ದೇಹದ ಆ ಭಾಗ ಕಡಿಮೆ ಇದ್ರೆ ಸಿಕ್ಕಾಪಟ್ಟೆ ಸಕ್ಸಸ್‌ ಎಂದು ಗಿಲ್ಲಿ, ರಜನಿಕಾಂತ್‌ ಉದಾಹರಣೆ ಕೊಟ್ಟ ಆರ್ಯವರ್ಧನ್‌ ಗುರೂಜಿ

'ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು' ಎಂಬ ವಿಶಿಷ್ಟ ಡೈಲಾಗ್ ಮೂಲಕವೇ ಕರ್ನಾಟಕದಾದ್ಯಂತ ಗುರುತಿಸಿಕೊಂಡಿರುವ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ (Aryavardhan Guruji) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಬಿಗ್‌ಬಾಸ್‌ನಲ್ಲೂ ಮಿಂಚಿದ್ದ ಗುರೂಜಿ, ತಮ್ಮದೇ ಆದ ವಿಶಿಷ್ಟ ಹಾಗೂ ವಿಭಿನ್ನ ಶೈಲಿಯಲ್ಲಿ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರವನ್ನು ವಿಶ್ಲೇಷಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರ ಮಾತುಗಳನ್ನು ಕೆಲವರು ಗಂಭೀರವಾಗಿ ನಂಬಿದರೆ, ಇನ್ನೂ ಕೆಲವರು ಕೇವಲ ಮನರಂಜನೆ ಎಂದೇ ಭಾವಿಸುತ್ತಾರೆ. ಸದ್ಯ ಗುರೂಜಿ ಅವರು ಸಿನಿಮಾ ತಾರೆಯರ ಯಶಸ್ಸಿನ ಹಿಂದೆ ಇರುವ ರಹಸ್ಯದ ಬಗ್ಗೆ ಮಾತನಾಡಿದ್ದು, ದೇಹದ ಆ ಭಾಗ ಸಣ್ಣದಾಗಿದ್ರೆ ಮಾತ್ರ ಸಕ್ಸಸ್‌ ಎಂದಿದ್ದಾರೆ.

ಆರ್ಯವರ್ಧನ್ ಗುರೂಜಿ ಅವರ ಪ್ರಕಾರ, ಸಿನಿರಂಗದಲ್ಲಿ ತಾರೆಯರು ದೊಡ್ಡ ಮಟ್ಟದ ಯಶಸ್ಸು ಮತ್ತು ಕೋಟ್ಯಂತರ ರೂಪಾಯಿ ಸಂಪತ್ತು ಗಳಿಸುವುದಕ್ಕೂ ಹಾಗೂ ಅವರ ದೇಹದ ಕೆಲವು ಲಕ್ಷಣಗಳಿಗೂ ನೇರ ಸಂಬಂಧವಿದೆಯಂತೆ. ಈ ಬಗ್ಗೆ ಮಾತನಾಡಿರುವ ಅವರು, "ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಅಂಡು ಇಲ್ಲ. ಅವರು ಸಕಲ ಸಂಪತ್ತು, ಐಶ್ವರ್ಯ ಹೊಂದಿರುವ ಕೋಟ್ಯಧೀಶ್ವರರು. ವ್ಯಕ್ತಿಯ ದೇಹದಲ್ಲಿ ಆ ಭಾಗ ಎಷ್ಟು ಒಳಗಿರುತ್ತದೆಯೋ, ಅವರು ಅಷ್ಟು ದೊಡ್ಡ ಶ್ರೀಮಂತರಾಗುತ್ತಾ ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Aryavardhan Guruji

ಗಿಲ್ಲಿ ಕೂಡ ಬಿಗ್‌ಬಾಸ್‌ ಗೆದ್ದ

ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಗುರೂಜಿ ಅವರು ಇತ್ತೀಚಿನ ಬಿಗ್‌ಬಾಸ್‌ ವಿಜೇತರ ಹಾಗೂ ಬಾಲಿವುಡ್‌ನ ಹಿರಿಯ ನಟರ ಉದಾಹರಣೆಗಳನ್ನು ನೀಡಿದ್ದಾರೆ. "ಬಿಗ್ ಬಾಸ್ ಶೋ ನೋಡುವಾಗ ಸ್ಪರ್ಧಿ ಜಾಹ್ನವಿ ಅವರು ಒಂದು ಡೈಲಾಗ್ ಹೊಡೆದಿದ್ದರು. ಇಲ್ಲಿರುವವರು ಯಾರೂ ಗಂಡಸರೇ ಅಲ್ಲ ಎಂದು ಅವರು ಹೇಳಿದಾಗ, ನಿರೂಪಕ ಸುದೀಪ್ ಅವರು 'ಏನು ಹೇಳುತ್ತಿದ್ದೀರಾ' ಎಂದು ಕೇಳಿದ್ದರು. ಗಿಲ್ಲಿಗೆ ಸೊಂಟನೇ ನಿಲ್ಲಲ್ಲ ಎಂದಿದ್ರು. ಆದರೆ, ಕೊನೆಗೆ ಅದೇ ಗಿಲ್ಲಿ ಟ್ರೋಫಿ ಗೆದ್ದುಕೊಂಡು ಬಂದ. ಇದೆಲ್ಲವೂ ವಿಧಿಲಿಖಿತ" ಎಂದು ಗುರೂಜಿ ಹೇಳಿದ್ದಾರೆ.

ಕೇವಲ ರಜನಿಕಾಂತ್ ಮಾತ್ರವಲ್ಲದೆ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಜೇಶ್ ಖನ್ನಾ ಸೇರಿದಂತೆ ಕನ್ನಡದ ಹಲವು ಪ್ರಮುಖ ನಾಯಕ ನಟರಿಗೂ ಇದೇ ದೈಹಿಕ ಲಕ್ಷಣಗಳಿವೆ. ಯಾರಿಗೆ ಆ ಭಾಗ ಸಣ್ಣದಾಗಿರುತ್ತದೆಯೋ ಅಥವಾ ಇರುವುದಿಲ್ಲವೋ, ಅವರಿಗೆ ಸಿನಿಮಾ ರಂಗದಲ್ಲಿ ಭಾರಿ ಯಶಸ್ಸು ಸಿಗುತ್ತದೆ ಎಂದು ಅವರು ಆರ್ಯವರ್ಧನ್‌ ಗುರೂಜಿ ವ್ಯಾಖ್ಯಾನಿಸಿದ್ದಾರೆ.

Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್‌ ರೇಂಜೇ ಬೇರೆ ಅನ್ನೋ ಮೆಸೇಜ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌
Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್‌ ರೇಂಜೇ ಬೇರೆ ಅನ್ನೋ ಮೆಸೇಜ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌

ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಟ್ರೋಲ್

ಆರ್ಯವರ್ಧನ್ ಗುರೂಜಿ ಅವರ ಈ ವಿಡಿಯೋ ತುಣುಕು ಹೊರಬೀಳುತ್ತಿದ್ದಂತೆ, ಟ್ರೋಲಿಗರು ಮತ್ತು ಮೀಮ್ಸ್ ಕ್ರಿಯೇಟರ್‌ಗಳು ಸಕ್ರಿಯರಾಗಿದ್ದಾರೆ. ಇಂತಹ ವಿಚಿತ್ರ ಮತ್ತು ಹಾಸ್ಯಾಸ್ಪದ ಜ್ಯೋತಿಷ್ಯದ ವಿಶ್ಲೇಷಣೆಯನ್ನು ಕೇಳಿ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಾ ಗುರೂಜಿಯವರ ಕಾಲಳೆಯುತ್ತಿದ್ದಾರೆ. ತಮ್ಮ ವಿಭಿನ್ನ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ, ಈ ಬಾರಿ ದೈಹಿಕ ಲಕ್ಷಣ ಮತ್ತು ಸಕ್ಸಸ್ ಜ್ಯೋತಿಷ್ಯದ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಟ್ರೋಲ್‌ಗೆ ಆಹಾರವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+