Lok Sabha Election: ಕಾಂಗ್ರೆಸ್‌ನ 39 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಕರ್ನಾಟಕದ 7 ಕ್ಷೇತ್ರದ ಹೆಸರು ಫೈನಲ್
ನವದೆಹಲಿ, ಮಾರ್ಚ್ 08: ಲೋಕಸಭಾ ಚುನಾವಣೆ 2024ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಫೈನಲ್ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಸಭೆ ಬಳಿಕ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಲೋಕಸಭಾ ಚುನಾವಣೆಗೆ (Loksabha Elections 2024) ಟಿಕೆಟ್ ಅಂತಿಮಗೊಳಿಸುವ ಸಲುವಾಗಿ ಕಾಂಗ್ರೆಸ್ ನಿರಂತರವಾಗಿ ಸಭೆ ನಡೆಸಿತ್ತು. ಶುಕ್ರವಾರ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್, ಅಜಯ್ ಮಕೇನ್, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು.

ಅಂತಿಮಗೊಂಡ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗ ಮತ್ತು 24 ಎಸ್‌ಸಿ, ಎಸ್‌ಟಿ, ಓಬಿಸಿ ವರ್ಗದ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಂಡಿವೆ.
ಉಳಿದಂತೆ ಕೇರಳದಲ್ಲಿ 15 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಂಡಿದೆ. ಉಳಿದಂತೆ ತೆಲಂಗಾಣದಲ್ಲಿ 4, ಛತ್ತೀಸ್ಗಢದಲ್ಲಿ 6, ಮೇಘಾಲಯದ 2, ಸಿಕ್ಕಿಂ, ತ್ರಿಪುರ ಮತ್ತು ನಾಗಲ್ಯಾಂಡ್ ರಾಜ್ಯಗಳಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಕೆಸಿ ವೇಣುಗೋಪಾಲ್ ಮಾಹಿತಿ ನೀಡಿದರು.
ಕರ್ನಾಟಕದ 7 ನಾಯಕರಿಗೆ ಟಿಕೆಟ್ ಅಂತಿಮ
ಹಾವೇರಿ : ಅನಂತಸ್ವಾಮಿ ಗಡ್ಡದೇವರಮಠ
ತುಮಕೂರು ಮುದ್ದ ಹನುಮೇಗೌಡ,
ಶಿವಮೊಗ್ಗ: ಗೀತಾ ಶಿವರಾಜಕುಮಾರ್
ಬೆಂಗಳೂರು ಗ್ರಾಮಾಂತರ : ಡಿಕೆ ಸುರೇಶ್,
ಹಾಸನ : ಶ್ರೇಯಸ್ ಪಾಟೀಲ್
ವಿಜಯಪುರ: ಎಸ್.ಆರ್ ಅಲಗೂರು
ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)

ಕೇರಳ ರಾಜ್ಯದ ಅಭ್ಯರ್ಥಿಗಳ ಮಾಹಿತಿ
ಇನ್ನೂ ಕೇರಳ ರಾಜ್ಯದಲ್ಲಿ ಯಾರಿಗೆಲ್ಲ ಟಿಕೆಟ್ ಸಿಕ್ಕಿದೆ ಎಂದು ನೋಡುವುದಾದರೆ, ರಾಹುಲ್ ಗಾಂಧಿಯವರ ಹೆಸರು ಮೊದಲ ಪಟ್ಟಿಯಲ್ಲಿಯೇ ಇದ್ದು, ಅವರು ವಯನಾಡಿನಿಂದ ಸ್ಪರ್ಧಿಸುವುದು ಈ ಮೂಲಕ ಅಂತಿಮವಾಗಿದೆ.
ಉಳಿದಂತೆ ಕಾಸರಗೋಡಿನಿಂದ 'ರಾಜಮೋಹನ್ ಉಣ್ಣಿತ್ತಾನ್', ಕಣ್ಣೂರು- 'ಕೆ ಸುಧಾಕರನ್', ವಡಕರ ಕ್ಷೇತ್ರದಿಂದ ಶಫಿ ಪರಂಬಿಲ್, ಕೋಝಿಕ್ಕೋಡ್ ಕ್ಷೇತ್ರದಿಂದ ಎಂಕೆ ರಾಘವನ್, ಪಾಲಕ್ಕಾಡ್ ಕ್ಷೇತ್ರದಿಂದ ವಿಕೆ ಶ್ರೀಕಂಠನ್, ಲತೂರ್ (ಎಸ್‌ಸಿ) ಕ್ಷೇತ್ರದಿಂದ ರೆಮ್ಯಾ ಹರಿದಾಸ್, ತ್ರಿಶೂರ್ ಕ್ಷೇತ್ರದಿಂದ ಕೆ.ಮರಳೀಧರನ್, ಚಾಲಕ್ಕುಡಿ ಕ್ಷೇತ್ರದಿಂದ ಬೆನ್ನಿ ಬಹನ್ನಾನ್, ಎರ್ನಾಕುಲಂ ಕ್ಷೇತ್ರದಿಂದ ಹಿಬಿ ಇಡೆನ್, ಇಡುಕ್ಕಿ ಕ್ಷೇತ್ರದಿಂದ ಡೀನ್ ಕುರಿಯಾಕೋಸ್, ಮಾವೇಲಿಕರ (ಎಸ್‌ಸಿ) ಕ್ಷೇತ್ರದಿಂದ ಕೋಡಿಕುನ್ನಿಲ್ ಸುರೇಶ್, ಪಟ್ಟಣಂತಿಟ್ಟ ಕ್ಷೇತ್ರದಿಂದ ಆ್ಯಂಟೋ ಆ್ಯಂಟೋನಿ ಹಾಗೂ ಅತ್ತಿಂಗಲ್ ಕ್ಷೇತ್ರದಿಂದ ಅಡೂರ್ ಪ್ರಕಾಶ್ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ತೆಲಂಗಾಣ ರಾಜ್ಯದಲ್ಲಿ ನಾಲ್ವರಿಗೆ ಟಿಕೆಟ್ ಭಾಗ್ಯ ಸಿಕ್ಕಿದೆ. ಜಹೀರಾಬಾದ್ ಕ್ಷೇತ್ರದಿಂದ ಸುರೇಶ್ ಕುಮಾರ್ ಶೆಟ್ಕರ್, ಚೇವೆಲ್ಲಾ ಕ್ಷೇತ್ರದಿಂದ ಸುನೀತಾ ಮಹೇಂದರ್ ರೆಡ್ಡಿ, ನಲ್ಗೊಂಡ ಕ್ಷೇತ್ರದಿಂದ ಕುಂದೂರು ರಘುವೀರ್ ಮತ್ತು ಮಹಬೂಬಾಬಾದ್ ಕ್ಷೇತ್ರದಿಂದ (ಎಸ್‌ಟಿ) ಪೋರಿಕ ಬಲರಾಮ್ ನಾಯಕ್ ಅವರನ್ನು ಅಂತಿಮಗೊಳಿಸಲಾಗಿದೆ.












Click it and Unblock the Notifications