Shubman Gill - Ishan Kishan: ಕಿಶನ್-ಗಿಲ್ ಭಾರತ ತಂಡದಲ್ಲಿ ಸೀತಾ-ಗೀತಾ ಇದ್ದಂತೆ ಎಂದ ವಿರಾಟ್ ಕೊಹ್ಲಿ
ಭಾರತ ತಂಡಕ್ಕಾಗಿ ಆಡುವ ಆಟಗಾರರ ಮಧ್ಯೆ ಸಾಕಷ್ಟು ಉತ್ತಮ ಬಾಂಧವ್ಯ ಇರುತ್ತದೆ. ಯುವ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ನಡುವೆ ಕೂಡ ಅತ್ಯುತ್ತಮ ಬಾಂಧವ್ಯ ಇದೆ. ಮೈದಾನದ ಒಳಗೆ, ಹೊರಗೆ ಇಬ್ಬರೂ ಕೂಡ ಆಪ್ತ ಸ್ನೇಹಿತರಂತೆ ಇರುತ್ತಾರೆ.
ವಿರಾಟ್ ಕೊಹ್ಲಿ ಇವರಿಬ್ಬರ ಆತ್ಮೀಯತೆ ಬಗ್ಗೆ ಮಾತನಾಡಿದ್ದು, ಇಬ್ಬರೂ ಕೂಡ ಅವಳಿಯಂತೆ ಯಾವಾಗಲೂ ಜೊತೆಗಿರುತ್ತಾರೆ ಎಂದು ಹೇಳಿದ್ದಾರೆ. ಮೈದಾನದ ಒಳಗೆ ಮತ್ತು ಹೊರಗೆ ಇಬ್ಬರ ನಡುವಿನ ಅನನ್ಯ ಬಾಂಧವ್ಯವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.

ಇಬ್ಬರು ಆಟಗಾರರು ಟೀಮ್ ಇಂಡಿಯಾಕ್ಕಾಗಿ ಆಡುವಾಗ, ವಿಶೇಷವಾಗಿ ದೀರ್ಘ ಪ್ರವಾಸಗಳಲ್ಲಿ ಪರಸ್ಪರ ಆನಂದಿಸುತ್ತಾರೆ. ಇಶಾನ್ ಮತ್ತು ಗಿಲ್ ಇಬ್ಬರೂ ಕಳೆದ ಎರಡು ವರ್ಷಗಳಿಂದ ಭಾರತೀಯ ತಂಡದ ಭಾಗವಾಗಿದ್ದಾರೆ.
ಊಟದ ಸಮಯವಾಗಲಿ ಅಥವಾ ತಂಡದ ಚರ್ಚೆಯಾಗಲಿ ಇಬ್ಬರೂ ಪರಸ್ಪರರ ಜೊತೆಯಲ್ಲಿ ಎಂಜಾಯ್ ಮಾಡುವ ಕಾರಣ ಇಬ್ಬರನ್ನು ಪರಸ್ಪರ ಬೇರ್ಪಡಿಸುವುದು ಕಷ್ಟ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸೀತಾ ಮತ್ತು ಗೀತಾ ಇದ್ದಂತೆ
"ತುಂಬಾ ತಮಾಷೆಯಾಗಿದೆ, ಸೀತಾ ಮತ್ತು ಗೀತಾ (ಇಶಾನ್ ಮತ್ತು ಶುಭಮನ್ ಗಿಲ್). ನನಗೂ ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಐಡಿಯಾ ಇಲ್ಲ. ಹೆಚ್ಚು ಹೇಳಲು ಸಾಧ್ಯವಿಲ್ಲ ಆದರೆ ಈ ವ್ಯಕ್ತಿ ಪ್ರವಾಸದ ಸಮಯದಲ್ಲಿ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ. ನಾವು ಊಟಕ್ಕಾಗಿ ಹೊರಬಂದರೆ, ಅವರು ಒಟ್ಟಿಗೆ ಬರುತ್ತಾರೆ. ಚರ್ಚೆಯ ಸಮಯದಲ್ಲಿ ಅವರು ಯಾವಾಗಲೂ ಒಟ್ಟಿಗೆ ಇರುತ್ತಾರೆ, ನಾನು ಅವರು ಒಂಟಿಯಾಗಿ ಇರುವುದನ್ನು ನೋಡಿಲ್ಲ, ಅವರು ಉತ್ತಮ ಸ್ನೇಹಿತರು" ಎಂದು ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಹೇಳಿದ್ದಾರೆ.
ಶುಭಮನ್ ಗಿಲ್ ಸದ್ಯ ಗುಜರಾತ್ ಜೈಂಟ್ಸ್ ತಂಡದ ನಾಯಕನಾಗಿ ಆಡುತ್ತಿದ್ದರೆ, ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ.
ಇಶಾನ್ ಕಿಶನ್ ಐಪಿಎಲ್ 2024ರ ಆವೃತ್ತಿಯಲ್ಲಿ ಇನ್ನೂ ದೊಡ್ಡ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ದೊಡ್ಡ ಮೊತ್ತ ಗಳಿಸುತ್ತಿದ್ದಾರೆ.
ಇಬ್ಬರೂ ಕೂಡ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಡುವ ವಿಶ್ವಾಸ ಹೊಂದಿದ್ದಾರೆ. ಶುಭಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಅವರ ಪ್ರದರ್ಶನ ಹೀಗೆ ಮುಂದುವರೆದರೆ ತಂಡಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆ ಇದೆ. ಇಶಾನ್ ಕಿಶನ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಲು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರು ಈ ವರ್ಷ ಬಿಸಿಸಿಐ ಕೇಂದ್ರ ಒಪ್ಪಂದವನ್ನು ಕೂಡ ಕಳೆದುಕೊಂಡಿದ್ದಾರೆ.












Click it and Unblock the Notifications