Bengaluru Kannada: ಕೇಳ್ದೆ ಇದ್ದರೆ ನಮ್ಮ ತಲೆ ಮೇಲೆ ಕೂತು ಸವಾರಿ ಮಾಡ್ತಾರೆ ಈ ಹಿಂದಿಯನ್ಸ್: ನಿರ್ದೇಶಕ ಕವಿರಾಜ್
Bengaluru Kannada: ಬೆಂಗಳೂರಿನಲ್ಲಿ ಕನ್ನಡ ಬಳಕೆ ಕಡಿಮೆ ಆಗುತ್ತಿರುವುದು ಹಾಗೂ ಕೆಲವು ಪರಭಾಷಿಕರ ಹಾವಳಿ, ಪ್ರಭಾವ ಹೆಚ್ಚಾಗುತ್ತಿರುವುದು ಪದೇ ಪದೇ ಚರ್ಚೆ ಆಗುತ್ತಿದೆ. ಈ ರೀತಿ ಇರುವಾಗಲೇ ಕವಿ, ನಿರ್ದೇಶಕ ಕವಿರಾಜ್ ಅವರು ಗಂಭೀರವಾದ ಪ್ರಶ್ನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಎತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಆಗಿರುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಕನಕಪುರ ರೋಡ್ ಅಲ್ಲಿರುವ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಫ್ಯಾಮಿಲಿ ಸಮೇತ ಊಟಕ್ಕೆ ಬಂದಿದ್ದೆ. ಒಬ್ನೇ ಒಬ್ಬ ಕನ್ನಡ ಬಲ್ಲ ಸಪ್ಲೈಯರ್ ಇಲ್ಲ, ಕನ್ನಡ ಹಾಡು ಹಾಕೋ ಹಾಗಿಲ್ಲ ಅಂದ್ರು, ಒಂದು ರೌಂಡ್ ಗಲಾಟೆ ಆಯ್ತು. ಈಗ ಬರೀ ಕನ್ನಡ ಹಾಡೇ ಬರ್ತಿದೆ. ಒಂದು ವಾರದಲ್ಲಿ ಕನ್ನಡ ಬಲ್ಲ ಹುಡುಗರು ಇರಬೇಕು ಅಂತಾ ಹೇಳಿದ್ದೇನೆ. ಈ ಕಡೆ ಬಂದವರು ವಿಚಾರಿಸಿ. ಪದೇ ಪದೇ ಹಕ್ಕೊತ್ತಾಯ ಮಾಡುತ್ತಿದ್ದರೆ ಮಾತ್ರ ಬದಲಾವಣೆ ಸಾಧ್ಯ. ಕೇಳ್ದೆ ಇದ್ದರೆ ನಮ್ಮ ತಲೆ ಮೇಲೆ ಕೂತು ಸವಾರಿ ಮಾಡ್ತಾರೆ ಈ ಹಿಂದಿಯನ್ಸ್. ಇದು ನಮ್ಮ ನಾಡು, ಕನ್ನಡ ನಮ್ಮ ಹಕ್ಕು, ಹೋದಲೆಲ್ಲ ಕನ್ನಡಕ್ಕಾಗಿ ದನಿಯೆತ್ತಿ. ಇಲ್ಲಾ ಅಂದರೆ ಖಂಡಿತಾ ಬೇಗನೆ ಕಳೆದೇ ಹೋಗುತ್ತೀವಿ. (ನಾನು ಬೆಂಗಳೂರಲ್ಲಿ ನೂರಾರು ಗಲಾಟೆ ಮಾಡಿದೀನಿ, ಒಮ್ಮೆಯೂ ವೈಯುಕ್ತಿಕ ವಿಷಯಕ್ಕಲ್ಲ, ದನಿಯೆತ್ತಿ ಮಾತಾಡಿದ್ದರೆ ಅದು ಕನ್ನಡದ ವಿಷಯಕ್ಕೆ ಮಾತ್ರ) ಎಂದು ಅವರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕನ್ನಡಿಗರು ಸಹಮತ ವ್ಯಕ್ತಪಡಿಸಿದ್ದಾರೆ.

Bengaluru Kannada: ಕನ್ನಡ ಬಳಕೆ; ಕನ್ನಡಿಗರು ಹೇಳಿದ್ದೇನು
ಇನ್ನು ಬೆಂಗಳೂರಲ್ಲಿ ಕನ್ನಡ ಬಳಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕನ್ನಡಿಗರು ಧ್ವನಿ ಎತ್ತಿದ್ದಾರೆ. ಪವನ್ ದರೆಗುಂಡಿ ಕನ್ನಡಿಗ ಎನ್ನುವವರು ನೇಪಾಳ - ಬಾಂಗ್ಲಾದೇಶವರೆ ಜಾಸ್ತಿ ಅವ್ರೇ ಅಲ್ಲಿ ನಾನು ಕೇಳಿದಿನಿ ಆದ್ರೆ ಮ್ಯಾನೇಜರ್ ಕನ್ನಡಿಗರು ಸಿಗೊಲ್ಲ ಅಂತ ಹೇಳ್ತಾರೆ ಅಂತ ಹೇಳಿದ್ದಾರೆ. ರಚನಾ ರಾಜ್ ಎನ್ನುವವರು
ಹೌದು ರೆಸ್ಟೋರೆಂಟ್‌ಗಳಲ್ಲಿ ಕನ್ನಡದ ಸಪ್ಲೈಯರ್ಸ್ ಕಮ್ಮಿ ಹಾಗೂ ಕನ್ನಡದ ಹಾಡುಗಳಂತೂ ವಿರಳ, ನಾವ್ ಯಾವ್ದೇ ರೆಸ್ಟೋರೆಂಟ್ಸ್ ವಿಸಿಟ್ ಮಾಡಿದರೆ ಕನ್ನಡದವರಿದ್ರೆ, ಕನ್ನಡದ ಹಾಡುಗಳೇ ಪ್ಲೇ ಆಗ್ತಿದ್ರೆ ಅವರ ಕನ್ನಡತನದ ಮೆಚ್ಚುಗೆ ವ್ಯಕ್ತಪಡಿಸಿ ಬರ್ತೀನಿ. ಕನ್ನಡ ಹಾಡುಗಳು ಹಾಕದೇ ಬರೀ ಹಿಂದಿ - ಇಂಗ್ಲೀಷ್ ಅಂತ ಹಾಕುತ್ತಿದ್ದರೆ ಅರ್ಥ ಆಗುವ ರೀತಿ ಕನ್ನಡ ಹಾಡುಗಳನ್ನ ಹಾಕಿ ಅಂತ ಹೇಳ್ತೀನಿ. ಸಂಜೆ ರಿವ್ಯೂ ಬರಿಯೋವಾಗ ಬರೆದು ಬರ್ತೀನಿ. ಇತ್ತೀಚೆಗೆ ಲೈವ್ ಮ್ಯೂಸಿಕ್ ಇಟ್ಟಿರೋ ರೆಸ್ಟೋರೆಂಟ್‌ಗಳಲ್ಲಿ ಹಿಂದಿ, ತೆಲುಗು ಜಾಮ್ ಸೆಷನ್ಸ್ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರವಿ ಬಿಂದಾಸ್ ಎನ್ನುವವರು ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ, ಭಾಷೆ ಕನ್ನಡ - ಉಸಿರು ಕನ್ನಡ, ಬೆಳಗಲಿ ಕನ್ನಡ ಬೆಳೆಯಲಿ ಮತ್ತು ಕನ್ನಡ ಉಳಿಯಲಿ ಎಂದಿದ್ದಾರೆ. ವಿಜಯ ನಂದಿ ಎಂಬವರು ನಿಜಕ್ಕೂ ಒಳ್ಳೆಯ ಕೆಲಸ. ನಮ್ಮಲ್ಲಿ ನಾವೇ ಪರಕೀಯರು ಅನ್ನೋ ಹಾಗೆ ಕನ್ನಡ ಮಾತಾಡುವವರು ಸಿಗೋದೇ ಅಪರೂಪ. ಅದಕ್ಕೆ ಹೋದ ಕಡೆಯೆಲ್ಲ ಅನ್ಯ ಭಾಷಿಗರು ಸಿಕ್ಕಿದ್ರೆ ಕನ್ನಡದಲ್ಲೇ ಮಾತಾಡಬೇಕು.. ಅವರಿಗೆ ನಮ್ಮ ಭಾಷೆ ಬರಲ್ಲ ಅಂದ್ರೆ ಅದು ಅವರ ಸಮಸ್ಯೆ..ನಮ್ಮದಲ್ಲ ಅಂತ ಹೇಳಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ವೈರಲ್ ಆಗಿದೆ.












Click it and Unblock the Notifications