• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಓಡಲಿದೆ 'ಶ್ರೀ ರಾಮಾಯಣ ಯಾತ್ರೆ' ವಿಶೇಷ ರೈಲು : 2 ದಿನ ಹೆಚ್ಚಳ, ಈ ಪ್ಯಾಕೇಜ್‌ ಬಗ್ಗೆ ತಿಳಿಯಿರಿ

|
Google Oneindia Kannada News

ರಾಮಾಯಣ ಸರ್ಕ್ಯೂಟ್ ಟೂರಿಸ್ಟ್ ಟ್ರೈನ್‌ನ್ನು ಮತ್ತೆ ಪ್ರಾರಂಭಿಸಲಿದೆ. ಈ ಯಾತ್ರೆಯಲ್ಲಿ ಪ್ರಯಾಣಿಕರು ಶ್ರೀರಾಮನಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಇದು ಧಾರ್ಮಿಕ ಪ್ರವಾಸಿ ತಾಣಗಳಿಗೆ ಇದೇ ಆಗಸ್ಟ್ 24ರಂದು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಯಾಣವು ಆರಂಭವಾಗಲಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಸಸ್ಯಾಹಾರಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುತ್ತದೆ.

ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ರಾಮ ಭಕ್ತರಿಗೆ ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಮತ್ತೊಮ್ಮೆ ಶ್ರೀ ರಾಮಾಯಣ ಯಾತ್ರೆಯನ್ನು ಆಯೋಜಿಸಲಿದೆ. ಈ ಪ್ರವಾಸಿ ರೈಲನ್ನು ನೇಪಾಳದ ಜನಕ್‌ಪುರ ಧಾಮ್‌ಗೆ ಮತ್ತೆ ಕರೆದೊಯ್ಯಲಾಗುತ್ತದೆ.

ಚಲಿಸುವ ರೈಲಿನಲ್ಲಿ ಚಾಲಕರು ಗಾಢ ನಿದ್ರೆಗೆ ಜಾರಿದರೆ ಏನಾಗುತ್ತದೆ ? ಈ ಬಗ್ಗೆ ತಿಳಿಯಿರಿಚಲಿಸುವ ರೈಲಿನಲ್ಲಿ ಚಾಲಕರು ಗಾಢ ನಿದ್ರೆಗೆ ಜಾರಿದರೆ ಏನಾಗುತ್ತದೆ ? ಈ ಬಗ್ಗೆ ತಿಳಿಯಿರಿ

ರೈಲಿನಲ್ಲಿರುವ ಎಲ್ಲಾ ಕೋಚ್‌ಗಳು ಥರ್ಡ್ ಎಸಿ ಕೋಚ್‌ಗಳನ್ನು ಹೊಂದಿರುತ್ತದೆ. 19 ರಾತ್ರಿ 20 ಹಗಲುಗಳ ಶ್ರೀರಾಮಾಯಣ ಯಾತ್ರೆ ದೇಶದ ರಾಜಧಾನಿ ದೆಹಲಿಯಿಂದ ಆರಂಭವಾಗಿ ದೆಹಲಿಯಲ್ಲೇ ಮುಕ್ತಾಯಗೊಳ್ಳಲಿದೆ. ಆಗಸ್ಟ್ 24 ರಂದು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ.

ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು IRCTC ವೆಬ್‌ಸೈಟ್ (https://www.irctctourism.com)ಗೆ ಭೇಟಿ ನೀಡಬಹುದು ಮತ್ತು ಆನ್‌ಲೈನ್‌ನಲ್ಲಿ ಕೂಡ ನೀವು ಬುಕ್ ಮಾಡಬಹುದು.

19 ರಾತ್ರಿಗಳು ಮತ್ತು 20 ದಿನಗಳ ಪ್ಯಾಕೇಜ್

19 ರಾತ್ರಿಗಳು ಮತ್ತು 20 ದಿನಗಳ ಪ್ಯಾಕೇಜ್

ಯಾತ್ರೆಯನ್ನು ಹೆಚ್ಚು ಸುಗಮಗೊಳಿಸಲು ಅಯೋಧ್ಯೆ ಮತ್ತು ವಾರಣಾಸಿಯಲ್ಲಿ ಹೆಚ್ಚುವರಿಯಾಗಿ ಒಂದು ರಾತ್ರಿಯ ವಿಶ್ರಾಂತಿಯನ್ನು ಸೇರಿಸಲಾಗಿದ್ದು, ಯಾತ್ರೆಯ ಅವಧಿಯನ್ನು 18 ದಿನಗಳಿಂದ 20 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿರುವ ಆಹಾರ ಮತ್ತು ಪಾನೀಯದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಸಸ್ಯಾಹಾರಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುತ್ತದೆ. ಈ ಯಾತ್ರೆಯಲ್ಲಿ ಅಯೋಧ್ಯೆ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ, ಭದ್ರಾಚಲಂ ಮುಂತಾದ ಸ್ಥಳಗಳಿಗೆ ಭೇಟಿ ನೀಡಲಾಗುವುದು.

ಶ್ರೀ ರಾಮಾಯಣ ರೈಲು ನಿಲ್ಲುವ ಸ್ಥಳಗಳು

ಶ್ರೀ ರಾಮಾಯಣ ರೈಲು ನಿಲ್ಲುವ ಸ್ಥಳಗಳು

ಅಯೋಧ್ಯೆ- ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯು ಘಾಟ್
ನಂದಿಗ್ರಾಮ- ಭಾರತ್-ಹನುಮಾನ್ ದೇವಾಲಯ ಮತ್ತು ಭಾರತ್ ಕುಂಡ್
ಜನಕಪುರ- ರಾಮ-ಜಾನಕಿ ದೇವಸ್ಥಾನ
ಸೀತಾಮರ್ಹಿ- ಸೀತಾಮರ್ಹಿಯಲ್ಲಿನ ಜಾನಕಿ ದೇವಾಲಯ ಮತ್ತು ಪುನೋರ ಧಾಮ
ಬಕ್ಸರ್- ರಾಮ್ ರೇಖಾ ಘಾಟ್, ರಾಮೇಶ್ವರನಾಥ ದೇವಾಲಯ
ವಾರಣಾಸಿ- ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ ದೇವಸ್ಥಾನ, ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ
ಸೀತಾ ಸಂಹಿತಾ ತಾಣ- ಸೀತಾಮರ್ಹಿ, ಸೀತಾ ಮಾತಾ ದೇವಸ್ಥಾನ
ಪ್ರಯಾಗರಾಜ್- ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ್ ಮಂದಿರ
ಶೃಂಗವೇರಪುರ - ಶೃಂಗ ಋಷಿ ಸಮಾಧಿ ಮತ್ತು ಶಾಂತಾ ದೇವಿ ದೇವಸ್ಥಾನ, ರಾಮ್ ಚೌರಾ
ಚಿತ್ರಕೂಟ- ಗುಪ್ತ ಗೋದಾವರಿ, ರಾಮಘಾಟ್, ಸತಿ ಅನುಸೂಯಾ ದೇವಸ್ಥಾನ
ನಾಸಿಕ್- ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಗುಫಾ, ಕಲಾರಾಮ್ ದೇವಸ್ಥಾನ
ಕರ್ನಾಟಕದ ಹಂಪಿ- ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ ಮತ್ತು ವಿಠ್ಠಲ ದೇವಸ್ಥಾನ
ರಾಮೇಶ್ವರಂ- ರಾಮನಾಥಸ್ವಾಮಿ ದೇವಸ್ಥಾನ ಮತ್ತು ಧನುಷ್ಕೋಡಿ
ಕಾಂಚೀಪುರಂ- ವಿಷ್ಣು ಕಂಚಿ, ಶಿವ ಕಂಚಿ ಮತ್ತು ಕಾಮಾಕ್ಷಿ ಅಮ್ಮನ ದೇವಾಲಯಗಳು
ಭದ್ರಾಚಲಂ- ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನ, ಅಂಜನಿ ಸ್ವಾಮಿ ದೇವಸ್ಥಾನ

ಯಾತ್ರೆಯ ವೆಚ್ಚವೇಷ್ಟು ತಿಳಿಯಿರಿ

ಯಾತ್ರೆಯ ವೆಚ್ಚವೇಷ್ಟು ತಿಳಿಯಿರಿ

IRCTC ಈ 20 ದಿನಗಳ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 73,500 ರೂಪಾಯಿ ಶುಲ್ಕವನ್ನು ನಿಗದಿಪಡಿಸಿದೆ. ಇದರೊಂದಿಗೆ, ಮೊದಲ 100 ಬುಕಿಂಗ್‌ಗಳಿಗೆ ಶೇಕಡಾ 5 ರಷ್ಟು ರಿಯಾಯಿತಿಯನ್ನು ಸಹ ನೀಡಲಾಗುತ್ತದೆ. ರೈಲಿನಲ್ಲಿರುವ ಎಲ್ಲಾ ಕೋಚ್‌ಗಳು ಥರ್ಡ್ ಎಸಿಯದ್ದಾಗಿರುತ್ತದೆ. ಬಾಡಿಗೆಗೆ ಎರಡು ವರ್ಗಗಳಿವೆ. ಕಂಫರ್ಟ್ ವಿಭಾಗದಲ್ಲಿ ಟ್ರಿಪಲ್, ಡಬಲ್ ಆಕ್ಯುಪೆನ್ಸಿಯ ತಲಾ ವೆಚ್ಚ 73,500 ರೂ. ಹಾಗೂ ಏಕ ಆಕ್ಯುಪೆನ್ಸಿಯ ತಲಾ ವೆಚ್ಚವು 84,000 ರೂ. ಆಗುತ್ತದೆ. ಇದರ ಹೊರತಾಗಿ, ಸುಪೀರಿಯರ್ ವಿಭಾಗದಲ್ಲಿ, ಟ್ರಿಪಲ್, ಡಬಲ್ ಆಕ್ಯುಪೆನ್ಸಿಯ ತಲಾ ವೆಚ್ಚವು 84,000 ರೂ.ಗಳು ಮತ್ತು ಸಿಂಗಲ್ ಆಕ್ಯುಪೆನ್ಸಿಯ ತಲಾ ವೆಚ್ಚವು 94,500 ರೂಪಾಯಿ ಆಗುತ್ತದೆ

ರೈಲಿನಲ್ಲಿ ಇರುವ ವಿಶೇಷ ಸೌಲಭ್ಯಗಳು

ರೈಲಿನಲ್ಲಿ ಇರುವ ವಿಶೇಷ ಸೌಲಭ್ಯಗಳು

ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಪ್ರಯಾಣಿಕರಿಗೆ ರುಚಿಕರವಾದ ಸಸ್ಯಾಹಾರಿ ಆಹಾರ, ಬಸ್‌ಗಳ ಮೂಲಕ ಪ್ರವಾಸಿ ತಾಣಗಳ ವೀಕ್ಷಣೆ, ಎಸಿ ಹೋಟೆಲ್‌ಗಳಲ್ಲಿ ವಸತಿ, ಗೈಡ್ ಮತ್ತು ವಿಮೆ ಇತ್ಯಾದಿ ಸೌಲಭ್ಯಗಳನ್ನು ರೈಲು ಪ್ರಯಾಣದ ಜೊತೆಗೆ ಒದಗಿಸಲಾಗುತ್ತದೆ. ಪ್ರಯಾಣಿಕರಿಗೆ ಮನರಂಜನೆ ಮತ್ತು ಪ್ರಯಾಣದ ಬಗ್ಗೆ ಮಾಹಿತಿ ನೀಡಲು ರೈಲಿನಲ್ಲಿ ಇನ್ಫೋಟೈನ್ಮೆಂಟ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಸ್ವಚ್ಛ ಶೌಚಾಲಯಗಳ ಜೊತೆಗೆ ಭದ್ರತೆಗಾಗಿ ಪ್ರತಿ ಕೋಚ್‌ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳು ಸಹ ಲಭ್ಯವಿರುತ್ತವೆ.

English summary
Sri Ramayana Yatra train which was successful in June will run again The Bharat Gaurav tourist train which tours the religious centers associated with Rama is once again being run for tourists. IRCTC has said that this train will run again from August 24, 2022,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X