ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: 4 ಪ್ರಮುಖ ಮಾರ್ಗದ ಕಾಮಗಾರಿ ಮುಗಿಸಲು ಡೆಡ್‌ಲೈನ್ ಫಿಕ್ಸ್‌

ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪ್ರಮುಖ ಪರ್ಯಾಯವಾಗಿರುವ 'ನಮ್ಮ ಮೆಟ್ರೋ' ಯೋಜನೆಗಳು ಸದ್ಯ ನಗರದಾದ್ಯಂತ ಬಿರುಸಿನಿಂದ ಸಾಗುತ್ತಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದ ಪ್ರಮುಖ ಐಟಿ ಹಬ್‌ಗಳು, ಹೊರವರ್ತುಲ ರಸ್ತೆಗಳು (ORR) ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ವಿವಿಧ ಮಾರ್ಗಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಹೊಸ ಗಡುವು ನಿಗದಿಪಡಿಸಿದೆ. ಮುಂಬರುವ ತಿಂಗಳುಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿರುವ ನಮ್ಮ ಮೆಟ್ರೋದ ಪ್ರಮುಖ ಮಾರ್ಗಗಳ ಸಂಪೂರ್ಣ ವಿವರ ಇಲ್ಲಿದೆ.

1. ಪಿಂಕ್ ಲೈನ್ (Pink Line): ಕಾಳೇನ ಅಗ್ರಹಾರದಿಂದ ನಾಗವಾರ

ಬೆಂಗಳೂರಿನ ದಕ್ಷಿಣ ಭಾಗವನ್ನು ಉತ್ತರ ಭಾಗಕ್ಕೆ ಜೋಡಿಸುವ ಅತ್ಯಂತ ಪ್ರಮುಖ ಮಾರ್ಗ ಇದಾಗಿದೆ. ಇದರಲ್ಲಿ ಸುರಂಗ ಮಾರ್ಗ ಮತ್ತು ಮೇಲ್ಸೇತುವೆ ಎರಡೂ ಒಳಗೊಂಡಿವೆ. ಈ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಎರಡು ಹಂತಗಳಲ್ಲಿ ಲೋಕಾರ್ಪಣೆ ಮಾಡಲು ಯೋಜನೆ ರೂಪಿಸಿದೆ. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಮತ್ತು ಭೂಗತ ಮಾರ್ಗದ ಮೊದಲ ಹಂತದ ಕಾಮಗಾರಿಗಳು ಚುರುಕಿನಿಂದ ಸಾಗುತ್ತಿದ್ದು, 2026ರ ಆಗಸ್ಟ್ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಇದು ಬನ್ನೇರುಘಟ್ಟ ರಸ್ತೆ ಮತ್ತು ಡೈರಿ ಸರ್ಕಲ್ ಆಸುಪಾಸಿನ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ನೀಡಲಿದೆ. ತಾವರೆಕೆರೆಯಿಂದ ಮುಂದುವರಿದು ಶಿವಾಜಿನಗರ, ಎಂ.ಜಿ. ರಸ್ತೆ ಮೂಲಕ ನಾಗವಾರ ತಲುಪುವ ಸಂಪೂರ್ಣ ಸುರಂಗ ಮತ್ತು ಮೇಲ್ಸೇತುವೆ ಮಾರ್ಗವು 2027ರ ಮಾರ್ಚ್ ವೇಳೆಗೆ ಸಾರ್ವಜನಿಕ ಬಳಕೆಗೆ ಸಿದ್ಧವಾಗಲಿದೆ. ಇದು ನಗರದ ಹೃದಯಭಾಗವನ್ನು ಉತ್ತರ ಬೆಂಗಳೂರಿಗೆ ಸುಲಭವಾಗಿ ಸಂಪರ್ಕಿಸುತ್ತದೆ.

Namma Metro

2. ಕೆ.ಆರ್.ಪುರ-ಮಾರತ್ತಹಳ್ಳಿ-ಎಚ್‌ಎಸ್‌ಆರ್ ಲೇಔಟ್ (ಬ್ಲೂ ಲೈನ್-ಹಂತ 2ಎ)

ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಎಂದೇ ಹೆಸರಾಗಿರುವ ಹೊರವರ್ತುಲ ರಸ್ತೆಯ ಪ್ರಯಾಣಿಕರಿಗೆ ಈ ಮಾರ್ಗ ಅತ್ಯಂತ ನಿರ್ಣಾಯಕವಾಗಿದೆ. ಲಕ್ಷಾಂತರ ಐಟಿ ಉದ್ಯೋಗಿಗಳು ಈ ಮಾರ್ಗದ ಮೇಲೆ ಕಣ್ಣಿಟ್ಟಿದ್ದಾರೆ. ಕೆ.ಆರ್.ಪುರಂನಿಂದ ಆರಂಭವಾಗಿ ಮಾರತ್ತಹಳ್ಳಿ ಮೂಲಕ ಎಚ್‌ಎಸ್‌ಆರ್ ಲೇಔಟ್‌ವರೆಗಿನ ಮಾರ್ಗದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರವನ್ನು 2026ರ ಅಕ್ಟೋಬರ್ ವೇಳೆಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ದಿನಾಂಕ ನಿಗದಿಯಾಗಿದ್ದರೂ, ಪ್ರಮುಖ ಜಂಕ್ಷನ್ ಆಗಿರುವ 'ಸೆಂಟ್ರಲ್ ಸಿಲ್ಕ್ ಬೋರ್ಡ್' ಮೆಟ್ರೋ ನಿಲ್ದಾಣದ ಕೆಲವು ತಾಂತ್ರಿಕ ಹಾಗೂ ಮೂಲಸೌಕರ್ಯ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ. ಇದನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ, ಸ್ವಂತ ಕಾರು ಅಥವಾ ಕ್ಯಾಬ್‌ ಯಾವುದು ಬೆಸ್ಟ್‌; ಖರ್ಚು ಕಡಿಮೆ ಹೇಗೆ?
ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ, ಸ್ವಂತ ಕಾರು ಅಥವಾ ಕ್ಯಾಬ್‌ ಯಾವುದು ಬೆಸ್ಟ್‌; ಖರ್ಚು ಕಡಿಮೆ ಹೇಗೆ?

3. ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Airport Line-ಹಂತ 2ಬಿ)

ನಗರದ ಜನತೆ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ವಿಮಾನ ನಿಲ್ದಾಣವನ್ನು ತಲುಪಲು ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಉತ್ತರ ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಮೈಲಿಗಲ್ಲಾಗಲಿದೆ. ಹೆಬ್ಬಾಳದಿಂದ ಯಲಹಂಕ ಮೂಲಕ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ಕಾಮಗಾರಿಯು 2027ರ ಜೂನ್ ತಿಂಗಳೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ. ಈ ಮಾರ್ಗ ಮುಕ್ತಾಯಗೊಂಡರೆ ಏರ್‌ಪೋರ್ಟ್ ಪ್ರಯಾಣಿಕರ ಪ್ರಯಾಣದ ಸಮಯ ಅರ್ಧಕ್ಕರ್ಧ ಉಳಿತಾಯವಾಗಲಿದೆ.

Namma Metro

4. ಕೆ.ಆರ್.ಪುರಂನಿಂದ ಹೆಬ್ಬಾಳ

ಹೊರವರ್ತುಲ ರಸ್ತೆಯ ಮತ್ತೊಂದು ಪ್ರಮುಖ ಭಾಗವಾಗಿರುವ ಕೆ.ಆರ್. ಪುರಂ ಮತ್ತು ಹೆಬ್ಬಾಳ ನಡುವಿನ ಸಂಪರ್ಕವು ಇಡೀ ಬ್ಲೂ ಲೈನ್ ಯೋಜನೆಯನ್ನು ಪೂರ್ಣಗೊಳಿಸುತ್ತದೆ. ಮಹದೇವಪುರ, ಕಲ್ಯಾಣನಗರ ಹಾಗೂ ಹೆಣ್ಣೂರು ಭಾಗಗಳನ್ನು ಒಳಗೊಂಡಿರುವ ಕೆ.ಆರ್. ಪುರಂನಿಂದ ಹೆಬ್ಬಾಳವರೆಗಿನ ಮೆಟ್ರೋ ಮಾರ್ಗವು 2027ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದು ತಿಳಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಮೆಟ್ರೋ ಕ್ರಾಂತಿ ಉಂಟಾಗಲಿದ್ದು, ನಗರದ ಮೂಲೆ ಮೂಲೆಗಳಿಗೂ ಸುಲಭ ಸಂಪರ್ಕ ಕಲ್ಪಿಸಲು ಬಿಎಂಆರ್‌ಸಿಎಲ್ ಕಾಲಮಿತಿಯೊಳಗೆ ಕೆಲಸ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+