RCB Stampede: "ಆ 11 ಅಮಾಯಕರ ದಾರುಣ ಸಾವಿಗೆ ಕಾರಣ ಯಾರು? ತಾವಾಗಿಯೇ ಬಂದು ಸತ್ತರೇ?"

RCB Stampede: ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ಸಂದರ್ಭದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಎದುರಿಸುತ್ತಿದ್ದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೊಡ್ಡ ರಿಲೀಫ್ ಕೊಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಸಲ್ಲಿಸಿದ್ದ ಸಮರ್ಥನಾ ಹೇಳಿಕೆಗಳು ಹಾಗೂ ಇಲಾಖೆಯ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR)ಯ ಅಂದಿನ ಬೆಂಗಳೂರು ಪೊಲೀಸ್‌ ಕಮೀಷನರ್‌ ಆಗಿದ್ದ ಬಿ.ದಯಾನಂದ್‌ ಸೇರಿ ಮೂವರು ಪೊಲೀಸ್‌ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕೊಲೆಗಡುಕ ಕಾಂಗ್ರೆಸ್ ಸರ್ಕಾರಕ್ಕೆ ನೊಂದ ಹೆತ್ತವರ ಕಣ್ಣೀರಿನ ಶಾಪ ತಟ್ಟದೇ ಇರದು! ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆ ಭೀಕರ ಕಾಲ್ತುಳಿತ ದುರಂತಕ್ಕೆ ಬಲಿಯಾದ 11 ಜನ ಅಮಾಯಕ ಯುವಕ-ಯುವತಿಯರ ಸಾವಿಗೆ ಅಸಲಿ ಹೊಣೆ ಯಾರು? ಕಾಂಗ್ರೆಸ್ ಸರ್ಕಾರದ ಅಂದು ಮಾಡಿದ ಈ ಸರ್ಕಾರಿ ಪ್ರಾಯೋಜಿತ ಕೊಲೆಗೆ ನ್ಯಾಯ ಎಲ್ಲಿದೆ? ಅಂದು ಒಂದೇ ದಿನ ಎರಡೆರಡು ಕಡೆ ಐಪಿಎಲ್ ವಿಜಯೋತ್ಸವದ ಹುಚ್ಚು ಐಡಿಯಾಗೆ ಅನುಮತಿ ಕೊಟ್ಟಿದ್ದು ಅಂದಿನ ಸಿಎಂ ಸಿದ್ದರಾಮಯ್ಯ!

RCB Stampede

ಅಲ್ಲಿ ಅಮಾಯಕರ ಹೆಣಗಳು ಬಿದ್ದಿದ್ದರೂ, ಆರ್‌ಸಿಬಿ ಬಾವುಟ ಹಿಡಿದುಕೊಂಡು ಫೋಟೋಶೂಟ್‌ಗೆ ಪೋಸ್ ಕೊಟ್ಟಿದ್ದು ಅಂದಿನ ಡಿಸಿಎಂ ಡಿ.ಕೆ.ಶಿವಕುಮಾರ್! ಪೊಲೀಸರು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಆಗಲೇಬೇಕೆಂದು ಹಠ ಹಿಡಿದು ಆದೇಶ ಹೊರಡಿಸಿದ್ದು ಅಂದಿನ DPAR ಕಾರ್ಯದರ್ಶಿ ಶ್ರೀಮತಿ ಸತ್ಯವತಿ. ಇಡೀ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದವರು ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್. ಆದರೆ ಇಂದು ಸಿದ್ದರಾಮಯ್ಯ ಅವರದ್ದು ತಪ್ಪಿಲ್ಲ, ಡಿ.ಕೆ.ಶಿವಕುಮಾರ್ ನಿರ್ದೋಷಿ, ಮುಖ್ಯ ಕಾರ್ಯದರ್ಶಿ ನಿರಪರಾಧಿ, DAPR ಕಾರ್ಯದರ್ಶಿ ಅಮಾಯಕರು! ಈಗ ಪೊಲೀಸ್ ಅಧಿಕಾರಿಗಳನ್ನೂ ದೋಷಮುಕ್ತಗೊಳಿಸಲಾಗಿದೆ!

ಹಾಗಾದರೆ ಆ 11 ಅಮಾಯಕರ ದಾರುಣ ಸಾವಿಗೆ ಕಾರಣ ಯಾರು? ತಾವಾಗಿಯೇ ಬಂದು ಸತ್ತರೇ? ಅಂದು ಸದನದಲ್ಲಿ ಇದರ ಬಗ್ಗೆ ಚರ್ಚೆ ಆದಾಗಲೇ ನಾನು ಗಂಟಲು ಹರಿದುಕೊಂಡು ಹೇಳಿದ್ದೆ - ಈ ಸರ್ಕಾರದ ಯಾವುದೇ ತನಿಖೆಗಳೂ ಕೇವಲ ಪ್ರಕರಣವನ್ನು ಮುಚ್ಚಿಹಾಕುವ ತಂತ್ರವೇ ಹೊರತು, ನೊಂದ ಹೆತ್ತವರಿಗೆ ನ್ಯಾಯ ಕೊಡಿಸುವ ಉದ್ದೇಶ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ ಇಲ್ಲ.

ಅಧಿಕಾರದ ಮದದಲ್ಲಿ ಅಮಾಯಕರ ರಕ್ತ ಹೀರಿದ ನಿಮಗೆ ಆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಬಿಡದು. ಅಧಿಕಾರ ಶಾಶ್ವತವಲ್ಲ ಡಿ.ಕೆ ಶಿವಕುಮಾರ್ ಅವರೇ, ಜನ ಯಾವುದನ್ನೂ ಮರೆತಿಲ್ಲ. ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಶಾಸ್ತಿ ಆಗುವುದು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+