ಐಪಿಎಲ್ 2026: ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟ, ದಿನಾಂಕ, ಸಮಯ ಸ್ಥಳದ ವಿವರ ತಿಳಿಯಿರಿ
IPL 2026: ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾದ ಐಪಿಎಲ್ 2026 ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು (ಮಾರ್ಚ್ 11) ಪ್ರಕಟಿಸಿದೆ. ಸದ್ಯಕ್ಕೆ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಉಳಿದ ಪಂದ್ಯಗಳ ವಿವರಗಳನ್ನು ನಂತರ ಪ್ರಕಟಿಸಲಾಗುವುದು. ಮುಂದಿನ ತಿಂಗಳು ಏಪ್ರಿಲ್ 12ರ ವರೆಗೆ ನಡೆಯಲಿರುವ ಪಂದ್ಯಗಳ ಪಟ್ಟಿ ಇದೀಗ ಹೊರಬಿದ್ದಿದೆ.
ಇದೇ ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವು ರಾತ್ರಿ 7:30ರಿಂದ ಬೆಂಗಳೂರಿನ ಆರ್‌ಸಿಬಿ ತಂಡದ ಹೋಂ ಗ್ರೌಂಡ್ ಆಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ: ದಿನಾಂಕ, ತಂಡ, ಸ್ಥಳ
* ಮಾರ್ಚ್ 28, 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ - ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು. ಪಂದ್ಯದ ಸಮಯ ಸಂಜೆ 7:30
* ಮಾರ್ಚ್ 29: ಮುಂಬೈ ಇಂಡಿಯನ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ - ವಾಂಖೇಡೆ ಸ್ಟೇಡಿಯಂ, ಮುಂಬೈ. ಪಂದ್ಯದ ಸಮಯ ಸಂಜೆ 7:30
* ಮಾರ್ಚ್ 30: ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ - ಗುವಾಹಟಿ. ಪಂದ್ಯದ ಸಮಯ ಸಂಜೆ 7:30
* ಮಾರ್ಚ್ 31: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ - ಮುಲ್ಲಾನ್‌ಪುರ್. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 1: ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಲಕ್ನೋ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 2: ಕೊಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಕೊಲ್ಕತ್ತಾ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 3: ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ - ಚೆನ್ನೈ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ - ಡೆಲ್ಲಿ ಕ್ಯಾಪಿಟಲ್ಸ್: ಪಂದ್ಯದ ಸಮಯ ಮಧ್ಯಾಹ್ನ 3:30
* ಏಪ್ರಿಲ್ 4: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ - ಅಹಮದಾಬಾದ್. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 5: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ - ಹೈದರಾಬಾದ್. ಪಂದ್ಯದ ಸಮಯ ಮಧ್ಯಾಹ್ನ 3:30
* ಏಪ್ರಿಲ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ - ಬೆಂಗಳೂರು. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 6: ಕೊಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ - ಕೊಲ್ಕತ್ತಾ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 7: ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ - ಗುವಾಹಟಿ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 8: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ - ಡೆಲ್ಲಿ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 9: ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ - ಕೊಲ್ಕತ್ತಾ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 10: ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಗುವಾಹಟಿ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 11: ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಮುಲ್ಲಾನ್‌ಪುರ್. ಪಂದ್ಯದ ಸಮಯ ಮಧ್ಯಾಹ್ನ 3:30
* ಏಪ್ರಿಲ್ 11: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಚೆನ್ನೈ. ಪಂದ್ಯದ ಸಮಯ ಸಂಜೆ 7:30
* ಏಪ್ರಿಲ್ 12: ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟನ್ಸ್ - ಲಕ್ನೋ. ಪಂದ್ಯದ ಸಮಯ ಮಧ್ಯಾಹ್ನ 3:30
* ಏಪ್ರಿಲ್ 12: ಮುಂಬೈ ಇಂಡಿಯನ್ಸ್ vs ಲ್ ಚಾಲೆಂಜರ್ಸ್ ಬೆಂಗಳೂರು - ಮುಂಬೈ. ಪಂದ್ಯದ ಸಮಯ ಸಂಜೆ 7:30
ಇನ್ನೂ ದೇಶದ ಕೆಲವು ರಾಜ್ಯಗಳಲ್ಲಿ (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ) ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ಸದ್ಯಕ್ಕೆ ಮೊದಲ ಹಂತದ (ಮೊದಲ 20 ಪಂದ್ಯಗಳ) ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಉಳಿದ ಪಂದ್ಯಗಳ ಪಟ್ಟಿ ಹೊರಬೀಳಲಿದೆ.












Click it and Unblock the Notifications