Karnataka Dam Water Level: ಆಲಮಟ್ಟಿ ಸೇರಿ ವಿವಿಧ ಡ್ಯಾಂಗಳ ಒಳಹರಿವು ಹೆಚ್ಚಳ, ಇಂದಿನ ನೀರಿನ ಮಟ್ಟ ಎಷ್ಟಿದೆ?

ಬೆಂಗಳೂರು: ಇತ್ತೀಚೆಗೆ ಸುರಿದ ಜೋರು ಮಳೆಯಿಂದಾಗಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಮಳೆ ತಗ್ಗಿದ ಪರಿಣಾಮ ಒಳಹರಿವು ಇಳಿಕೆ ಆಗಿದೆ. ಈ ನಡುವೆ ಕೃಷ್ಣ ರಾಜ ಸಾಗರ (KRS) ಜಲಾಶಯದಿಂದ ಮಂಡ್ಯ ಭಾಗದ ರೈತರಿಗಾಗಿ ಕಾವೇರಿ ನದಿಗೆ ನೀರು ಹರಿಸುವಂತೆ ಒತ್ತಾಯ ಕೇಳಿ ಬಂದಿದೆ. ಕೆಆರ್ ಎಸ್, ಹಾರಂಗಿ, ಕಬಿನಿ, ತುಂಗಭದ್ರಾ, ಲಿಂಗಮನಕ್ಕಿ ಸೇರಿದಂತೆ ನಾಡಿನ ಪ್ರಮುಖ ಅಣೆಕಟ್ಟುಗಳಲ್ಲಿ ಸದ್ಯಕ್ಕೆ ಉತ್ತಮ ನೀರಿನ ಸಂಗ್ರಹವಿದೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಅಧಿಕ ಒಳಹರಿವು ದಾಖಲಾಗಿದೆ. ರಾಜ್ಯದ ಅಣೆಕಟ್ಟುಗಳ ಇಂದಿನ (ಜುಲೈ15) ನೀರಿನ ಮಟ್ಟ, ಅಂಕಿ-ಸಂಖ್ಯೆಗಳು ಮುಂದಿದೆ.

ಇವತ್ತಿಗೆ ಕೆಆರ್‍‌ ಎಸ್ ಜಲಾಶಯದಲ್ಲಿ ಶೇ. 35, ತುಂಗಭದ್ರಾ ಜಲಾಶಯದಲ್ಲಿ ಶೇ. 24, ಲಿಂಗನಮಕ್ಕಿಯಲ್ಲಿ ಶೇ. 30, ಸೂಪಾ ಶೇ.26, ಭದ್ರಾ ಡ್ಯಾಂನಲ್ಲಿ ಶೇ. 45, ಮಲಪ್ರಭಾದಲ್ಲಿ ಶೇ. 33 ಹಾಗೂ ಘಟಪ್ರಭಾದಲ್ಲಿ ಶೇ. 39ರಷ್ಟು ನೀರಿನ ಸಂಗ್ರಹವಿದೆ. ಬರಗಾಲ ಭೀತಿ ನಡುವೆ ಜುಲೈ ಮೊದಲ ವಾರ ಸುರಿದ ಭಾರೀ ಮಳೆಗೆ ನದಿಗಳು, ಜಲಾಶಯಗಳ ಒಳಹರಿವು ಹೆಚ್ಚಾಗಿತ್ತು. ಆದರೆ ಈಗ ಮಳೆ ಮತ್ತೆ ದುರ್ಬಲವಾಗಿದ್ದು, ನೀರಿನ ಒಳಹರಿವು ಪ್ರಮಾಣ ಶೇ. 75ರಷ್ಟು ಕುಂಠಿತವಾಗಿದೆ.

Karnataka Dam Water Levels Today

ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ಪ್ರಕಾರ, ರಾಜ್ಯ ಕರಾವಳಿ ಜಿಲ್ಲೆಗಳ ಕೆಲವೆಡೆ ಜೋರು ಮಳೆ ಆಗಬಹುದು. ಉಳಿದೆ ಒಣಹವೆ ಮುಂದುವರಿಯಲಿದೆ. ಮುಂದಿನ ಕೆಲವು ದಿನಗಳ ಕಾಲ ನೀರಿಗೆ, ನೀರಾವರಿಗೆ ಸಮಸ್ಯೆ ಇಲ್ಲ. ಆದರೆ ಮಳೆ ಹೀಗೆ ಕೈ ಕೊಟ್ಟರೆ ಸಾಕಷ್ಟು ಸಮಸ್ಯೆ, ನೀರಿನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಇಂದು ಜುಲೈ 15ರಂದು ರಾಜ್ಯ ಪ್ರಮುಖ ಜಲಾಶಗಳ ನೀರಿನ ಪ್ರಮಾಣ ಎಷ್ಟಿದೆ? ಒಳ-ಹೊರ ಹರಿವು ವಿವರವಾದ ಪಟ್ಟಿ ಇಲ್ಲಿದೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಕೆಆರ್ ಎಸ್ ಡ್ಯಾಂ ನೀರಿನ ಸಂಗ್ರಹ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 49.452 ಟಿಎಂಸಿ

ಇಂದಿನ ನೀರು ಸಂಗ್ರಹ: 17.637 ಟಿಎಂಸಿ

ಒಳಹರಿವು; 2204 ಕ್ಯೂಸೆಕ್ಸ್

ಹೊರ ಹರಿವು: 625 ಕ್ಯೂಸೆಕ್ಸ್

ಹೇಮಾವತಿ ಜಲಾಶಯದ ನೀರಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರು ಸಂಗ್ರಹ: 22.13 ಟಿಎಂಸಿ

ಒಳಹರಿವು; 912 ಕ್ಯೂಸೆಕ್ಸ್

ಹೊರ ಹರಿವು: 300 ಕ್ಯೂಸೆಕ್ಸ್

ಕಬಿನಿ ಅಣೆಕಟ್ಟಿನ ಮಾಹಿತಿ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರು ಸಂಗ್ರಹ: 12.02 ಟಿಎಂಸಿ

ಒಳಹರಿವು; 2093 ಕ್ಯೂಸೆಕ್ಸ್

ಹೊರ ಹರಿವು: 400 ಕ್ಯೂಸೆಕ್ಸ್

ಭದ್ರಾ ಜಲಾಶಯದ ನೀರಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 71.54 ಟಿಎಂಸಿ

ಇಂದಿನ ನೀರು ಸಂಗ್ರಹ: 32.34 ಟಿಎಂಸಿ

ಒಳಹರಿವು; 1702 ಕ್ಯೂಸೆಕ್ಸ್

ಹೊರ ಹರಿವು: 220 ಕ್ಯೂಸೆಕ್ಸ್

ತುಂಗಭದ್ರಾ ಜಲಾಶಯದ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 105 ಟಿಎಂಸಿ

ಇಂದಿನ ನೀರು ಸಂಗ್ರಹ: 25.13 ಟಿಎಂಸಿ

ಒಳ ಹರಿವು; 9982 ಕ್ಯೂಸೆಕ್ಸ್

ಹೊರ ಹರಿವು: 803 ಕ್ಯೂಸೆಕ್ಸ್

ಹಾರಂಗಿ ಅಣೆಕಟ್ಟಿನ ಇಂದಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 8.50 ಟಿಎಂಸಿ

ಇಂದಿನ ನೀರು ಸಂಗ್ರಹ: 5.29 ಟಿಎಂಸಿ

ಒಳಹರಿವು; 1528 ಕ್ಯೂಸೆಕ್ಸ್

ಹೊರ ಹರಿವು: 180 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 123.08 ಟಿಎಂಸಿ

ಇಂದಿನ ನೀರು ಸಂಗ್ರಹ: 89.14 ಟಿಎಂಸಿ

ಒಳಹರಿವು; 15,180 ಕ್ಯೂಸೆಕ್ಸ್

ಹೊರ ಹರಿವು: 00 ಕ್ಯೂಸೆಕ್ಸ್

ವಾಣಿವಿಲಾಸ ಸಾಗರ ಡ್ಯಾಂ ನೀರಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 30.42 ಟಿಎಂಸಿ

ಇಂದಿನ ನೀರು ಸಂಗ್ರಹ: 23.68 ಟಿಎಂಸಿ

ಒಳಹರಿವು; 00 ಕ್ಯೂಸೆಕ್ಸ್

ಹೊರ ಹರಿವು: 00 ಕ್ಯೂಸೆಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+