Police Transper: ಪೊಲೀಸ್ ಪೇದೆಗಳಿಗೆ ಸಿಹಿ ಸುದ್ದಿ: ವರ್ಗಾವಣೆ ಕ್ರಮಕ್ಕೆ ಸಚಿವರ ನಿರ್ದೇಶನ
ಬೆಂಗಳೂರು, ಫೆಬ್ರವರಿ 26: ಅಂತರಜಿಲ್ಲಾ ವರ್ಗಾವಣೆ ಹಾಗೂ ಪತಿ-ಪತ್ನಿಯರ ಪ್ರಕರಣದಲ್ಲಿ ವರ್ಷಗಳಿಂದಲೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ (ಪತಿ-ಪತ್ನಿ ಪ್ರಕರಣಗಳು) ಕುರಿತು ಗೃಹ ಸಚಿವರು ಇಲಾಖೆಗೆ ಸೋಮವಾರ (ಫೆಬ್ರವರಿ 26) ರಂದು ಕರ್ನಾಟಕ ರಾಜ್ಯದ ಡೈರಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಟಿಪ್ಪಣಿ ಹೊರಡಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ''ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ಗಳ (ಪತಿ-ಪತ್ನಿ ಪ್ರಕರಣಗಳು) ಅಂತರಜಿಲ್ಲಾ ವರ್ಗಾವಣೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಬಿತ್ತರ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ 2024ರ ನೀತಿ ಸಂಹಿತಾ ಜಾರಿಯಾಗುವ ಮೊದಲೇ ಅರ್ಹರಿಗೆ ಅಂತರ ಜಿಲ್ಲಾ ವರ್ಗಾವಣೆ ಪ್ರಸ್ತಾವನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು'' ಎಂದು ನಿರ್ದೇಶಿಸಿದ್ದಾರೆ.
ವರ್ಗಾವಣೆ ನಕಾರ: ದಯಾಮರಣ ಕೋರಿ ಪತ್ರ
ಇತ್ತಿಚೆಗೆ ಮೂರು ನಾಲ್ಕು ವರ್ಷಗಳಿಂದ ಪತಿ-ಪತ್ನಿ ಪೇದೆಗಳಿಗೆ ವರ್ಗಾವಣೆ ನೀಡಲ್ಲವೆಂದು ಅವರು ದಯಾಮರಣ ಕೋರಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಈ ಪತ್ರ ವೈರಲ್ ಆಗಿತ್ತು. ಒಂದೇ ಘಟಕ ಅಥವಾ ಒಂದೇ ಜಿಲ್ಲೆಯಲ್ಲಿ ವರ್ಗಕ್ಕೆ ಅವಕಾಶ ನಿರಾಕರಿಸಿದ್ದರಿಂದ ದಯಾಮರಣ ಕೋರಿ ಪತ್ರ ಬರೆದು ಮನವಿ ಮಾಡಿದ್ದರು.
ಅಂತರಜಿಲ್ಲಾ ವರ್ಗಾವಣೆಗೆ ಅವಕಾಶ ಇಲ್ಲದ್ದರಿಂದ ನಿರಾಸೆಯಾದ ಪೊಲೀಸ್ ವರ್ಗಾವಣೆ ಗ್ಯಾರಂಟಿ ವಿರುದ್ಧ ಪೇದೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಿನ ಸರ್ಕಾರ ಪದೇ ಪದೆ ವರ್ಗಾವಣೆ ಭರವಸೆ ನೀಡುತ್ತಿದೆ. ಹೊರತು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ ಎಂದು ಪೊಲೀಸ್ ಇಲಾಖೆಯ ಕೆಲವು ಕೆಳ ಹಂತದ ಉದ್ಯೋಗಿಗಳಿಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications