BREAKING: ಹಡಗು ಡಿಕ್ಕಿಗೆ ಬೃಹತ್ ಬ್ರಿಡ್ಜ್ ಕುಸಿತ: Video

ನವದೆಹಲಿ, ಮಾರ್ಚ್ 26: ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಗೆ ಹಡಗು (ಡಾಲಿ) ಡಿಕ್ಕಿ ಹೊಡೆದ ಪರಿಣಾಮ ಇಡಿ ಸೇತುವೆಯೇ (Bridge Collaps) ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.

ಅಮೆರಿಕಾದ ಬಾಲ್ಟಿಮೋರ್‌ನ ನಗರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 'ಫ್ರಾನ್ಸಿಸ್ ಸ್ಕಾಟ್ ಕಿ ಬ್ರೀಡ್ಜ್‌' (Francis Scott Key Bridge Collaps) ಸೇತುವೆಗೆ ಮಂಗಳವಾರ ಬೆಳಗ್ಗೆ ಸಿಂಗಾಪುರ ಧ್ವಜ ಇರುವ ಕಂಟೈನರ್‌ ಹಡಗು ಡಾಲಿಯಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬ್ರಿಡ್ಜ್ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕೇವಲ ಹತ್ತು ಸೆಕೆಂಡ್‌ನ ಈ ವಿಡಿಯೋದಲ್ಲಿ ಕತ್ತಲಲ್ಲಿ ದೀಪಗಳ ಬೆಳಕಿನಲ್ಲಿ ಹಡಗು ನಿಧಾನವಾಗಿ ಸೇತುವೆಯ ಬಳಿ ಬರುವುದನ್ನು ಕಾಣಬಹುದಾಗಿದೆ. ಸೇತುವೆಯ ಒಂದು ಭಾಗಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಕೇವಲ 10 ಸೆಕೆಂಡುಗಳಲ್ಲಿ ಸಂಪೂರ್ಣ ಸೇತುವೆ ನದಿಗೆ ಉರುಳಿದೆ.

Bridge Collapse US Francis Scott Key Bridge Collapse after Ship Hit Video Viral

ಮೂಲಗಳ ಪ್ರಕಾರ, ಬ್ರಿಡ್ಜ್ ಕುಸಿತ ಘಟನೆಯಲ್ಲಿ ಸುಮಾರು 20 ನಿರ್ಮಾಣ ಕಾರ್ಮಿಕರು, ಮೂರು ಕಾರುಗಳು ಸೇರಿದಂತೆ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸ್ಪಷ್ಟ ಮಾಹಿತಿ ಸಿಗಬೇಕಿದೆ.

948 ಅಡಿ ಉದ್ದದ 'ಡಾಲಿ' ಹಡಗು ಡಿಕ್ಕಿ

ಅಮೆರಿಕಾ ಕೋಸ್ಟ್ ಗಾರ್ಡ್ ವಕ್ತಾರರು ನ್ಯೂಯಾರ್ಕ್ ಟೈಮ್ಸ್‌ಗೆ ಸಿಂಗಾಪುರದ ಧ್ವಜದ ಸರಕು ಹಡಗು 'ಡಾಲಿ' ಬರುವಾಗ ಘಟನೆ ನಡೆದಿದೆ. ಹಡಗು ಬೆಳ್ಳಂಬೆಳಗ್ಗೆ 1.27 ಕ್ಕೆ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ 948 ಅಡಿ ಉದ್ದದ 'ಡಾಲಿ' ಹಡಗು ಡಿಕ್ಕಿ ಹೊಡೆದಿದೆ.

ಇಲ್ಲಿನ ಮೇಯರ್ ಬ್ರಾಂಡನ್ ಎಂ. ಸ್ಕಾಟ್ ಮತ್ತು ಬಾಲ್ಟಿಮೋರ್ ಕೌಂಟಿ ಎಕ್ಸಿಕ್ಯೂಟಿವ್ ಜಾನಿ ಓಲ್ಸ್ಜೆವ್ಸ್ಕಿ ಜೂನಿಯರ್ ಅವರು ತುರ್ತು ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಕಳುಹಿಸಿದ್ದಾರೆ.

ತ್ವರಿಗತಿಯಲ್ಲಿ ರಕ್ಷಣಾ ಕಾರ್ಯ

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಏಳು ಮಂದಿ ರಕ್ಷಣಾ ಸಿಬ್ಬಂದಿಗೆ ನೀರಿಗೆ ಇಳಿದಿದ್ದಾರೆ. ಜನರನ್ನು ರಕ್ಷಣೆ ಕಾರ್ಯ ಮಾಡಲಗುತ್ತದೆ. ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್‌ರೈಟ್ ತಿಳಿಸಿದ್ದಾರೆಂದು ಸ್ಥಳೀಯ ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ.

ಬಾಲ್ಟಿಮೋರ್‌ನಿಂದ ಹೊರಹೋಗುತ್ತಿದ್ದ ಹಡಗು ಸೇತುವೆಯ ಮೇಲೆ ಕಾಲಮ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಲೇ ಸೇತುವೆ ಕುಸಿದಿದೆ. ಘಟನೆ ಬೆನ್ನಲ್ಲೆ ಬೆಳಗಿನ ಜಾವ 1.30 ಗಂಟೆಗೆ ಸಹಾಯವಾಣಿಗೆ ಸುಮಾರು 911 ಕರೆಗಳು ಬಂದಿವೆ. ಘಟನೆ ವೇಳೆ ಸೇತುವೆಯ ಮೇಲೆ ಹಲವಾರು ವಾಹನಗಳು ಇದ್ದುವು ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಉಂಟಾದ ನಷ್ಟದ ಮಾಹಿತಿ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+