Bengaluru: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕೆಜಿಗಟ್ಟಲೆ ಚಿನ್ನ, ವಜ್ರ ಮತ್ತು ಹಣ ಪತ್ತೆ
ಬೆಂಗಳೂರು, ಏಪ್ರಿಲ್ 24: 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ, ಚಿನ್ನ, ಬೆಳ್ಳಿ ಸೇರಿದಂತೆ ಬೆಲೆವಾಳುವ ವಸ್ತುಗಳನ್ನು ಅಕ್ರಮವಾಗಿ ಸಾಗಿಸದಂತೆ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಅಕ್ರಮ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಕಾರ್ಯಾಚರಣೆ ಮುಂದುವರಿದ ಭಾಗವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 16 ಕಡೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದು, ಕೆಜಿಗಟ್ಟಲೆ ಚಿನ್ನ, ವಜ್ರ ಮತ್ತು ಹಣ ಪತ್ತೆಯಾಗಿದೆ. ಬರೋಬ್ಬರಿ 16.10 ಕೋಟಿ ಮೌಲ್ಯದ 22 ಕೆಜಿ 923 ಗ್ರಾಂ ಚಿನ್ನ, 6 ಕೋಟಿ 45 ಲಕ್ಷ ಮೌಲ್ಯದ ವಜ್ರ ಹಾಗೂ 1.33 ಕೋಟಿ ನಗದು ಪತ್ತೆಯಾಗಿದೆ.

ಎಲ್ಲಿಲ್ಲಿ ಎಷ್ಟು ಚಿನ್ನಾಭರಣೆ ಪತ್ತೆ? ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಲ್ಲಿ 16 ಕಡೆ ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಕೆಜಿಗಟ್ಟಲೆ ಚಿನ್ನ, ನಗದು ಪತ್ತೆಯಾಗಿದೆ.
1) ಶಂಕರಪುರ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ)- 3 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆ.
2) ಶಾರದದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ)- 3 ಕೋಟಿ 39 ಲಕ್ಷ ಮೌಲ್ಯದ 4 ಕೆಜಿ 800 ಗ್ರಾಂ ಚಿನ್ನಾಭರಣ ಪತ್ತೆ.
3) ಮರ್ಕೈಂಟಲ್ ಬ್ಯಾಂಕ್ ( ಬೆಂಗಳೂರು ದಕ್ಷಿಣ ಲೋಕಸಭಾ)-2 ಕೋಟಿ 13 ಲಕ್ಷ ಮೌಲ್ಯದ 3 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆ.
4) ಜಯನಗರ 3 ನೇ ಬ್ಲಾಕ್ (ಬೆಂಗಳೂರು ದಕ್ಷಿಣ ಲೋಕಸಭಾ)- 5 ಕೋಟಿ 33 ಲಕ್ಷ ಮೌಲ್ಯದ 7 ಕೆಜಿ 598 ಗ್ರಾಂ ಚಿನ್ನಾಭರಣ ಪತ್ತೆ.
5) ಸಾರಸ್ವತ್ ಬ್ಯಾಂಕ್, ಚಾಮರಾಜಪೇಟೆ ( ಬೆಂಗಳೂರು ದಕ್ಷಿಣ ಲೋಕಸಭಾ) -84 ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆ.
6) ಅಂಚೆ ಕಚೇರಿ, ಬಸವನಗುಡಿ ( ಬೆಂಗಳೂರು ದಕ್ಷಿಣ ಲೋಕಸಭಾ)- 3 ಲಕ್ಷ 34 ಸಾವಿರ ಮೌಲ್ಯದ 6.38 ಕ್ಯಾರೆಟ್ ವಜ್ರ ಪತ್ತೆ.
7) ಮಾತಾ ಶಾರದಾ ದೇವಿ ರಸ್ತೆ (ಬೆಂಗಳೂರು ದಕ್ಷಿಣ ಲೋಕಸಭಾ)- 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆ.
8) ಜಯನಗರ ( ಬೆಂಗಳೂರು ದಕ್ಷಿಣ ಲೋಕಸಭಾ)- 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆಯಾಗಿದೆ ಎಂದು ವರದಿಯಾಗಿದೆ.












Click it and Unblock the Notifications