆ. ಇದರಂತೆ ವೀರೇಂದ್ರ ಸೆಹ್ವಾಗ್‌ ಅವರು ಸಹ ಹಾರ್ದಿಕ್‌ ಅವರನ್ನು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಿಲ್ಲ.

Virender Sehwag s Bold Move Hardik Pandya Left Out of T20 World Cup Playing XI

ಬೌಲರ್‌ಗಳ ಆಯ್ಕೆ ಹೇಗಿದೆ?

ಇನ್ನು ವೀರೇಂದ್ರ ಸೆಹ್ವಾಗ್‌ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿದ ತಂಡದಲ್ಲಿ ವೇಗದ ಬೌಲರ್‌ಗಳಾಗಿ ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್‌ ಸಿರಾಜ್ ಸ್ಥಾನ ಪಡೆದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡುತ್ತಿರುವ ಸಂದೀಪ್‌ ಶರ್ಮಾ ಚುಟುಕು ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸ್ಪಿನ್‌ ಬೌಲರ್‌ ಆಗಿ ಕುಲ್ದೀಪ್‌ ಯಾದವ್ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+