ದಿಢೀರ್ ಏರಿಕೆ ಕಂಡ ಚಿನ್ನ-ಬೆಳ್ಳಿ ದರ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?
ಚಿನ್ನ ಮತ್ತು ಬೆಳ್ಳಿಯ ಮೇಲೆ ಗ್ರಾಹಕರಿಗೆ ಅದರಲ್ಲೂ ಮಹಿಳೆಯರಿಗೆ ಯಾವಾಗಲೂ ವಿಶೇಷ ಒಲವಿರುತ್ತದೆ. ಚಿನ್ನ ಖರೀದಿಗೆ ಅಥವಾ ಅದರ ಬೆಲೆಗಳನ್ನಾ ಮದುವೆ ಸೀಸನ್ ಅಥವಾ ಹಬ್ಬದ ದಿನಗಳೇ ಬರಬೇಕೆಂದೆನಿಲ್ಲ, ದಿನನಿತ್ಯವೂ ಚಿನ್ನದ ದರದ ಮೇಲಿನ ನಿಗಾ ತಪ್ಪುವುದಿಲ್ಲ. ಸದ್ಯ ಚಿನ್ನದ ಮಾರುಕಟ್ಟೆಯಲ್ಲಿ ಸತತ ಬದಲಾವಣೆಗಳು ನಡೆಯುತ್ತಿದ್ದು, ಆಭರಣ ಪ್ರಿಯರಿಗೆ ಇಂದು ಕೊಂಚ ನಿರಾಸೆಯಾಗಿದೆ.
ನಿರಂತರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಎನ್ನುವಂತೆ ಇಂದು, ಅಂದರೆ ಜುಲೈ 15ರಂದು ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದ್ದು, ಮುಂಬರುವ ಹಬ್ಬದ ಸೀಸನ್‌ಗಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇದು ಸ್ವಲ್ಪ ಹೊರೆಯಾಗಲಿದೆ.

ನಿನ್ನೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಗ್ರಾಹಕರಿಗೆ ದೊಡ್ಡ ಮಟ್ಟದ ಬಿಸಿ ಮುಟ್ಟಿದೆ. ನಿನ್ನೆ (ಜುಲೈ 14) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 13,090 ರೂಪಾಯಿ ಇತ್ತು. ಆದರೆ ಇಂದು ಮಾರುಕಟ್ಟೆ ತೆರೆಯುತ್ತಿದ್ದಂತೆಯೇ ಪ್ರತಿ ಗ್ರಾಂಗೆ 70 ರೂಪಾಯಿ ಏರಿಕೆಯಾಗಿ, ಬೆಲೆ 13,160 ರೂಪಾಯಿಗೆ ತಲುಪಿದೆ. ಅದೇ ರೀತಿ, 24 ಕ್ಯಾರೆಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ ನಿನ್ನೆ 14,280 ರೂಪಾಯಿ ಇದ್ದು, ಇಂದು 77 ರೂಪಾಯಿ ಜಿಗಿತ ಕಂಡು 14,357 ರೂಪಾಯಿಗೆ ಮಾರಾಟವಾಗುತ್ತಿದೆ.
ಚಿನ್ನದ ದರದಲ್ಲಿ ಇಷ್ಟೊಂದು ಏರಿಕೆಯಾಗಿದ್ದರೂ, ಬೆಳ್ಳಿಯ ಮಾರುಕಟ್ಟೆಯಲ್ಲಿ ನಿನ್ನೆಗಿಂತ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇಂದು ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿಯಂತೆ ಸ್ಥಿರ ವಹಿವಾಟು ನಡೆಸುತ್ತಿದೆ.
ಆದರೆ, ಮಾರುಕಟ್ಟೆ ವರದಿಗಳ ಪ್ರಕಾರ, ಎಂಸಿಎಕ್ಸ್ ಚಿನ್ನದ ಫ್ಯೂಚರ್ಸ್ ಶೇಕಡಾ 0.50 ರಷ್ಟು ಇಳಿಕೆಯಾಗಿ 10 ಗ್ರಾಂಗೆ 1,41,588 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ಎಂಸಿಎಕ್ಸ್ ಬೆಳ್ಳಿ ದರವೂ ಶೇಕಡಾ 0.30 ರಷ್ಟು ಕುಸಿದು ಪ್ರತಿ ಕೆಜಿಗೆ 2,22,500 ರೂಪಾಯಿಗಳ ಮಟ್ಟದಲ್ಲಿದೆ. ಅಮೆರಿಕದ ಆರ್ಥಿಕ ವಿದ್ಯಮಾನಗಳು ಹಾಗೂ ಬಡ್ಡಿ ದರ ಏರಿಕೆಯ ಸಾಧ್ಯತೆಗಳು ಎಂಸಿಎಕ್ಸ್ ಮಾರುಕಟ್ಟೆಯ ಮೇಲೆ ಈ ರೀತಿಯ ವ್ಯತಿರಿಕ್ತ ಒತ್ತಡವನ್ನು ಸೃಷ್ಟಿಸಿವೆ ಎನ್ನಬಹುದು.
ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರೆಟ್ 1 ಗ್ರಾಂ ಚಿನ್ನದ ನಿಖರ ಬೆಲೆಗಳ ಪಟ್ಟಿ ಈ ಕೆಳಗಿನಂತಿದೆ:
ಬೆಂಗಳೂರು - 13,160 ರೂಪಾಯಿ
ದೆಹಲಿ - 13,175 ರೂಪಾಯಿ
ಚೆನ್ನೈ - 13,220 ರೂಪಾಯಿ
ಮುಂಬೈ - 13,160 ರೂಪಾಯಿ
ಹೈದರಾಬಾದ್ - 13,160 ರೂಪಾಯಿ
ಅಹಮದಾಬಾದ್ - 13,165 ರೂಪಾಯಿ
ಪುಣೆ - 13,160 ರೂಪಾಯಿ
ಕೋಲ್ಕತ್ತಾ - 13,160 ರೂಪಾಯಿ
ಗಮನಿಸಿ: ಮೇಲಿನ ಪಟ್ಟಿಯಲ್ಲಿರುವ ದರಗಳಿಗೆ ಸ್ಥಳೀಯ ಜ್ಯುವೆಲ್ಲರಿ ಮಳಿಗೆಗಳಲ್ಲಿ ವಿಧಿಸಲಾಗುವ ಶೇಕಡಾ 3ರಷ್ಟು ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜಸ್ ಸೇರ್ಪಡೆಯಾಗುತ್ತದೆ. ಹೀಗಾಗಿ ಅಂತಿಮ ಬೆಲೆಯನ್ನು ಲೆಕ್ಕಹಾಕಿ, ಅಧಿಕೃತ ಬಿಲ್ ಹಾಗೂ ಹಾಲ್‌ಮಾರ್ಕ್ ಇರುವ ಆಭರಣಗಳನ್ನೇ ಖರೀದಿಸುವುದು ಸೂಕ್ತ.


Click it and Unblock the Notifications
