Free Electricity Scheme: ಗೃಹಲಕ್ಷ್ಮೀ ಜೊತೆಗೆ ಗೃಹಜ್ಯೋತಿ ಯೋಜನೆಯಲ್ಲೂ ಬದಲಾವಣೆ: ಈ ಹೊಸ ದಾಖಲೆಗಳ ಸಲ್ಲಿಕೆ ಕಡ್ಡಾಯ
Free Electricity Scheme: ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಾರಂಭವಾಗಿದೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳುವುದು ಅಥವಾ ಪರಿಷ್ಕರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ಲೋಪವಾದರೆ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಲಿದ್ದೀರಿ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಇರುವಾಗಲೇ ಉಚಿತ ವಿದ್ಯುತ್ ಯೋಜನೆಯಾಗಿರುವ ಗೃಹಜ್ಯೋತಿ ಯೋಜನೆಯಲ್ಲೂ ಮಹತ್ವದ ಬದಲಾವಣೆ ತರುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ.
ಕರ್ನಾಟಕ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ ಕರ್ನಾಟಕದ ಪ್ರತಿ ಗೃಹ ಬಳಕೆ ವಿದ್ಯುತ್ ಸ್ಥಾವರಗಳಿಗೆ ಮಾಸಿಕ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ 2022-23ರ ವಾರ್ಷಿಕ ಸರಾಸರಿ ಬಳಕೆಯನ್ನು ಪರಿಗಣಿಸಿ ಈ ಬಳಕೆಯ ಮೇಲೆ ಶೇ.10ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ಮಾಸಿಕ ಅರ್ಹದಾಯಕ ಯೂನಿಟ್‌ಗಳನ್ನು ನಿಗದಿಪಡಿಸಿದೆ. ನಿಗದಿಪಡಿಸಿರುವ ಮಾಸಿಕ ಅರ್ಹದಾಯಕ ಯೂನಿಟ್‌ವರೆಗಿನ ಮಾಸಿಕ ಬಳಕೆಯ ವಿದ್ಯುತ್ ಬಿಲ್‌ಅನ್ನು ಸರ್ಕಾರದ ವತಿಯಿಂದ ಪಾವತಿಸುವ ಬಗ್ಗೆ ಹಾಗೂ ಮಾಸಿಕ ಬಳಕೆಯನ್ನು ಮೀರಿದ 200 ಯೂನಿಟ್‌ವರೆಗಿನ ಬಳಕೆಯ ವಿದ್ಯುತ್ ಬಿಲ್ ಗ್ರಾಹಕರು ಪಾವತಿಸುವ ಹಾಗೂ ಮಾಸಿಕ 200 ಯೂನಿಟ್‌ಗಳು ಮೀರಿದ ವಿದ್ಯುತ್ ಬಿಲ್ಲನ್ನು ಪೂರ್ಣವಾಗಿ ಗ್ರಾಹಕರು ಪಾವತಿಸಬೇಕು ಎನ್ನುವ ನಿಯಮವಿದೆ.

ಗೃಹಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್
ಇನ್ನು ಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ 4.6.2026 ರಂದು ವಿವಿಧ ಇಲಾಖೆಗಳ ವತಿಯಿಂದ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯಡಿ ಸಹಾಯಧನವು ಗೃಹ ಬಳಕೆ ವಿದ್ಯುತ್ ಸ್ಥಾವರಗಳ ಕಂದಾಯ ಖಾತೆಗೆ ಜಮೆಗೊಳ್ಳುವ ಪ್ರಕ್ರಿಯೆ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಆಧಾರ ಸಂಖ್ಯೆಯೊಂದಿಗೆ ನೋಂದಣಿಗೊಳಿಸಿರುವ ಮಾಲೀಕರು ಹಾಗೂ ಬಾಡಿಗೆದಾರರು ಮೃತಪಟ್ಟಿರುವ, ಬಾಡಿಗೆದಾರರು ಮನೆ ಬದಲಾವಣೆಗೊಳಿಸಿರುವ, ಮನೆ ಖರೀದಿ, ಮಾರಾಟ ಮತ್ತು ಇತರೆ ಸಂದರ್ಭಗಳಲ್ಲಿ ನೋಂದಣಿದಾರರು ಪರಿಷ್ಕರಣೆ ಮಾಡಿಕೊಂಡಿಲ್ಲ ಎಂದು ಹೇಳಲಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಹೊಸ ಬದಲಾವಣೆ
ಇನ್ನು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಪ್ರಸ್ತುತ ಅಗತ್ಯವಿಗಿರುವ ಮಾಹಿತಿಗಳಾದ ಗೃಹಬಳಕೆ ಸ್ಥಾವರದ ಖಾತೆ ಸಂಖ್ಯೆ ಆಧಾರ್ ಸಂಖ್ಯೆ, ಆಧಾರ್ ಕಾರ್ಡ್‌ನಲ್ಲಿನ ಹೆಸರು ಮತ್ತು ಸಂಪರ್ಕ ಮೊಬೈಲ್ ಸಂಖ್ಯೆ, ಮಾಲೀಕ ಮತ್ತು ಬಾಡಿಗೆದಾರರಾಗಿರುವ ಬಗ್ಗೆ ಮಾತ್ರ ನೊಂದಣಿಗೊಳಿಸಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ ನೋಂದಣಿಗೊಳಿಸಿರುವ ಮಾಹಿತಿಯನ್ನು ಪರಿಶೀಲಿಸಲು, ಹೆಚ್ಚುವರಿ ಮಾಹಿತಿಯನ್ನು ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿಯವರು ಪ್ರತಿ ಗ್ರಹಜ್ಯೋತಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮಾಲಿಕ / ಬಾಡಿಗೆದಾರರಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರವು ಆದೇಶಿಸಿದೆ.
ಸೇವಾಸಿಂಧುವಲ್ಲಿ ಹೊಸದಾಗಿ ಸೇರಿಸಬೇಕಾದ ದಾಖಲೆಗಳು
ಇನ್ನು ಗೃಹಜ್ಯೋತಿ ಯೋಜನೆಯ ಬಳಕೆದಾರರು ಈಗಾಗಲೇ ದಾಖಲೆಗಳನ್ನು ಸಲ್ಲಿಸಿದ್ದರೂ ಸಹ ಹೊಸದಾಗಿ ಕೆಲವೊಂದು ನಿರ್ದಿಷ್ಟ ದಾಖಲೆಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ಸೇರ್ಪಡೆ ಮಾಡಬೇಕಾಗುತ್ತದೆ.
1. ಪಡಿತರ ಚೀಟಿ
(ಎಪಿಎಲ್ / ಬಿಪಿಎಲ್ / ಯಾವುದೂ ಇಲ್ಲ).
ಬಿಪಿಎಲ್ ಇದ್ದರೆ - ಬಿಪಿಎಲ್ ಕಾರ್ಡ್ ಸಂಖ್ಯೆ
2. ಕರ್ನಾಟಕ ರಾಜ್ಯದ ನೋಂದಾಯಿತ ಮತದಾರರ ಬಗ್ಗೆ (ಹೌದು / ಇಲ್ಲ)
ಕರ್ನಾಟಕ ಮತದಾರರಾದಲ್ಲಿ - EPIC ಸಂಖ್ಯೆ
3. ಅರ್ಜಿದಾರರ ಭಾವಚಿತ್ರ
4. ಅರ್ಜಿದಾರರ ಪ್ರವರ್ಗ: (ಎಸ್‌ಸಿ / ಎಸ್‌ಟಿ / ಒಬಿಸಿ / ಅಲ್ಪಸಂಖ್ಯಾತ / ಇತರೆ)
5. ಆದಾಯ ತೆರಿಗೆ ಪಾವತಿದಾರರೇ (ಹೌದು / ಇಲ್ಲ)
ಆದಾಯ ತೆರಿಗೆ ಪಾವತಿದಾರರಾದಲ್ಲಿ - PAN ಸಂಖ್ಯೆ
6. ವೃತ್ತಿ
(ಸರ್ಕಾರಿ / ಖಾಸಗಿ / ವ್ಯಾಪಾರ / ರೈತ / ಕೂಲಿ ಕಾರ್ಮಿಕ ಮತ್ತು ಇತರೆ).
ಗೃಹಜ್ಯೋತಿ: ಈಗಾಗಲೇ ಸಲ್ಲಿಸಿರುವ ದಾಖಲೆಗಳು
ವಿದ್ಯುತ್ ಸರಬರಾಜು ಕಂಪನಿಯ ಹೆಸರು
ಖಾತೆ ಸಂಖ್ಯೆ / ಸಂಪರ್ಕ ಸಂಖ್ಯೆ
ವಿದ್ಯುತ್ ಸ್ಥಾವರದ ನೊಂದಾಯಿತ ಹೆಸರು
ವಿದ್ಯುತ್ ಸ್ಥಾವರದ ವಿಳಾಸ
ಮಾಲೀಕ / ಬಾಡಿಗೆದಾರ
ಆಧಾರ್ ಸಂಖ್ಯೆ
ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರು
ಸಂಪರ್ಕ ಮೊಬೈಲ್ ಸಂಖ್ಯೆ













Click it and Unblock the Notifications