Get Updates
Get notified of breaking news, exclusive insights, and must-see stories!

BREAKING: ನಮ್ಮ ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಸಾವು, ರೈಲು ಸಂಚಾರ ಸ್ಥಗಿತ: BMRCL

ಬೆಂಗಳೂರು, ಮಾರ್ಚ್ 21: ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ (Namma Metro) ಹಳಿಗೆ ಜಿಗಿಯುವ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಲೇ ಇವೆ. ಇಂದು ಗುರುವಾರದಂದು (ಮಾರ್ಚ್ 21) ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದ ಘಟನೆ ನೇರಳೆ ಮಾರ್ಗದಲ್ಲಿ (Metro Purple Line) ನಡೆದಿದೆ.

ಗುರುವಾರ ಮಧ್ಯಾಹ್ನ 2.10ಕ್ಕೆ ಅತ್ತಿಗುಪ್ಪೆ ಮಟ್ರೋ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ವ್ಯಕ್ತಿ ಟ್ರ್ಯಾಕ್‌ಗೆ ಜಿಗಿದಿದ್ದಾರೆ. ಈ ಟ್ಯಾಕ್‌ ವೇಳೆ 750 ವ್ಯಾಟ್ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಹಳಿಗೆ ಜಿಗಿದ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ. ಹಳಿಗೆ ಜಿಗಿಯುತ್ತಿದ್ದಂತೆ ರೈಲು ಆತನ ಮೇಲೆ ಹರಿದು ಮುಂದೆ ಸಾಗಿದೆ. ವ್ಯಕ್ತಿ ಶವ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Namma Metro A Man Dies After Jump in Metro track at Attiguppe Station

ಅತ್ತಿಗುಪ್ಪೆಯಲ್ಲಿ ಈ ಘಟನೆ ನಡೆಯುತ್ತಿದ್ದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ಮೊದಲ ಬಾರಿಗೆ ಟ್ರ್ಯಾಕ್‌ಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಹಿಂದೆ ಒಂದೆರಡು ಬಾರಿ ಮೆಟ್ರೋ ಟ್ರ್ಯಾಕ್ ಮೇಲೆ ಪ್ರಯಾಣಿಕರು ಜಿಗಿದ ವರದಿ ಆಗಿತ್ತು. ಆದರೆ ಸಾವು ನೋವು ಸಂಭವಿಸಿರಲಿಲ್ಲ. ಸಾವಿನ ಘಟನೆ ಇದೇ ಮೊದಲು ಎನ್ನಲಾಗಿದೆ.

ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಮೃತಪಟ್ಟ ವ್ಯಕ್ತಿಯನ್ನು 20 ವರ್ಷದ ಯುವಕ ಎಂದು ತಿಳಿದು ಬಂದಿದೆ. ಬೆಂಗಳೂರಿನ ನ್ಯಾಷನಲ್ ಕಾನೂನು ಕಾಲೇಜು ವಿದ್ಯಾರ್ಥಿ. ಈತ ಮುಂಬೈ ಮೂಲದ ಧ್ರುವ ಎಂದು ಗುರುತಿಸಲಾಗಿದೆ ಎಂದು ನಮ್ಮ ಮೆಟ್ರೋ ಮೂಲಗಳು ಖಚಿತಪಡಿಸಿವೆ. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮಾಗಡಿ ರಸ್ತೆಯಿಂದ ಕೆಂಗೇರಿ ಕಡೆ ಮೆಟ್ರೋ ಸಂಚಾರ ಬಂದ್

ರೈಲು ಮೈಸೂರು ರಸ್ತೆಯ ಚಲ್ಲಘಟ್ಟದಿಂದ ವೈಟ್‌ಫಿಲ್ಡ್‌ಗೆ ತೆರಳುವ ರೈಲು ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಮಧ್ಯಾಹ್ನ ಈ ಘಟನೆ ಜರುಗಿದೆ.

ವ್ಯಕ್ತಿ ಮೆಟ್ರೋ ಹಳಿಗೆ ಜಿಗದ ಘಟನೆ ತಿಳಿಯುತ್ತಿದ್ದಂತೆ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆಯಿಂದ ಮಾತ್ರ ವೈಟ್‌ಫಿಲ್ಡ್‌ವರೆಗೆ ಓಡುತ್ತಿವೆ. ಮಾಗಡಿ ರಸ್ತೆಯಿಂದ ಚಲ್ಲಘಟ್ಟವರೆಗಿನ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ BMRCL ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+