BREAKING NEWS: ಜಾರ್ಖಂಡ್‌ನ ಬಳಿ ಭೀಕರ ರೈಲು ಅಪಘಾತ, 12 ಮಂದಿ ಸಾವು
ರಾಂಚಿ, ಫೆಬ್ರವರಿ, 28: ಜಾರ್ಖಂಡ್‌ನ ಜಮ್ತಾರಾ-ಕರ್ಮತಾಂಡ್‌ನ ಕಲ್ಜಾರಿಯಾ ಬಳಿ ಬುಧವಾರ (ಫೆಬ್ರವರಿ 28) ರೈಲು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
Jharkhand | A train ran over the passengers at Kalajharia railway station in Jamtara. Some deaths have been reported. The exact number of deaths will be confirmed later. Medical teams and ambulances rushed to the spot: Deputy Commissioner, Jamtara
— ANI (@ANI) February 28, 2024
More details awaited.
ಸ್ಥಳೀಯ ವರದಿಗಳ ಪ್ರಕಾರ, ಘಟನೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಆದರೆ ಅಧಿಕೃತ ಮಾಹಿತಿ ಇನ್ನು ತಿಳಿದುಬರಬೇಕಿದೆ. ದೃಢೀಕರಣವಿಲ್ಲ. ಇನ್ನು ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಘಟನೆ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ವಿದ್ಯುತ್ ದೀಪಗಳ ಕೊರತೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಆಂಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ರೈಲನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿತ್ತು. ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೀಡಾದ ಪ್ರಯಾಣಿಕರು ಮತ್ತೊಂದು ರೈಲ್ವೆ ಟ್ರ್ಯಾಕ್‌ಗೆ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಝಾಝಾ-ಅಸನ್ಸೋಲ್ ರೈಲು ಪ್ರಯಾಣಿಕರ ಮೇಲೆ ಹಾದು ಹೋಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬರಬೇಕಷ್ಟೇ.












Click it and Unblock the Notifications