Petrol Diesel Price: ಪೆಟ್ರೋಲ್, ಡೀಸೆಲ್ ದರ ದಿಢೀರ್‌ ಇಳಿಕೆ: ಆದ್ರೆ ಈ ಬಂಕ್‌ನಲ್ಲಿ ಮಾತ್ರ

ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಮಾಲೀಕರಿಗೆ ನಿಟ್ಟುಸಿರು ಬಿಡುವಂತಹ ಸಿಹಿಸುದ್ದಿಯೊಂದು ಸಿಕ್ಕಿದೆ. ಖಾಸಗಿ ವಲಯದ ಪ್ರಮುಖ ಇಂಧನ ಮಾರಾಟ ಸಂಸ್ಥೆಯೊಂದು ಜಾಗತಿಕ ಮಾರುಕಟ್ಟೆಯ ತೈಲ ದರ ಇಳಿಕೆಯ ಲಾಭವನ್ನು ನೇರವಾಗಿ ಸಾರ್ವಜನಿಕರಿಗೆ ವರ್ಗಾಯಿಸಲು ಮುಂದಾಗಿದೆ. ಮಧ್ಯಪ್ರಾಚ್ಯದ ಸಂಘರ್ಷ ತಿಳಿಯಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ಕಂಪನಿಯು ಜುಲೈ 1ರಿಂದಲೇ ಅನ್ವಯವಾಗುವಂತೆ ದೇಶಾದ್ಯಂತ ಇರುವ ತನ್ನ ಎಲ್ಲ ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿತಗೊಳಿಸಿದೆ.

ಖಾಸಗಿ ವಲಯದ ಪ್ರಮುಖ ಇಂಧನ ಮಾರಾಟ ಸಂಸ್ಥೆಯಾದ 'ನಯಾರಾ ಎನರ್ಜಿ' (Nayara Energy) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಕಡಿತ ಪ್ರಕಟಿಸಿದೆ. ಇಂದಿನಿಂದಲೇ ಅನ್ವಯವಾಗುವಂತೆ ದೇಶಾದ್ಯಂತ ಇರುವ ತನ್ನ ಎಲ್ಲ ಬಂಕ್‌ಗಳಲ್ಲಿ ದರ ಕಡಿಮೆ ಮಾಡಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ಪರಿಸ್ಥಿತಿ ತಿಳಿಯಾಗಿದ್ದು, ಜಾಗತಿಕವಾಗಿ ಇಂಧನ ಪೂರೈಕೆಯ ಆತಂಕಗಳು ದೂರವಾಗಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಕುಸಿದಿರುವುದೇ ಈ ದರ ಇಳಿಕೆಗೆ ಮುಖ್ಯ ಕಾರಣವಾಗಿದೆ.

Petrol Diesel Price

ಗ್ರಾಹಕರಿಗೆ ಸಿಗುವ ನೇರ ಲಾಭ ಎಷ್ಟು?

ನಯಾರಾ ಬಂಕ್‌ಗಳಲ್ಲಿ ಇಂಧನ ತುಂಬಿಸುವ ಗ್ರಾಹಕರಿಗೆ ಇಂದಿನಿಂದಲೇ ನೇರ ಉಳಿತಾಯ ಸಿಗಲಿದೆ. ಪೆಟ್ರೋಲ್ ವಾಹನ ಬಳಸುವವರು 40 ಲೀಟರ್ ಪೆಟ್ರೋಲ್ ಖರೀದಿಸಿದರೆ, ಹಿಂದಿಗಿಂತಲೂ 200 ರೂಪಾಯಿ ಉಳಿತಾಯವಾಗಲಿದೆ. ಡೀಸೆಲ್ ವಾಹನ ಮಾಲೀಕರು 40 ಲೀಟರ್ ಡೀಸೆಲ್ ಖರೀದಿಸಿದರೆ, ಜೇಬಿನಿಂದ 120 ರೂಪಾಯಿ ಕಡಿಮೆ ಖರ್ಚಾಗಲಿದೆ. ದೇಶಾದ್ಯಂತ ಇರುವ ಸುಮಾರು 7,000 ನಯಾರಾ ಇಂಧನ ಕೇಂದ್ರಗಳಲ್ಲಿ ಈ ಹೊಸ ದರಗಳು ಜಾರಿಗೆ ಬಂದಿವೆ. ಆದರೆ, ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳು (VAT) ಮತ್ತು ಸಾರಿಗೆ ವೆಚ್ಚದ ಆಧಾರದ ಮೇಲೆ ಅಂತಿಮ ಚಿಲ್ಲರೆ ದರಗಳು ನಗರದಿಂದ ನಗರಕ್ಕೆ ವ್ಯತ್ಯಾಸವಿರಲಿವೆ.

ಕೆಲವು ವಾರಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿದ್ದ ಸಂಘರ್ಷದಿಂದಾಗಿ, ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ 'ಸ್ಟ್ರೈಟ್ ಆಫ್ ಹಾರ್ಮುಜ್' ಮೂಲಕ ಕಚ್ಚಾ ತೈಲ ಸರಬರಾಜು ಸ್ಥಗಿತಗೊಳ್ಳಬಹುದು ಎಂಬ ಭೀತಿ ಇತ್ತು. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಗಗನಕ್ಕೇರಿತ್ತು. ಆದರೆ, ಈಗ ಪರಿಸ್ಥಿತಿ ತಿಳಿಯಾಗಿದ್ದು ಹಡಗುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಇದರ ಫಲವಾಗಿ ಜುಲೈ 1ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 73 ಡಾಲರ್‌ಗೆ ಕುಸಿದಿದೆ. ಕಚ್ಚಾ ತೈಲ ಅಗ್ಗವಾಗಿರುವುದರಿಂದ ಸಂಸ್ಕರಣಾ ವೆಚ್ಚ ಕಡಿಮೆಯಾಗಿದ್ದು, ಖಾಸಗಿ ಕಂಪನಿಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.

ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಇಲ್ಲಿದೆ ಜೂನ್ 30ರ ದರಪಟ್ಟಿ
ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಇಲ್ಲಿದೆ ಜೂನ್ 30ರ ದರಪಟ್ಟಿ

ಕೆಲವೇ ತಿಂಗಳಲ್ಲಿ ಪರಿಸ್ಥಿತಿ ಉಲ್ಟಾ

ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಈಗ ಭಾರಿ ಬದಲಾವಣೆ ಕಂಡಂತಾಗಿದೆ. ಇರಾನ್ ಯುದ್ಧದ ಬಿಕ್ಕಟ್ಟು ತಾರಕಕ್ಕೇರಿದ್ದಾಗ ಮಾರ್ಚ್ ತಿಂಗಳಲ್ಲಿ ಇದೇ ನಯಾರಾ ಎನರ್ಜಿ ಸಂಸ್ಥೆಯು ಪೆಟ್ರೋಲ್ ಮೇಲೆ ₹5 ಮತ್ತು ಡೀಸೆಲ್ ಮೇಲೆ ₹3 ಹೆಚ್ಚಿಸಿತ್ತು. ಜಾಗತಿಕ ಮಾರುಕಟ್ಟೆ ಈಗ ತಂಪಾಗಿರುವುದರಿಂದ, ಕಂಪನಿಯು ಅಂದು ಹೆಚ್ಚಿಸಿದ್ದ ದರವನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಗುಜರಾತ್‌ನ ವಾದಿನಾರ್‌ನಲ್ಲಿ ವಾರ್ಷಿಕ 20 ಮಿಲಿಯನ್ ಟನ್ ಸಾಮರ್ಥ್ಯದ ಬೃಹತ್ ತೈಲ ಸಂಸ್ಕರಣಾಗಾರವನ್ನು ಹೊಂದಿರುವ ನಯಾರಾ ಕಂಪನಿಯ ಈ ನಡೆ, ಮಾರುಕಟ್ಟೆಯ ಇತರ ಖಾಸಗಿ ಸ್ಪರ್ಧಿಗಳ ಮೇಲೂ ದರ ಪರಿಷ್ಕರಣೆ ಮಾಡುವಂತೆ ಒತ್ತಡ ಹೇರಬಹುದು.

ಸರ್ಕಾರಿ ತೈಲ ಕಂಪನಿಗಳ ನಿಲುವೇನು?

ಖಾಸಗಿ ಬಂಕ್‌ಗಳಲ್ಲಿ ತೈಲ ಅಗ್ಗವಾಗಿದ್ದರೂ, ಇಂಡಿಯನ್ ಆಯಿಲ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ನಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳು ಸದ್ಯಕ್ಕೆ ಯಾವುದೇ ದರ ಕಡಿತವನ್ನು ಪ್ರಕಟಿಸಿಲ್ಲ. ಉದಾಹರಣೆಗೆ, ದೆಹಲಿಯ ಐಒಸಿ (IOC) ಬಂಕ್‌ಗಳಲ್ಲಿ ಪೆಟ್ರೋಲ್ ₹102.12 ಮತ್ತು ಡೀಸೆಲ್ ₹95.20 ರ ಹಳೆಯ ದರದಲ್ಲೇ ಮಾರಾಟವಾಗುತ್ತಿದೆ.

ಖಾಸಗಿ ಕಂಪನಿಗಳಂತೆ ಸರ್ಕಾರಿ ತೈಲ ಕಂಪನಿಗಳು ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಅವು ತಮ್ಮಲ್ಲಿರುವ ಹಳೆಯ ದಾಸ್ತಾನು ವೆಚ್ಚ, ಸರ್ಕಾರದ ಆರ್ಥಿಕ ನೀತಿಗಳು ಮತ್ತು ದೀರ್ಘಾವಧಿಯ ಬೆಲೆ ತಂತ್ರಗಳನ್ನು ಪರಿಗಣಿಸಿ ದರ ಪರಿಷ್ಕರಿಸುತ್ತವೆ. ಹವಾಮಾನ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮುಂಬರುವ ವಾರಗಳಲ್ಲೂ ಇಷ್ಟೇ ಕಡಿಮೆ ಮಟ್ಟದಲ್ಲಿ ಮುಂದುವರಿದರೆ, ಇಡೀ ತೈಲ ವಲಯದಲ್ಲೇ ಬೆಲೆ ಇಳಿಕೆಯಾಗುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+