Karnataka Rain: ಹವಾಮಾನ ವೈಪರಿತ್ಯ: 'ಮಹಾಮಳೆ' ಹಿನ್ನೆಲೆ 27 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್': IMD
ಬೆಂಗಳೂರು, ಏಪ್ರಿಲ್ 20: ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಕರ್ನಾಟಕದ ಬೇಸಿಗೆ ಮಧ್ಯವು ಬಿರುಗಾಳಿ ಸಹಿತ ಧಾಕಾರಾರ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಒಟ್ಟು 27 ಜಿಲ್ಲೆಗಳು 'ಮಹಾಮಳೆ'ಗೆ ಶನಿವಾರ ಸಾಕ್ಷಿಯಾಗಲಿವೆ. ಗರಿಷ್ಠ 20 ಸೆಂಟಿ ಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳು ಬಿರು ಬೇಸಿಗೆಗೆ ತತ್ತರಿಸಿದ್ದವು. ಇದೀಗ ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಳೆ ಬರುತ್ತಿದೆ. ಕಳೆದ ಮೂರು ದಿನದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಜೋರು ಮಳೆಯಾಗುತ್ತಿದೆ.

ಸದ್ಯ ಹವಾಮಾಣದಲ್ಲಿ ತೀವ್ರ ರೂಪದ ಬದಲಾವಣೆಗಳು ಆಗಿವೆ. ಈ ಹಿನ್ನೆಲೆಯಲ್ಲಿ ನಾಳೆ ಶನಿವಾರ ಏಪ್ರಿಲ್ 21ರಂದು ಕರ್ನಾಟಕದಲ್ಲಿ ಬರೋಬ್ಬರಿ 27 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಸುರಿಯಲಿದೆ. ಇದು ವರ್ಷದ ಮಹಾಮಳೆ ಆಗುವ ಸಾಧ್ಯತೆ ಇದೆ.
Monsoon Forecast: 4 ತಿಂಗಳ ಮುಂಗಾರು ಮಳೆ ಡಿಟೇಲ್ಸ್ ಕೊಟ್ಟ ಐಎಂಡಿ
ನಾಳೆ ಈ 27 ಜಿಲ್ಲೆಗಳಿಗೆ ಮಹಾಮಳೆ ನಿರೀಕ್ಷೆ
ಹೀಗಾಗಿ ನಾಳೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಹಾಸನ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಮಳೆ ಆರ್ಭಟ ಕಂಡು ಬರಲಿದೆ.
ಹವಾಮಾನ ಇಲಾಖೆ ಪ್ರಕಾರ ಈ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ 12ರಿಂದ 20 ಸೆಂಟಿ ಮೀಟರ್‌ವರೆಗೂ ಮಳೆ ಸುರಿಯುವ ನಿರೀಕ್ಷೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ಕರಾವಳಿ ಮೂರು ಜಿಲ್ಲೆಗೆ ಸಾಧಾರಣ ಮಳೆ
ಬೇಸಿಗೆ ಆರಂಭವಾಗುತ್ತಿದ್ದಂತೆ ಫೆಬ್ರವರಿಯಿಂದ ವಿಪರೀತ ಬಿಸಿಲು ಸೃಷ್ಟಿಯಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯ ಎಲ್ಲ ಭಾಗಗಳಲ್ಲೂ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಸಾಮಾನ್ಯ ಮಳೆ ಸುರಿಯಿತು.
ಇದೀಗ ಏಕಾಎಕಿ ಮಹಾಮಳೆಯ ಮುನ್ಸೂಚನೆ ಲಭಿಸಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮೂರು ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಭಾರೀ ಮಳೆ ಬರಲಿದೆ. ಈ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬರಲಿದೆ. ನಾಳೆ ಒಂದು ದಿನ ವಾತಾವರಣ ಹೀಗಿರಲಿದೆ. ನಂತರ ಕಡಿಮೆ ಆಗಲಿದೆ. ದಿಢೀರ ವ್ಯಾಪಕ ಮಳೆ ಸೃಷ್ಟಿಗೆ ಹವಾಮಾನದಲ್ಲಿ ಒಂದಷ್ಟು ಬದಲಾವಣೆಗಳು ಕಾರಣ ಎನ್ನಲಾಗಿದೆ.
ಸದ್ಯ ಮಳೆ ಮುನ್ಸೂಚನೆಗಳು ಈ ವರ್ಷ ಉತ್ತಮ ಮುಂಗಾರು ಮಳೆ ಮುನ್ಸೂಚನೆಗಳಾಗಿವೆ. ಅಲ್ಲದೇ ಉದ್ಯಾನ ನಗರಿ ಬೆಂಗಳೂರಿಗೆ ಈ ವರ್ಷ ಮಳೆಯೇ ಆಗಿರಲಿಲ್ಲ. ಇಂದು ಶನಿವಾರ ಜೋರು ಮಳೆ ದಾಖಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸೆಕೆಯ ವಾತಾವರಣ ತಕ್ಕಮಟ್ಟಿಗೆ ಮರೆಯಾಗಿದೆ. ತಾಪಮಾನ ಇಳಿಕೆ ಆಗಿದ್ದು, ಮಬ್ಬು, ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದನ್ನು ನೋಡಬಹುದು.












Click it and Unblock the Notifications