ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ! ವೃತ್ತಿಯಲ್ಲಿ ಪದೋನ್ನತಿ, ಧನಲಕ್ಷ್ಮಿಯ ಕೃಪೆಯಿಂದ ಹಣದ ಸುರಿಮಳೆ
Zodiac Luck: ಗ್ರಹಗಳು ತಮ್ಮ ಸಂಚಾರದ ಮೂಲಕ ರಾಶಿಯನ್ನು ಬದಲಾಯಿಸುವಂತೆಯೇ, ನಕ್ಷತ್ರವನ್ನು ಕೂಡಾ ಬದಲಾಯಸುತ್ತವೆ. ಜುಲೈ 19, 2026 ರಂದು, ಅಂದರೆ ನಾಳೆ ಗುರು ಪುಷ್ಯ ನಕ್ಷತ್ರದ ಮೂರನೇ ಹಂತಕ್ಕೆ ಕಾಲಿಡುತ್ತಿದ್ದಾನೆ. ಮರುದಿನ, ಜುಲೈ 20, 2026 ರಂದು, ಬೆಳಿಗ್ಗೆ 11:33 ಕ್ಕೆ, ಸೂರ್ಯ ಕೂಡಾ ಪುಷ್ಯ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಪುಷ್ಯ ನಕ್ಷತ್ರದಲ್ಲಿ ಸೂರ್ಯ ಮತ್ತು ಗುರುಗಳ ನಡುವೆ ಸಂಯೋಗವನ್ನು ಸೃಷ್ಟಿಸುತ್ತಾನೆ.
ಇದಾದ ನಂತರ, ಗುರುವು ಆಗಸ್ಟ್ 19, 2026 ರವರೆಗೆ ಪುಷ್ಯ ನಕ್ಷತ್ರದಲ್ಲಿಯೇ ಇರುತ್ತಾನೆ. ಆಗಸ್ಟ್ 3 ರಂದು ಬೆಳಿಗ್ಗೆ 10:29 ರವರೆಗೆ ಸೂರ್ಯನು ಕೂಡಾ ಪುಷ್ಯ ನಕ್ಷತ್ರದಲ್ಲಿ ಇರುತ್ತಾನೆ. ಪರಿಣಾಮವಾಗಿ, ಈ ಸಂಯೋಗವು ಜುಲೈ 20, 2026 ರಿಂದ ಆಗಸ್ಟ್ 3, 2026 ರವರೆಗೆ ಪುಷ್ಯ ನಕ್ಷತ್ರದಲ್ಲಿ ಸಕ್ರಿಯವಾಗಿರುತ್ತದೆ. ಸೂರ್ಯ ಮತ್ತು ಗುರುವಿನ ಸಂಯೋಗದೊಂದಿಗೆ ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಈ ಮೂಲಕ 5 ರಾಶಿಯವರ ಶುಭ ಸಮಯ ಆರಂಭವಾಗುವುದು. ಇದು ವೃತ್ತಿಯಲ್ಲಿ ಪ್ರಗತಿ, ಸಂಪತ್ತಿನಲ್ಲಿ ಹೆಚ್ಚಳ ಮತ್ತು ಸಂಬಂಧಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.

5 ರಾಶಿಯವರಿಗೆ ಅತ್ಯಂತ ಶುಭವಾಗಿರುವುದು ಈ ಸಮಯ
ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ, ಈ ಸಮಯವು ವೃತ್ತಿಜೀವನದಲ್ಲಿ ಗೌರವ ಮತ್ತು ಮನ್ನಣೆಯನ್ನು ತರಬಹುದು. ಇಲ್ಲಿಯವರೆಗಿನ ಕಠಿಣ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಆದಾಯ ಹೆಚ್ಚಾಗುವುದು. ಉತ್ತಮ ಅವಕಾಶಗಳು ಒಲಿದು ಬರುವುದು. ಸೂಕ್ತ ಸಮಯದಲ್ಲಿ ಸರಿಯಾದ ಅವಕಾಶಗಳನ್ನು ಬಳಸಿಕೊಳ್ಳುವುದು ಪ್ರಯೋಜನಕಾರಿಯಾಗಿರಲಿದೆ. ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರುವುದು.
ಕನ್ಯಾ ರಾಶಿ (Virgo): ಈ ಸಮಯದಲ್ಲಿ ಕನ್ಯಾ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗುವುದು.ಮನದ ಪ್ರಮುಖ ಆಸೆ ಈಡೇರಬಹುದು. ಆದರೆ ಕೆಲಸದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬೇಡಿ. ಪ್ರಗತಿಗೆ ಹೊಸ ಅವಕಾಶಗಳ ಹಾದಿ ತೆರೆದುಕೊಳ್ಳುವುದು. ಸರಿಯಾದ ನಿರ್ಧಾರವನ್ನು ಈ ಸಮಸಯದಲ್ಲಿ ತೆಗೆದುಕೊಂಡರೆ ದೊಡ್ಡ ಮಟ್ಟದ ಲಾಭವಾಗುವುದು. ಆರ್ಥಿಕ ಸಮಸ್ಯೆ ಸುಧಾರಿಸುವುದು.
ವೃಶ್ಚಿಕ ರಾಶಿ (Scorpio): ಈ ಸಮಯದಲ್ಲಿ ವೃಶ್ಚಿಕ ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಪ್ರತಿ ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುವುದು. ಇದು ಅವರಿಗೆ ಪ್ರಮುಖ ಕೆಲಸಗಳಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತದೆ. ಆದಾಯದಲ್ಲಿ ಹೆಚ್ಚಳವಾಗುವುದು. ಸಾಲದಿಂದ ಮುಕ್ತಿ ಸಿಗುವುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುವುದು.
ಧನು ರಾಶಿ (Sagitarius): ಸೂರ್ಯ ಮತ್ತು ಗುರುವಿನ ಸಂಯೋಗವು ಧನು ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ತರಬಹುದು. ಬೇರೆ ಬೇರೆ ಮೂಲಗಳಿಂದ ಹಣವನ್ನು ಪಡೆಯುವ ಸೂಚನೆಗಳಿವೆ. ಈ ಹಣವನ್ನು ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಗಮನಾರ್ಹ ಲಾಭವನ್ನು ಪಡೆಯಬಹುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಉನ್ನತ ಸ್ಥಾನಮಾನ ಒಲಿಯುವುದು. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಇಳಿಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು.
ಮೀನ ರಾಶಿ (Pisces): ಪುಷ್ಯ ನಕ್ಷತ್ರದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗವು ಮೀನ ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ತರುತ್ತದೆ. ಗುರು ಮೀನ ರಾಶಿಯ ಅಧಿಪತಿ ಗ್ರಹ. ಈ ಸಂಯೋಗವು ಈ ಸಮಸಯದಲ್ಲಿ ಪ್ರೀತಿ, ಮದುವೆ, ಮಕ್ಕಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ತರಬಹುದು. ಬಹಳ ದಿನಗಳಿಂದ ಪೂರೈಸಬೇಕು ಅಂದುಕೊಂಡಿರುವ ಕೆಲಸ ಈ ಸಮಯದಲ್ಲಿ ನೆರವೇರುವುದು.
(ರಂಜಿತಾ ಆರ್.ಕೆ)


Click it and Unblock the Notifications
