Get Updates
Get notified of breaking news, exclusive insights, and must-see stories!

ಫೈನಲ್‌ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ

Abhishek Sharma: ಟಿ20 ವಿಶ್ವಕಪ್‌ 2026 ಫೈನಲ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸಿಡಿಸಿದ ಸ್ಫೋಟಕ ಅರ್ಧಶತಕದ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಸತತ ವೈಫಲ್ಯಗಳಿಂದ ಬಳಲುತ್ತಿದ್ದ ಅಭಿಷೇಕ್ ಶರ್ಮಾ, ಫೈನಲ್ ಪಂದ್ಯದಲ್ಲಿ ಲಯಕ್ಕೆ ಮರಳಲು ಶಿವಂ ದುಬೆಯ ಬ್ಯಾಟ್ ಅನ್ನು ಬಳಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್, "ನಾನು ಇಂದು ಶಿವಂ ದುಬೆ ಅವರ ಬ್ಯಾಟ್ ಬಳಸಿ ಬ್ಯಾಟಿಂಗ್ ಮಾಡಿದೆ, ಅದಕ್ಕಾಗಿ ಅವರಿಗೆ ಧನ್ಯವಾದಗಳು. ಬೆಳಗ್ಗೆ ನನಗೆ ಏನಾದರೂ ವಿಭಿನ್ನವಾಗಿ ಪ್ರಯತ್ನಿಸಬೇಕು ಎನಿಸಿತು. ಶುಭ್ಮನ್ ಗಿಲ್ ಬೇರೆ ಹತ್ತಿರ ಇರಲಿಲ್ಲ. ಹಾಗಾಗಿ ನಾನು ದುಬೆಯ ಬಳಿ ಹೋಗಿ ಅವರ ಬ್ಯಾಟ್ ತೆಗೆದುಕೊಂಡೆ," ಎಂದು ಬಹಿರಂಗಪಡಿಸಿದ್ದಾರೆ.

Abhishek Sharma Reveals He Used Shivam Dube s Bat During Match-Winning Knock in T20 World Cup Final

ಅಭಿಷೇಕ್ ಶರ್ಮಾರಿಂದ ಸ್ಫೋಟಕ ಇನ್ನಿಂಗ್ಸ್‌

ಟೂರ್ನಿಯ ಆರಂಭದಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಗೆ ಬಲವಾದ ಅಭ್ಯರ್ಥಿಯಾಗಿದ್ದ ಅಭಿಷೇಕ್, ಮಧ್ಯದಲ್ಲಿ ಸತತ ವೈಫಲ್ಯಗಳನ್ನು ಅನುಭವಿಸಿದ್ದರು. 7 ಇನಿಂಗ್ಸ್‌ಗಳಲ್ಲಿ ಕೇವಲ 89 ರನ್ ಗಳಿಸಿದ್ದ ಅವರ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಫೈನಲ್ ಪಂದ್ಯದಲ್ಲಿ ಈ ಎಲ್ಲವನ್ನೂ ಮರೆತು, 21 ಎಸೆತಗಳಲ್ಲಿ 52 ರನ್ ಸಿಡಿಸಿ ತಂಡದ ಐತಿಹಾಸಿಕ ಗೆಲುವಿಗೆ ಅಡಿಪಾಯ ಹಾಕಿದರು.

'ತಂಡದ ಬೆಂಬಲವೇ ನನಗೆ ಬಲ'

ತಮ್ಮ ಕಠಿಣ ಸಮಯದಲ್ಲಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸಹ ಆಟಗಾರರು ನೀಡಿದ ಬೆಂಬಲವನ್ನು ಅಭಿಷೇಕ್ ಸ್ಮರಿಸಿದ್ದಾರೆ. "ನನ್ನ ಬ್ಯಾಟ್ ಕೆಲಸ ಮಾಡದಿದ್ದಾಗಲೂ ತಂಡದ ಪ್ರತಿಯೊಬ್ಬರೂ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಕಠಿಣ ಹಂತದಲ್ಲಿ ನೀವು ಯಾರ ಸಹವಾಸದಲ್ಲಿ ಇರುತ್ತೀರಿ ಎಂಬುದು ಬಹಳ ಮುಖ್ಯ. ತಂಡದ ಆಟಗಾರರ ಬೆಂಬಲ ಮತ್ತು ನನ್ನ ಮೇಲೆ ನನಗಿದ್ದ ನಂಬಿಕೆಯೇ ನಾನು ಮತ್ತೆ ಫಾರ್ಮ್‌ಗೆ ಮರಳಲು ಕಾರಣ," ಎಂದು ಅವರು ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಪ್ರದರ್ಶನವು ಅತ್ಯಂತ ನಿರ್ಣಾಯಕವಾಗಿತ್ತು. ಫೈನಲ್ ಪಂದ್ಯದಲ್ಲಿ 52 ರನ್‌ಗಳನ್ನು ಸಿಡಿಸುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಗಳಿಸಲು ಭದ್ರ ಬುನಾದಿ ಹಾಕಿಕೊಟ್ಟರು. ಅವರು ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್‌ನಲ್ಲೂ ಕೈಜೋಡಿಸಿ ಪ್ರಮುಖ ಒಂದು ವಿಕೆಟ್ ಅನ್ನು ಕೂಡ ಕಬಳಿಸಿ ಗಮನ ಸೆಳೆದರು.

ಅಭಿಷೇಕ್ ಶರ್ಮಾ ಅವರ ಆಟದ ಶೈಲಿಯು ಅತ್ಯಂತ ಆಕ್ರಮಣಕಾರಿಯಾಗಿದೆ. ಪವರ್‌ಪ್ಲೇ ಓವರ್‌ಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸುವ ಅವರ ಸಾಮರ್ಥ್ಯವು ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನಗಳನ್ನು ನೀಡುವ ಮೂಲಕ ಅವರು ಈಗಾಗಲೇ ಕ್ರಿಕೆಟ್ ಪಂಡಿತರ ಗಮನ ಸೆಳೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+