Virat Kohli Hairstyle: ಕಿಂಗ್‌ ಕೊಹ್ಲಿ ಒಂದು ಬಾರಿ ಹೇರ್‌ಸ್ಟೈಲ್‌ಗೆ ಎಷ್ಟು ಖರ್ಚು ಮಾಡುತ್ತಾರೆ?-ಸಲೂನ್‌ ಮಾಲೀಕ ಹೇಳಿದ್ದೇನು

Virat Kohli Hairstyle: ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡುತ್ತಿರುವ ವಿರಾಟ್‌ ಕೊಹ್ಲಿ ಅವರ ಹೇರ್‌ಸ್ಟೈಲ್‌ಗೆ ಯುವಪೀಳಿಗೆಯ ಯುವಕರು ಫಿಧಾ ಆಗಿದ್ದಾರೆ. ಅಲ್ಲದೆ, ಕಟ್ಟಿಂಗ್‌ ಶಾಪ್‌ಗಳಿಗೆ ಹೋದಾಗಲೆಲ್ಲ ಬಹುತೇಕ ಯುವಕರು ಕೊಹ್ಲಿ ಕಟಿಂಗ್‌ ಮಾಡಿಅಂತಲೇ ಹೇಳುತ್ತಾರೆ. ಅಷ್ಟರ ಮಟ್ಟಿದೆ ವಿರಾಟ್ ಕೊಹ್ಲಿ ಹೇರ್‌ಸ್ಟೈಲ್‌ ಫೇಮಸ್‌ ಆಗಿದೆ. ಹಾಗಾದರೆ ಕೊಹ್ಲಿ ಒಂದು ಬಾರಿ ಹೇರ್ ಕಟಿಂಗ್‌ ಮಾಡಿಸಲು ಎಷ್ಟು ಹಣ ಖರ್ಚು ಮಾಡುತ್ತಾರೆ. ಈ ಬಗ್ಗೆ ಹೇರ್‌ ಸಲೂನ್‌ ಶಾಪ್‌ ಮಾಲೀಕ ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.

2024ನೇ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಹೊರತುಪಡಿಸಿದರೆ ಅತ್ಯಂತ ಸ್ಟೈಲಿಶ್‌ ಭಾರತೀಯ ಕ್ರಿಕೆಟಿಗರಲ್ಲೊಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಕೊಹ್ಲಿ ಅವರ ಡ್ರೆಸಿಂಗ್ ಸೆನ್ಸ್‌, ಹೇರ್‌ ಸ್ಟೈಲ್‌ಗಾಗಿಯೇ ಅಭಿಮಾನಿ ಬಳಗ ಇದೆ.

Virat Kohli Hairstyle How much Cost spend to hair cut for one time

ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್‌ ತಂಡದ ಆಟಗಾರರು, ಬಾಲಿವುಡ್‌ನ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಖ್ಯಾತ ಹೇರ್‌ಸ್ಟೈಲಿಸ್ಟ್‌ ಆಲಿಮ್‌ ಹಕೀಮ್‌ ಅವರ ಸಲೂನ್‌ಗೆ ಭೇಟಿ ನೀಡುತ್ತಿರುವುದನ್ನು ಹಲವು ಬಾರಿ ನೋಡಿರುತ್ತೀರಿ. ಇನ್ನು ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್‌ ಧೋನಿ ಆಕಿಮ್‌ ಹಲೀಮ್‌ ಅವರ ಬಳಿ ಹೇರ್‌ಸ್ಟೈಲಿಂಗ್‌ ಮಾಡಿಸುವುದು ಹೊಸ ವಿಷಯವಲ್ಲ. ಆದರೆ ಒಂದು ಬಾರಿ ಏರ್‌ ಕಟಿಂಗ್‌ಗೆ ಎಷ್ಟು ಚಾರ್ಜ್‌ ಮಾಡುತ್ತಾರೆ ಎನ್ನುವುದೇ ಬಹುತೇಕ ಮಂದಿನ ಪ್ರಶ್ನೆಯಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರು ಆಕಿಮ್‌ ಹಲೀಮ್‌ ಅವರು, ಧೋನಿ ಸರ್ ಮತ್ತು ವಿರಾಟ್‌ ಅವರು ತುಂಬಾ ಹಳೆಯ ಸ್ನೇಹಿತರು. ಅವರು ತುಂಬ ವರ್ಷಗಳಿಂದಲೂ ನಮ್ಮ ಹೇರ್‌ ಸಲೂನ್‌ಗೆ ಭೇಟಿ ಕೊಡುತ್ತಿದ್ದಾರೆ. ಇದೀಗ ಐಪಿಎಲ್‌ ನಡೆಯುತ್ತಿರುವುರಿಂದ ವಿರಾಟ್‌ ಕೊಹ್ಲಿ ಅವರು ವಿಭಿನ್ನವಾಗಿ ಹೇರ್‌ ಕಟ್ಟ ಮಾಡಿಸಿದ್ದಾರೆ. ಪ್ರತಿ ಬಾರಿಯೂ ಅವರೇ ಹೊಸ ರೀತಿಯಾಗಿ ಕಟಿಂಗ್‌ ಮಾಡುವಂತೆ ನಮಗೆ ಸಲಹೆ ನೀಡುತ್ತಾರೆ ಎಂದರು.

ಪ್ರತಿಬಾರಿ ನಾವಿಬ್ಬರೂ ಭೇಟಿ ಮಾಡಿದಾಗ ಮುಂದಿನ ಬಾರಿ ಯಾವ ರೀತಿಯ ಹೇರ್‌ಕಟ್‌ ಮಾಡಿಸಬೇಕು ಎಂಬುದರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಅಲ್ಲದೆ ಅವರು ಪ್ರತಿಬಾರಿಯೂ ಮಾಡಿಸುವ ಕಟ್ಟಿಂಗ್‌ ಭಾರೀ ಟ್ರೆಂಡ್‌ ಆಗುತ್ತದೆ ಹಾಗೂ ಹಲವರು ಅದೇ ರೀತಿ ಹೇರ್‌ ಕಟಿಂಗ್‌ ಮಾಡಿಸುತ್ತಾರೆ.

ವಿರಾಟ್‌ ಕೊಹ್ಲಿ ವಿಶ್ವಾದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೆ, ಕೊಹ್ಲಿ ಹೇರ್‌ಸ್ಟೈಲ್‌ ಅನ್ನು ಬಹುತೇಕರು ಅನುಸರಣೆ ಮಾಡುತ್ತಾರೆ. ಇನ್ನು ಸ್ಟೈಲ್‌ ವಿಚಾರಕ್ಕೆ ಬಂದರೆ ವಿರಾಟ್‌ ಕೊಹ್ಲಿ ಯಾವತ್ತಿದ್ದರೂ ನಂಬರ್‌ ಒನ್‌ ಎಂದು ಹೇಳಿದರೆ ತಪ್ಪಾಗಲಾರದು ಎಂದು ಹೇಳಿದ್ದಾರೆ.

ಕೊಹ್ಲಿ ಪ್ರತಿಬಾರಿಯೂ ಕಟಿಂಗ್‌ ಮಾಡಿಸಲು ಬಂದಾಗ ಎಷ್ಟು ಚಾರ್ಜ್‌ ಮಾಡುತ್ತೀರಿ ಎಂದು ಆಕಿಮ್‌ ಹಲೀಮ್‌ ಅವರ ಬಳಿ ಕೇಳಿದಾಗ ಅವರು, ನಾನು ವಿಧಿಸುವ ಶುಲ್ಕ ತುಂಬಾ ಸರಳವಾಗಿದ್ದು, ಎಲ್ಲಾರಿಗೂ ತಿಳಿರುವಂತೆ ನನ್ನ ಸಲೂನ್‌ನಲ್ಲಿ ದರಗಳು 1 ಲಕ್ಷದಿಂದ ಆರಂಭ ಆಗುತ್ತವೆ. ಆದರೆ ಸೆಲೆಬ್ರೆಟಿಗಳಿಗೆ ವಿಧಿಸುವ ದರವನ್ನು ಮಾತ್ರ ನಾನು ಹೇಳಲು ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+