RR vs RCB: ಜೈಪುರ್‌ದಲ್ಲಿ 'ರಾಜ'ನಂತೆ ಮೆರೆದ ವಿರಾಟ್‌ ಕೊಹ್ಲಿ: ಐಪಿಎಲ್‌ನಲ್ಲಿ ಎಂಟನೇ ಶತಕ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ. ಜೈಪುರ್‌ದಲ್ಲಿ ನಡೆದ 17ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಮೂಲಕ ತಮ್ಮಲ್ಲಿ ಟಿ20 ಕ್ರಿಕೆಟ್ ಆಡುವ ಕ್ಷಮತೆ ಇನ್ನು ಇದೆ ಎಂಬುದನ್ನು ಸಾಬೀತು ಪಡಿಸಿದರು.

ಆರಂಭದಿಂದಲೂ ಮೈದಾನದಲ್ಲಿ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದ ವಿರಾಟ್ ಯಾವ ಹಂತದಲ್ಲೂ ಲೂಸ್‌ ಶಾಟ್ ಬಾರಿಸಲೇ ಇಲ್ಲ. ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವಿರಾಟ್‌ ಕೊಹ್ಲಿ ತಮ್ಮ ಘನತೆಗೆ ತಕ್ಕ ಅಟವನ್ನು ಆಡಿದರು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡಕ್ಕೆ ವರವಾಯಿತು. ಮೈದಾನದಲ್ಲಿ ರನ್‌ಗಳ ಮಹಲ್ ಕಟ್ಟಿದ ಕೊಹ್ಲಿ ಅಭಿಮಾನಿಗಳನ್ನು ರಂಜಿಸಿದರು.

RR vs RCB Virat Kohli scored the eighth century in IPL

ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸುತ್ತಿರುವ ವಿರಾಟ್‌ ಕೊಹ್ಲಿ, ಅದೇ ಲಯವನ್ನ ಜೈಪುರ್‌ದಲ್ಲೂ ಮುಂದುವರೆಸಿದರು. ಆರಂಭದಲ್ಲಿ ವಿರಾಟ್‌ ಅಂಗಳಕ್ಕೆ ಬರುತ್ತಿದ್ದಂತೆ ಇಂದು ಬಿಗ್ ಇನ್ನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಅದರಂತೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಅಮೋಘ ಬ್ಯಾಟಿಂಗ್ ನಡೆಸಿದರು.

ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ 105.33ರ ಸರಾಸರಿಯಲ್ಲಿ 316 ರನ್‌ ಸಿಡಿಸಿದ್ದಾರೆ. ರಾಜಸ್ಥಾನ ವಿರುದ್ಧ ಕೊಹ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ದಾಖಲಾದ ಮೊದಲ ಶತಕವಾಗಿದೆ. ಆರ್‌ಸಿಬಿ ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ಕಲೆ ಹಕಿದ ರನ್‌ನ ಶೇಕಡಾ 38 ರಷ್ಟು ರನ್‌ಗಳನ್ನು ಚೇಸಿಂಗ್ ಸ್ಟಾರ್‌ ಕಲೆ ಹಾಕಿದ್ದಾರೆ. ಈ ಋತುವಿನಲ್ಲಿ ಇವರು ಈಗಾಗಲೇ 2 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ.

RR vs RCB Virat Kohli scored the eighth century in IPL

ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ ಸಹಾಯದಿಂದ 113 ರನ್‌ ಸಿಡಿಸಿದರು. ಈ ಹಿಂದೆ 2016ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 113 ರನ್‌ಗಳ ಇನಿಂಗ್ಸ್ ಕೊಹ್ಲಿ ಆಡಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ 113 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಮ್ಮದೇ ದೊಡ್ಡ ಸ್ಕೋರ್ ಅನ್ನು ಸರಿಗಟ್ಟಿದ್ದಾರೆ. ಇದು ಐಪಿಎಲ್ 2024ರಲ್ಲೂ ಅವರ ದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮೊದಲು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬಾರಿಸಿದ್ದ 83 ರನ್‌ಗಳು ಪ್ರಸಕ್ತ ಋತುವಿನಲ್ಲಿ ಗರಿಷ್ಠ ಸ್ಕೋರ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+