RCB: ಪಂದ್ಯ ಗೆಲ್ಲಕ್ಕೆ ಆಗದೇ ಇದ್ರೂ ಇದಕ್ಕೇನು ಕಡಿಮೆ ಇಲ್ಲ ಎಂದ ಫ್ಯಾನ್ಸ್!

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಸೋಲುಗಳನ್ನು ಕಂಡಿದೆ. ಆಡಿರುವ ಎಂಟು ವರ್ಷಗಳಲ್ಲಿ ಏಳು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಕಂಡಿದೆ. ಸತತ ಸೋಲುಗಳ ನಡುವೆಯೂ ಅಭಿಮಾನಿಗಳು ಮಾತ್ರ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ, ಆದರೆ ಈಗ ಆಟಗಾರರ ವರ್ತನೆ ಕಂಡು ಅಭಿಮಾನಿಗಳಿಗೂ ಕೋಪ ಬಂದಿದೆ.

ಈಗಾಗಲೇ ಏಳು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್ ಕನಸು ಬಹುತೇಕ ಕಮರಿ ಹೋಗಿದೆ. ಇನ್ನು ಆರು ಪಂದ್ಯಗಳು ಮಾತ್ರ ಬಾಕಿ ಇದ್ದು ಎಲ್ಲಾ ಪಂದ್ಯಗಳನ್ನು ಗೆದ್ದು, ಮುಂದಿನ ಆವೃತ್ತಿಯಲ್ಲಾದರೂ ಚನ್ನಾಗಿ ಆಡುವ ಭರವಸೆ ನೀಡಬೇಕಿದೆ.

Fans Criticize Virat Kohli amp amp Co as RCB Players Attend Party Amid Poor Performance in IPL 2024

ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿದ ಬಳಿಕ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹೈದರಾಬಾದ್‌ನಲ್ಲಿ ಈ ಪಂದ್ಯ ನಡೆಯಲಿದ್ದು ಆರ್‌ಸಿಬಿ ಆಟಗಾರರು ಈಗಾಗಲೇ ಮುತ್ತಿನ ನಗರಿಗೆ ತೆರಳಿದ್ದಾರೆ.

ಅಭಿಮಾನಿಗಳಿ ಕೋಪ ಯಾಕೆ?

ಸತತ ಸೋಲುಗಳ ನಡುವೆಯೂ ಹೈದರಾಬಾದ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಆಟಗಾರರು ಕೊಹ್ಲಿ ಒಡೆತನದ ಒನ್‌8 ಹೋಟೆಲ್‌ನಲ್ಲಿ ಪಾರ್ಟಿ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಒಂದು ಕಡೆ ತಂಡ ಸತತವಾಗಿ ಸೋಲುತ್ತಿದ್ದರೆ, ಇವರು ಪಾರ್ಟಿ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒನ್‌8 ಅಂದರೆ ಎಂಟರಲ್ಲಿ ಒಂದು ಪಂದ್ಯ ಗೆದ್ದಿದ್ದೇವೆ ಎಂದು, ಕೊಹ್ಲಿ ಪಾಯಿಂಟ್ಸ್ ಟೇಬಲ್‌ನಲ್ಲೂ ತನ್ನ ಬ್ರಾಂಡ್‌ ಪ್ರಮೋಟ್ ಮಾಡುತ್ತಿದ್ದಾರೆ ಎಂದು ಓರ್ವ ಅಭಿಮಾನಿ ಕಾಲೆಳದಿದ್ದಾರೆ.

ಮತ್ತೆ ಕೆಲವರು ಐಪಿಎಲ್ ಎಂದರೆ ರಜಾ ದಿನಗಳಂತೆ ಭಾವಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯೆ ನೀಡಿ ಇವರು ರಿಲ್ಯಾಕ್ಸ್ ಮಾಡುತ್ತಿರುವುದು ನೋಡಿದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಇವರೇ ಮೊದಲ ಸ್ಥಾನದಲ್ಲಿದ್ದಾರಾ ಎನ್ನುವ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ.

ಪ್ಲೇಆಫ್‌ಗೆ ಇದ್ಯಾ ಅವಕಾಶ?

ಆಡಿರುವ ಎಂಟು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿರುವ ಆರ್‌ಸಿಬಿ ತಂಡಕ್ಕೆ ಪ್ಲೇಆಫ್ ತಲುಪುವ ಸಾಧ್ಯತೆ ಬಹುತೇಕ ಇಲ್ಲವಾಗಿದೆ. ಆದರೂ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ.

ಶುಕ್ರವಾರ (ಏಪ್ರಿಲ್ 25) ರಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರ್‌ಸಿಬಿ ವಿರುದ್ಧ 288 ರನ್‌ಗಳನ್ನು ಕಲೆಹಾಕಿತ್ತು, ಈಗ ಮತ್ತೊಂದು ಹೈಸ್ಕೋರಿಂಗ್ ಪಂದ್ಯದಕ್ಕಾಗಿ ಹೈದರಾಬಾದ್ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+