CBSE 12ನೇ ತರಗತಿ ಪೂರಕ ಪರೀಕ್ಷೆ ಮುಂದೂಡಿಕೆ; ಕಾಲೇಜು ಪ್ರವೇಶಾತಿ ವಿಳಂಬದ ಬಗ್ಗೆ ವಿದ್ಯಾರ್ಥಿಗಳ ಆತಂಕ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2026ನೇ ಸಾಲಿನ 12ನೇ ತರಗತಿಯ ಪೂರಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್ 30ರಂದು ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ 'ಎಲ್‌ಒಸಿ' ಸಲ್ಲಿಸಲು ಪರೀಕ್ಷಾ ಸಂಗಮ್ ಪೋರ್ಟಲ್ ಮೂಲಕ ಜೂನ್ 30 ರಿಂದ ಜುಲೈ 8ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಅಂತಿಮವಾಗಿ ಪೂರಕ ಪರೀಕ್ಷೆಯು ಜುಲೈ 28, 2026 ರಂದು ನಡೆಯಲಿದೆ. ಆದರೆ ಈ ದಿಢೀರ್ ಪರೀಕ್ಷಾ ದಿನಾಂಕದ ಮುಂದೂಡಿಕೆಯು ವಿದ್ಯಾರ್ಥಿಗಳು ಹಾಗೂ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

CBSE

ಕಾಲೇಜು ಪ್ರವೇಶಾತಿ ವಿಳಂಬದ ಭೀತಿ

ಪೂರಕ ಪರೀಕ್ಷೆ ವಿಳಂಬದಿಂದಾಗಿ ಪದವಿ ಕೋರ್ಸ್‌ಗಳಿಗೆ ಸೇರಲು ಕಾಯುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಬಹುತೇಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯು ಜುಲೈ ತಿಂಗಳಿನಲ್ಲಿಯೇ ಮುಕ್ತಾಯಗೊಳ್ಳುವ ಹಂತದಲ್ಲಿರುತ್ತದೆ. ಪರೀಕ್ಷೆ ತಡವಾಗಿ ನಡೆದು, ಫಲಿತಾಂಶ ಪ್ರಕಟವಾಗುವಷ್ಟರಲ್ಲಿ ಕಾಲೇಜು ಪ್ರವೇಶದ ಗಡುವು ಮುಗಿದುಹೋಗಿರುತ್ತದೆ ಎಂಬುದು ವಿದ್ಯಾರ್ಥಿಗಳ ಪ್ರಮುಖ ಕಳವಳವಾಗಿದೆ.

ಇದು ಕೇವಲ ಪರೀಕ್ಷೆಯ ವಿಳಂಬವಲ್ಲ, ನಮ್ಮ ಶೈಕ್ಷಣಿಕ ವರ್ಷವನ್ನೇ ಹಾಳುಮಾಡುವ ನಿರ್ಧಾರ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹಳೆಯ ಸುತ್ತೋಲೆ ಮತ್ತು ಸಿಬಿಎಸ್‌ಇ ಬೋರ್ಡ್ ನಿರ್ಧಾರ

ಮೇ 13 ರಂದು ಸಿಬಿಎಸ್‌ಇ ಬೋರ್ಡ್ 12ನೇ ತರಗತಿಯ ಮುಖ್ಯ ಫಲಿತಾಂಶವನ್ನು ಪ್ರಕಟಿಸಿದ ದಿನವೇ ಪೂರಕ ಪರೀಕ್ಷೆಯ ಬಗ್ಗೆಯೂ ಮಾಹಿತಿ ನೀಡಿತ್ತು. ಆ ಹಳೆಯ ಸುತ್ತೋಲೆಯಲ್ಲಿ, ಜುಲೈ 15 ರಂದು ಒಂದೇ ದಿನದಂದು ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಸ್ಪಷ್ಟಪಡಿಸಲಾಗಿತ್ತು. ಅಲ್ಲದೆ, ಜೂನ್ 2 ರಿಂದಲೇ ಎಲ್‌ಒಸಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದೂ ತಿಳಿಸಲಾಗಿತ್ತು.

ಅಂಕಗಳನ್ನು ಸುಧಾರಿಸಿಕೊಳ್ಳಲು ಹಾಗೂ ಕಂಪಾರ್ಟ್‌ಮೆಂಟ್ ವಿಭಾಗದಲ್ಲಿರುವ ವಿದ್ಯಾರ್ಥಿಗಳು ಜುಲೈ 15ರ ಪರೀಕ್ಷೆಗೆ ಭರದಿಂದ ಸಿದ್ಧತೆ ನಡೆಸಿದ್ದರು. ಆದರೆ ಇದೀಗ ದಿಢೀರನೆ ಜುಲೈ 28ಕ್ಕೆ ಮುಂದೂಡಿರುವ ಸಿಬಿಎಸ್‌ಇ ಬೋರ್ಡ್ ನಿರ್ಧಾರ ಗೊಂದಲ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಬೋರ್ಡ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. "ಪರೀಕ್ಷೆ ಇಷ್ಟು ತಡವಾಗಿ ನಡೆದರೆ ನಮಗೆ ಈ ವರ್ಷ ಕಾಲೇಜು ಸೀಟು ಸಿಗುವುದಿಲ್ಲ. ಕೂಡಲೇ ಪರೀಕ್ಷೆಯನ್ನು ಜುಲೈ 15ಕ್ಕೇ ನಿಗದಿಮಾಡಿ. ಇಲ್ಲವೇ ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲ ವಿಶ್ವವಿದ್ಯಾಲಯಗಳಿಗೆ ಕನಿಷ್ಠ 20-30 ದಿನಗಳ ಕಾಲ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ವಿಸ್ತರಿಸುವಂತೆ ಅಧಿಕೃತ ಸೂಚನೆ ನೀಡಬೇಕು" ಎಂದು ವಿದ್ಯಾರ್ಥಿಯೊಬ್ಬರು ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ಪರೀಕ್ಷೆ ಮುಂದೂಡುವ ಬದಲು ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿ, ಅಥವಾ ಉತ್ತೀರ್ಣದ ಮಾನದಂಡವನ್ನು 33% ಗೆ ಇಳಿಸಿ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದೆ.

ಹೊಸ ಓಎಸ್‌ಎಂ ಮೌಲ್ಯಮಾಪನ ಮತ್ತು ಅಂಕಗಳ ಗೊಂದಲ

ಈ ವರ್ಷ ಫೆಬ್ರವರಿ 17 ರಿಂದ ಏಪ್ರಿಲ್ 10 ರವರೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು ನಡೆದಿದ್ದವು. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಗೆ ಸಿಬಿಎಸ್‌ಇಯು 'ಆನ್-ಸ್ಕ್ರೀನ್ ಮಾರ್ಕಿಂಗ್' ಎಂಬ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಂಡಿತ್ತು. ಈ ವ್ಯವಸ್ಥೆಯಲ್ಲಿ ಭೌತಿಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಸುರಕ್ಷಿತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ಶಿಕ್ಷಕರು ಕಂಪ್ಯೂಟರ್ ಪರದೆಯ ಮೇಲೆಯೇ ಮೌಲ್ಯಮಾಪನ ಮಾಡಿದ್ದರು.

ಆದರೆ, ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಪರಿಶೀಲನೆಯಲ್ಲಿ ಆದ ತಾಂತ್ರಿಕ ದೋಷಗಳಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ತಾವು ನಿರೀಕ್ಷಿಸಿದಕ್ಕಿಂತ ಕಡಿಮೆ ಅಂಕಗಳು ಬಂದಿವೆ. ಈ ಅಂಕಗಳ ಇಳಿಕೆಯೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವಂತಾಗಲು ಮುಖ್ಯ ಕಾರಣ ಎನ್ನಲಾಗಿದೆ. ಬೋರ್ಡ್ ಆದಷ್ಟು ಬೇಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+