• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ ಕೊರೊನಾ ಸೋಂಕಿನಿಂದ ನಿಧನ

|
Google Oneindia Kannada News

ನವದೆಹಲಿ, ಮೇ 14: ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ ಡಾ.ಎಸ್‌.ಕೆ. ಭಂಡಾರಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.

ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ.ಎಸ್. ಕೆ ಭಂಡಾರಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಡಾ ಭಂಡಾರಿ ಅವರು ಕೋವಿಡ್ 19 ಎರಡು ಲಸಿಕೆ ತೆಗೆದುಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ವಿಜಯಪುರ; ಖ್ಯಾತ ವೈದ್ಯ ಎಂ. ಎಸ್. ಬಿರಾದಾರ ವಿಧಿವಶವಿಜಯಪುರ; ಖ್ಯಾತ ವೈದ್ಯ ಎಂ. ಎಸ್. ಬಿರಾದಾರ ವಿಧಿವಶ

ಅವರ ಪತಿ ನಿವೃತ್ತ ಐಎಎಸ್ ಅಧಿಕಾರಿ ಕೂಡ ಕೋವಿಡ್ ಪಾಸಿಟಿವ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಇನ್ನೂ ಪತ್ನಿಯ ಸಾವಿನ ಸುದ್ದಿ ತಿಳಿಸಿಲ್ಲ ಎಂದು ಹೇಳಿದ್ದಾರೆ. ಡಾ. ಭಂಡಾರಿ ನಿಧನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸಂತಾಪ ಸೂಚಿಸಿದ್ದಾರೆ.

86 ವರ್ಷದ ಡಾ. ಭಂಡಾರಿ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹುಟ್ಟಿನ ಸಂದರ್ಭದಲ್ಲಿ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡಿದ್ದರು.

   Covidನಿಂದ ಗುಣಮುಖರಾದವರು ತಕ್ಷಣ ಲಸಿಕೆ ತೆಗೆದುಕೊಳ್ಳಬೇಡಿ | Oneindia Kannada

   ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಭಂಡಾರಿ ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಕೂಡ ಬಂದಿತ್ತು ಎಂದು ಸರ್ ಗಂಗಾ ರಾಮ್ ಆಸ್ಪತ್ರೆ ಅಧ್ಯಕ್ಷ ಡಾ.ಡಿಎಸ್ ರಾಣಾ ಹೇಳಿದ್ದಾರೆ.

   English summary
   One of the longest serving doctors at Sir Ganga Ram Hospital here and renowned obstetrician and gynaecologist Dr S K Bhandari died on Thursday due to COVID-19 related complications, officials said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X