ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
ಮಳೆ ಇಲ್ಲದೆ ಕನ್ನಡದ ರೈತರು ಪರದಾಡುವ ಸಮಯದಲ್ಲಿ ಕಳೆದ ವಾರ ಭರ್ಜರಿಯಾಗೇ, ಮಳೆರಾಯ ತನ್ನ ಕರುಣೆ ತೋರಿಸಿದ್ದಾನೆ. ಹಿಂಗೆ ಕಳೆದ ವಾರ ಭರ್ಜರಿಯಾಗಿ ಮಳೆ ಬಿದ್ದು ಏಪ್ರಿಲ್ 3ನೇ ವಾರದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬಂದಿತ್ತು. ಹೀಗೆ ಭಾರಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ಒಂದಷ್ಟು ಖುಷಿಪಟ್ಟರು. ಆದರೆ ಈಗ, ಏಪ್ರಿಲ್ 4ನೇ ವಾರಕ್ಕೆ ಮತ್ತೆ ಮಳೆ ಮೋಡಗಳು ಮರೆಯಾಗಿವೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಯಲ್ಲಿ ಈಗ ಮಳೆ ಮತ್ತೆ ಅಬ್ಬರಿಸಲಿದೆ ಗೊತ್ತಾ?
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರು ಇಲ್ಲದೆ ರೈತರು ಪರದಾಡಿ ಹೋಗಿದ್ದು, ನೀರಿಗೆ ಹೋರಾಟ ಮಾಡಿದ್ದಾರೆ. ಹೀಗಿದ್ದಾಗ ಕಳೆದ ವಾರ ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಉತ್ತಮವಾಗಿ ಮಳೆ ಬಿದ್ದಿತ್ತು. ಹಾಗೇ ಕರಾವಳಿ ಜಿಲ್ಲೆ ಭಾಗಕ್ಕೂ ಮಳೆಯ ಸಿಂಚನವಾಗಿತ್ತು. ಆದರೆ ಈ ವಾರ ಸಂಪೂರ್ಣವಾಗಿ ಮಳೆಯೇ ಬಂದ್ ಆಗಿದೆ. ಹಾಗಾದ್ರೆ ಮುಂದಿನ 24 ಗಂಟೆಯಲ್ಲಿ ಮಳೆ ಆಗಲಿದೆ ಅಂತಾ ಎಚ್ಚರಿಕೆ ನೀಡಿರುವ, ಕರ್ನಾಟಕದ ಆ ಜಿಲ್ಲೆಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಮಳೆ ಬಂತು ಮಳೆ.. ಮಳೆ ಬಂತು ಮಳೆ..
ಹೌದು, ಕಳೆದ ವಾರ ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜ ನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ & ಬೆಳಗಾವಿ, ಚಿಕ್ಕಮಗಳೂರು, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ವಾರ ಭಾಗಶಃ ಕರ್ನಾಟಕದಲ್ಲಿ ಮಳೆ ಬಂದ್ ಆಗಿ ಜನರು ಬೆಚ್ಚಿಬಿದ್ದಿದ್ದಾರೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ.

ಮಳೆ.. ಮಳೆ.. ಭಾರಿ ಮಳೆ!
ಕರ್ನಾಟಕದ ಮೈಸೂರು, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳು ಸೇರಿದಂತೆ, ಹಾವೇರಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡದಲ್ಲೂ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಇದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಬೀದರ್, ವಿಜಯಪುರ, ಕಲಬುರಗಿ ಸೇರಿ, ಯಾದಗಿರಿ ಹಾಗೂ ರಾಯಚೂರು ಭಾಗದಲ್ಲೂ ಭರ್ಜರಿ ಮಳೆಯಾಗುವ, ಮುನ್ಸೂಚನೆಯ ನೀಡಲಾಗಿದ್ದು ಕೃಷಿಕರು ಒಂದಷ್ಟು ನಿರಾಳರಾಗಿದ್ದಾರೆ.
ಬೆಂಗಳೂರಲ್ಲಿ ಭರ್ಜರಿ ಮಳೆ ಯಾವಾಗ?
ಮಳೆ.. ಮಳೆ.. ಬಿರು ಬೇಸಿಗೆ ನಡುವೆ ಕಳೆದ ವಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬಿದ್ದಿತ್ತು. ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಬೆಂಗಳೂರಿನ ಕಥೆ ಏನು? ಅತಿಹೆಚ್ಚು ಮಳೆ ಬೀಳುತ್ತಾ ಇದ್ದ ನಮ್ಮ ಬೆಂಗಳೂರಲ್ಲಿ ಈಗ ಮಳೆ ಯಾವಾಗ ಬರುತ್ತೆ? ಎನ್ನುವಾಗ ಶನಿವಾರ ಒಂದಷ್ಟು ಮಳೆ ಬಿದ್ದರೂ ಸಮಾಧಾನ ಆಗಿಲ್ಲ.












Click it and Unblock the Notifications