BREAKING: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಯುವಕ ಸಾವು
ಬೆಂಗಳೂರು, ಏಪ್ರಿಲ್ 10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಸ್ನೇಹತನನ್ನು ಭೇಟಿಯಾಗಲು ತೆರಳಿದ್ದ ಯುವಕನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ.
ಸ್ನೇಹಿತನನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಯುವಕ ಕಮಲೇಶ್ ಜೀವನ ಧಾರುಣ ಅಂತ್ಯ ಕಂಡಿದೆ. ದ್ವಿಚಕ್ರ ವಾಹನದಲ್ಲಿ ಬಸ್ ಓವರ್ ಟೆಕ್ ಮಾಡುವಾಗ ಬಸ್ ಯುವಕನಿಗೆ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ರಾಜಸ್ಥಾನ ಮೂಲದ ಯುವಕ
ರಾಜಸ್ಥಾನ ಮೂಲಕ ಯುವಕ ಕಮಲೇಶ್ ಎಂದು ತಿಳಿದು ಬಂದಿದೆ. ಮೃತ ಯುವಕ ಎಂದಿನಂತೆ ಸ್ನೇಹಿತನನ್ನು ಭೇಟಿಗೆ ತೆರಳಿದ್ದಾನೆ. ಈ ವೇಳೆ ಶಿವಾಜಿನಗರದ ವೆಂಕಟೇಶ್ ಸ್ವಾಮಿ ನಾಯ್ಡು ರಸ್ತೆಯಲ್ಲಿ ಬಿಎಂಟಿಸಿ ಬಸ್ ಅನ್ನು ಓವರ್ ಟೆಕ್ ಮಾಡುವಾಗ ಈ ದುರ್ಘಟನೆ ನಡೆದಿದೆ.
ಬಸ್ ಮತ್ತು ಯುವಕನ ಸ್ಕೂಟರ್ ಮಧ್ಯೆ ರಭಸದ ಡಿಕ್ಕಿ ಸಂಭವಿಸಿದೆ. ಪರಿಣಾಮ ತಲೆಗೆ ಗಾಯವಾಗಿದ್ದರಿಂದ ಯುವಕನಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಿಂದ ಉಂಟಾಗುತ್ತಿರುವ ಸರಣಿ ಸಾವು ಮುಂದುವರಿದಿದೆ.
ರಸ್ತೆ ಗುಂಡಿ ತಪ್ಪಿಸಲು ಹೋಗಿ, ಓವರ್ ಟೆಕ್ ವೇಳೆ, ಮುಂದಿನ ವಾಹನ ಸವಾರರು ರಸ್ತೆ ಮೇಲೆ ಬಿದ್ದು, ಹೀಗೆ ಹಲವು ಕಾರಣಗಳಿಂದ ಬಿಂಎಂಟಿಸಿ ಬಸ್ ಗೆ ಸಿಲುಕಿ ಮೃತಪಡುವ ಘಟನೆಗಳು ವರದಿಯಾಗುತ್ತಲೆ ಬಂದಿವೆ. ಇದೀಗ ಯುವಕ ಕಮಲೇಶ್ ಸ್ಕೂಟರ್‌ನಲ್ಲಿ ಬರುವಾಗ ಡಿಕ್ಕಿ ಆಗಿ ಸಾವಿಗೀಡಾಗಿದ್ದಾರೆ.












Click it and Unblock the Notifications