• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್: ಏಕಾಂಗಿಯಾಗಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಪತ್ನಿ

|
Google Oneindia Kannada News

ಪಾಟ್ನಾ, ಮೇ 17: ಕೊರೊನಾ ವೈರಸ್‌ನಿಂದ ಮೃತಪಟ್ಟ ಪತಿಯ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದ ಯಾರೊಬ್ಬರೂ ಮುಂದೆ ಬಾರದ ಕಾರಣ ಪತ್ನಿಯೇ ಏಕಾಂಗಿಯಾಗಿ ಅಂತಿಮ ವಿಧಿವಿಧಾನವನ್ನು ನಡೆಸಿದ ಘಟನೆ ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿ ನಡೆದಿದೆ.

ಕಾನ್ಪುರದ ನಿವಾಸಿಯಾದ ಹರಿಕಾಂತ್ ರಾಯ್ ಎಂಬವರು ಗ್ರಾಮದಲ್ಲಿ ನಡೆದ ಅಷ್ಟ್ಯಂ ಎಂಬ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಂತರ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಆ ಬಳಿಕ ರಾಯ್ ಅವರ ಆರೋಗ್ಯ ಭಾರೀ ಪ್ರಮಾಣದಲ್ಲಿ ಹದಗೆಟ್ಟು ರೋಸರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ಅವರನ್ನು ದರ್ಬಂಗಾ ಮೆಡಿಕಲ್ ಕಾಲೇಜ್‌ಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಆದರೆ ರಾಯ್ ಈ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರು ಎಳೆದರು.

ಹರಿಕಾಂತ್ ರಾಯ್ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂಬ ಕಾರಣದಿಂದಾಗಿ ಬಹುತೇಕ ಅವರ ಸಂಬಂಧಿಕರು ಈ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಅವರಿಂದ ನೆರವಿಗಾಗಿ ಹರಿಕಾಂತ್ ರಾಯ್ ಅವರ ಪತ್ನಿ ಬೇಡಿಕೊಳ್ಳುತ್ತಲೇ ಇದ್ದರು. ಶುಕ್ರವಾರ ರಾಯ್ ಮೃತಪಟ್ಟ ನಂತರ 18 ಗಂಟೆಗಳ ಕಾಲ ಆಸ್ಪತ್ರೆಯ ಶವಾಗಾರದಲ್ಲಿ ಅವರ ಶವವನ್ನು ಇರಿಸಲಾಗಿತ್ತು. ಆದರೆ ಅಂತಿಮ ಕ್ರಿಯೆ ನಡೆಸಲು ಕುಟುಂಬದ ಯಾರೊಬ್ಬರು ಅವರ ಪತ್ನಿಗೆ ಸಾಥ್ ನೀಡಲಿರಲಿಲ್ಲ.

ಈ ವಿಚಾರ ತಿಳಿದ ಕಬೀರ್ ಸೇವಾ ಸಂಸ್ಥಾನ್ ಎಂಬ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತರು ಹರಿಕಾಂತ್ ರಾಯ್ ಅವರ ಪತ್ನಿಯ ನೆರವಿಗೆ ಬಂದರು. ಈ ಕಾರ್ಯಕರ್ತರ ನೆರವಿನಿಂದಿಗೆ ರಾಯ್ ಅವರ ಪತ್ನಿ ದೇವಿ ಪಿಪಿಇ ಕಿಟ್ ಧರಿಸಿ ಪತಿಯ ದೇಹವನ್ನು ಕೊವಿಡ್ ನಿಯಮದ ರೀತಿಯಲ್ಲಿ ಪಡೆದುಕೊಂಡರು

ಈ ಸಾಮಾಜಿಕ ಕಾರ್ಯರ್ತರ ನೆರವಿನೊಂದಿಗೆ ದೇವಿ ಅವರು ಸ್ವತಃ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಪತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ. ಮೃತ ಹರಿಕಾಂತ್ ರಾಯ್ ಪತ್ನಿಯ ಜೊತೆಗೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

English summary
Bihar woman Devi performs funeral ceremony of her husband who died of coronavirus complications, alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X