ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆಗಸ್ಟ್ 24ರ ಶ್ರೀರಾಮಾಯಣ ಯಾತ್ರೆ ರೈಲು ರದ್ದು

|
Google Oneindia Kannada News

ನವದೆಹಲಿ, ಆಗಸ್ಟ್ 23: ಆಗಸ್ಟ್ 24 ರಂದು ಹೊರಡಬೇಕಿದ್ದ ಭಾರತ್ ಗೌರವ್ ಸರಣಿಯ ಅಡಿಯಲ್ಲಿ ಎರಡನೇ ಶ್ರೀರಾಮಾಯಣ ಯಾತ್ರೆ ರೈಲು ಈಗ ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣದಿಂದ ರದ್ದುಗೊಂಡಿದೆ ಎಂದು ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್( IRCTC) ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

IRCTC ಈ ಹಿಂದೆ 19 ರಾತ್ರಿ ಮತ್ತು 20 ಹಗಲುಗಳ ಭಾರತ್ ಗೌರವ್ ಪ್ರವಾಸಿ ರೈಲು ಮೂಲಕ 'ಶ್ರೀ ರಾಮಾಯಣ ಯಾತ್ರೆ' ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿತ್ತು. ಪ್ರವಾಸವು ಆಗಸ್ಟ್ 24 ರಿಂದ ಪ್ರಾರಂಭವಾಗಬೇಕಿತ್ತು.

ನಾಳೆ (ಆಗಸ್ಟ್ 24) ನವ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ರೈಲು ಹೊರಡಬೇಕಿತ್ತು. ಆದರೆ ಒಂದು ದಿನದ ಮೊದಲು ಅದನ್ನು ರದ್ದುಗೊಳಿಸಲಾಗಿದೆ. ಈ ಯಾತ್ರೆಯಲ್ಲಿ ಪ್ರಯಾಣಿಕರು ಶ್ರೀರಾಮನಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಅಯೋಧ್ಯೆ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಸೇರಿದಂತೆ ಭಗವಾನ್ ರಾಮನಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳನ್ನು ನೋಡಲು ಈ ರೈಲನ್ನು ಪರಿಚಯಿಸಲಾಗಿದೆ.

ಮತ್ತೆ ಓಡಲಿದೆ 'ಶ್ರೀ ರಾಮಾಯಣ ಯಾತ್ರೆ' ವಿಶೇಷ ರೈಲು : 2 ದಿನ ಹೆಚ್ಚಳ, ಈ ಪ್ಯಾಕೇಜ್‌ ಬಗ್ಗೆ ತಿಳಿಯಿರಿಮತ್ತೆ ಓಡಲಿದೆ 'ಶ್ರೀ ರಾಮಾಯಣ ಯಾತ್ರೆ' ವಿಶೇಷ ರೈಲು : 2 ದಿನ ಹೆಚ್ಚಳ, ಈ ಪ್ಯಾಕೇಜ್‌ ಬಗ್ಗೆ ತಿಳಿಯಿರಿ

ದೆಹಲಿಯ ಸಫ್ದರ್‌ಜಂಗ್, ತುಂಡ್ಲಾ, ಗಾಜಿಯಾಬಾದ್, ಅಲಿಗಢ, ಕಾನ್ಪುರ್ ಮತ್ತು ಲಕ್ನೋದಿಂದ ಪ್ರಯಾಣಿಕರು ರೈಲು ಹತ್ತಬಹುದು.

Ramayana Yatra Train Cancelled Due to Less Passengers: IRCTC

ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಸಸ್ಯಾಹಾರಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುತ್ತದೆ. ಈ ಪ್ರವಾಸಿ ರೈಲನ್ನು ನೇಪಾಳದ ಜನಕ್‌ಪುರ ಧಾಮ್‌ಗೆ ಮತ್ತೆ ಕರೆದೊಯ್ಯಲಾಗುತ್ತದೆ.

ದೆಹಲಿಯಿಂದ ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ಫೆಬ್ರವರಿ 22 ರಂದು ಭಾರತೀಯ ರೈಲ್ವೆ ಆರಂಭಿಸಿತ್ತು. ಶ್ರೀ ರಾಮಾಯಣ ಯಾತ್ರಾ ವಿಶೇಷ ರೈಲು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು IRCTC ಯ ಶ್ರೀ ರಾಮಾಯಣ ಯಾತ್ರಾ ಪ್ರವಾಸಗಳ ಸರಣಿಯ ಭಾಗವಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಅಯೋಧ್ಯೆ ಮತ್ತು ವಾರಣಾಸಿ ಮೂಲಕ ತಮಿಳುನಾಡಿನ ರಾಮೇಶ್ವರಂಗೆ ಮೊದಲ ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ಪ್ರಯಾಣಿಸಿತ್ತು.

ಇತ್ತೀಚೆಗೆ, IRCTC ಈ ರೈಲಿಗೆ ಪ್ರಯಾಣದ ದಿನಗಳು, ದರಗಳು ಮತ್ತು ಸ್ಥಳಗಳ ವಿಷಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ.

ಈ ಹಿಂದೆ ಶ್ರೀರಾಮಾಯಣ ರೈಲಿನ ಪ್ರಯಾಣವು 17 ದಿನಗಳದ್ದಾಗಿತ್ತು, ಆದರೆ ಈಗ ರೈಲಿನ ಪ್ರಯಾಣವು 20 ದಿನಗಳವರೆಗೆ ಇರುತ್ತದೆ. ಹೊಸ ವೇಳಾಪಟ್ಟಿಯಲ್ಲಿ, ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಮೂರು ಹೊಸ ಧಾರ್ಮಿಕ ಸ್ಥಳಗಳನ್ನು ಸಹ ಸೇರಿಸಲಾಗಿದೆ. ಪ್ರಸ್ತುತ, ರೈಲು ಪ್ರಯಾಣಿಕರು ಬಿಹಾರದ ಬಕ್ಸರ್, ತಮಿಳುನಾಡಿನ ಕಾಂಚೀಪುರಂ ಮತ್ತು ತೆಲಂಗಾಣದ ಭದ್ರಾಚಲಂ ಅನ್ನು ಕೂಡ ತಲುಪಲಿದೆ.

ಈ ಪ್ರವಾಸದ ಅವಧಿಯಲ್ಲಿ, ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್. ನಂದಿಗ್ರಾಮದ ಭಾರತ್ - ಹನುಮಾನ್ ದೇವಸ್ಥಾನ ಮತ್ತು ಭಾರತ್ ಕುಂಡ್. ಜನಕಪುರದ ರಾಮ್ - ಜಾಂಕಿ ಮಂದಿರ. ಸೀತಾಮರ್ಹಿಯ ಸೀತಾಮರ್ಹಿ ಮತ್ತು ಪುನೌರ ಧಾಮದಲ್ಲಿರುವ ಜಾನಕಿ ಮಂದಿರ. ಬಕ್ಸರ್‌ನ: ರಾಮ್ ರೇಖಾ ಘಾಟ್, ರಾಮೇಶ್ವರನಾಥ ದೇವಾಲಯ. ಹಂಪಿಯ ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ ಮತ್ತು ವಿಠ್ಠಲ ದೇವಸ್ಥಾನ. ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನ ಮತ್ತು ಧನುಷ್ಕೋಡಿ. ವಾರಣಾಸಿಯ ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ ದೇವಸ್ಥಾನ, ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ ದೇವಾಲಯಗಳು ಸೇರಿವೆ.

English summary
Shri Ramayana Yatra Train: The second Ramayana Yatra train cancelled due to a smaller number of passengers. informed the Indian Railway Catering and Tourism Corporation (IRCTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X