Get Updates
Get notified of breaking news, exclusive insights, and must-see stories!

New Rent Rules 2026: ಬಾಡಿಗೆದಾರರಿಗೆ ಗುಡ್‌ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು

New Rent Rules 2026: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿದಾರರು ಬಾಡಿಗೆ ಮನೆಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡುತ್ತಿದ್ದಾರೆ. ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಹೊಸ ಬಾಡಿಗೆ ನಿಯಮಗಳು 2026ರ ವಿಷಯವು ಭಾರೀ ಚರ್ಚೆ ಆಗುತ್ತಿದೆ. ಈ ನಿಯಮವು ಜಾರಿಯಾದರೆ ಬೆಂಗಳೂರು ಸೇರಿದಂತೆ ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಕೆಲವು ಆಸ್ತಿದಾರರ ಹಣದ ವ್ಯಾಮೋಹಕ್ಕೆ ತಡೆ ಬೀಳಲಿದೆ. ಅಲ್ಲದೆ ಬಾಡಿಗೆದಾರರಿಂದ ವಿಪರೀತವಾಗಿ ಹಣ ತೆಗೆದುಕೊಳ್ಳುವುದಕ್ಕೂ ಬ್ರೇಕ್ ಬೀಳಿದೆ. ಹೊಸ ಬಾಡಿಗೆ ನಿಯಮಗಳು 2026 ಎಂದರೆ ಏನು, ಮನೆ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ. ಹೊಸ ಬಾಡಿಗೆ ನಿಯಮಗಳು 2026ರ 5 ಪ್ರಮುಖ ಪಾಯಿಂಟ್ಸ್‌ ಇಲ್ಲಿದೆ.

ಹೊಸ ಬಾಡಿಗೆ ನಿಯಮಗಳು 2026 ಮುಖ್ಯವಾಗಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ನಡೆಯುವ ಬಾಡಿಗೆ ವ್ಯವಹಾರವನ್ನು ಹೆಚ್ಚು ಪಾರದರ್ಶಕ ಹಾಗೂ ಕಾನೂನುಬದ್ಧ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ನಿಯಮವಾಗಿದೆ. ಈ ನಿಯಮಗಳ ಮೂಲಕ ಮಾತಿನ ಮೂಲಕವಷ್ಟೇ ನಡೆಯುವ ಬಾಡಿಗೆ ಒಪ್ಪಂದಗಳು, ಅತಿಯಾದ ಬಾಡಿಗೆ ಹಣ ಹೂಡಿಕೆ (Rent Deposit), ದಿಢೀರ್ ಬಾಡಿಗೆ ಹೆಚ್ಚಳ ಮತ್ತು ದೀರ್ಘಕಾಲದ ಕಾನೂನು ವಿವಾದಗಳಂತಹ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿ ಮಾಡಲಾಗಿದೆ.

New Rent Rules 2026

1. ಡಿಜಿಟಲ್ ಬಾಡಿಗೆ ಒಪ್ಪಂದ ಕಡ್ಡಾಯ

ಇನ್ನು ಹೊಸ ಬಾಡಿಗೆ ನಿಯಮಗಳು 2026ರ ಪ್ರಕಾರ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ನೀಡುವಾಗ / ಪಡೆದುಕೊಳ್ಳುವಾಗ ಡಿಜಿಟಲ್ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಈ ಒಪ್ಪಂದವನ್ನು 60 ದಿನಗಳೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ ಮಾಡಲಾಗಿದೆ. ಡಿಜಿಟಲ್ ಸ್ಟ್ಯಾಂಪ್ ಮಾಡಿ ಸರ್ಕಾರದ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದರಿಂದ ನಕಲಿ ಒಪ್ಪಂದಗಳು ಮತ್ತು ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಕಡಿಮೆ. ಒಪ್ಪಂದವನ್ನು ನೋಂದಣಿ ಮಾಡದಿದ್ದರೆ 5,000 ರೂ ಅಥವಾ ಅದಕ್ಕಿಂತ ಹೆಚ್ಚು ದಂಡ ವಿಧಿಸುವ ಸಾಧ್ಯತೆ ಇದೆ.

"ಐಟಿ ನಗರದಲ್ಲಿ ಬದುಕುವುದು ಇಷ್ಟು ದುಬಾರಿ? 'ಪ್ರಾಹಾ' ಪೋಸ್ಟ್ ವೈರಲ್"

2. ಸೆಕ್ಯೂರಿಟಿ ಡಿಪಾಸಿಟ್‌ಗೆ ಮಿತಿ

ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳಿಗೆ ಮುಂಗಡ ಹಣವನ್ನು ವಿಪರೀತವಾಗಿ ಪಡೆದುಕೊಳ್ಳಲಾಗುತ್ತದೆ. ಬಾಡಿಗೆದಾರರಿಗೆ ಆರ್ಥಿಕ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಡಿಪಾಸಿಟ್‌ಗೆ ಮಿತಿ ನಿಗದಿ ಮಾಡಲಾಗಿದೆ. ಬಾಡಿಗೆ ಮನೆಯವರಿಂದ ವರ್ಷಗಳ ಬಾಡಿಗೆ ಹಣವನ್ನು ಮುಂಗಡ ಪಡೆದುಕೊಳ್ಳುವುದಕ್ಕೆ ಬ್ರೇಕ್ ಹಾಕಲಾಗಿದೆ. ಹೊಸ ನಿಯಮದ ಪ್ರಕಾರ ಮನೆಗಳನ್ನು ಬಾಡಿಗೆ ನೀಡುವ ಸಂದರ್ಭದಲ್ಲಿ ಕೇವಲ 2 ತಿಂಗಳ ಬಾಡಿಗೆ ಮಾತ್ರ ಡಿಪಾಸಿಟ್ ಪಡೆದುಕೊಳ್ಳಬಹುದಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಗರಿಷ್ಠ 6 ತಿಂಗಳ ಬಾಡಿಗೆ ಮಾತ್ರ ಪಡೆಯಲು ಅವಕಾಶ ಇರಲಿದೆ.

3. ಬಾಡಿಗೆ ಹೆಚ್ಚಳಕ್ಕೆ ಹೊಸ ನಿಯಮಗಳು

ಮನೆ ಮಾಲೀಕರು 12 ತಿಂಗಳಿಗಿಂತ ಮುಂಚೆ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಹೆಚ್ಚಳ ಮಾಡಲು ಕನಿಷ್ಠ 90 ದಿನಗಳ ಮುಂಚಿತವಾಗಿ ಲಿಖಿತ ಸೂಚನೆ ನೀಡಬೇಕು. ಬಾಡಿಗೆ ಹೆಚ್ಚಳದ ವಿವರಗಳು ಒಪ್ಪಂದದಲ್ಲೇ ಸ್ಪಷ್ಟವಾಗಿ ಉಲ್ಲೇಖ ಮಾಡಿರಬೇಕಾಗುತ್ತದೆ.

Rent: ಈ ನಿಯಮ ಪಾಲಿಸದಿದ್ರೆ ಬಾಡಿಗೆ ಮನೆ ಮಾಲೀಕರ ಮೇಲೆ ಕೇಸ್‌: ಬೆಂಗಳೂರು ಪೊಲೀಸರಿಂದ ಎಚ್ಚರಿಕೆ
Rent: ಈ ನಿಯಮ ಪಾಲಿಸದಿದ್ರೆ ಬಾಡಿಗೆ ಮನೆ ಮಾಲೀಕರ ಮೇಲೆ ಕೇಸ್‌: ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

4. ಬಾಡಿಗೆದಾರರ ಹಕ್ಕುಗಳ ರಕ್ಷಣೆ

ಈ ಹೊಸ ಕಾನೂನು ಮುಖ್ಯವಾಗಿ ಬಾಡಿಗೆದಾರರು ಹಾಗೂ ಆಸ್ತಿದಾರರ ರಕ್ಷಣೆ ಮಾಡುತ್ತದೆ. ಮನೆ ಮಾಲೀಕರು ಬಾಡಿಗೆದಾರರಿಗೆ ಬೆದರಿಕೆ ಹಾಕುವುದು, ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸೇರಿದಂತೆ ಯಾವ ಸಮಸ್ಯೆಯನ್ನೂ ಸೃಷ್ಟಿ ಮಾಡುವಂತಿಲ್ಲ. ಈ ರೀತಿ ಮಾಡಿ ಬಾಡಿಗೆದಾರರ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ. ಮನೆ ಖಾಲಿ ಮಾಡಿಸುವುದು Rent Tribunal ಆದೇಶದ ಮೂಲಕ ಮಾತ್ರ ಅವಕಾಶ ಇರಲಿದೆ. ಆಸ್ತಿದಾರರು ಮನೆ ಪರಿಶೀಲನೆಗೆ / ಅಥವಾ ಬಾಡಿಗೆ ಮನೆಯ ಒಳಗೆ ಬರಬೇಕಾದರೆ 24 ಗಂಟೆಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ನೀಡಬೇಕು.

5. ವಿವಾದ ಶೀಘ್ರ ಪರಿಹಾರ ಮಾಡಿಕೊಳ್ಳಬಹುದು

ಇನ್ನು ಹೊಸ ನಿಯಮದಿಂದಾಗಿ ಬಾಡಿಗೆ ಸಂಬಂಧಿತ ವಿವಾದಗಳನ್ನು Rent Authority, Rent Court ಅಥವಾ Rent Tribunal ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಅವಕಾಶ ಇರಲಿದೆ. ಹೆಚ್ಚಿನ ಪ್ರಕರಣಗಳನ್ನು 60 ದಿನಗಳೊಳಗೆ ಪರಿಹರಿಸುವ ಉದ್ದೇಶ ಇದೆ. ಮನೆ ದುರಸ್ತಿ ಸಮಸ್ಯೆ ಇದ್ದರೆ ಮನೆ ಮಾಲೀಕರು 30 ದಿನಗಳಲ್ಲಿ ದುರಸ್ತಿ ಮಾಡಬೇಕು; ಇಲ್ಲದಿದ್ದರೆ ಬಾಡಿಗೆದಾರರು ದುರಸ್ತಿ ಮಾಡಿ ವೆಚ್ಚವನ್ನು ಬಾಡಿಗೆಯಿಂದ ಕಡಿತ ಮಾಡಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿ ಎದುರಾಗುವ ದುರಸ್ತಿ ಕೆಲಸಗಳನ್ನು ಬಾಡಿಗೆದಾರರೇ ಮಾಡಿಕೊಳ್ಳಿ ಎಂದು ಹೇಳುವುದಕ್ಕೆ ಬರಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+