• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

24 ಗಂಟೆಯಲ್ಲಿ 3722 ಹೊಸ ಕೇಸ್ ಪತ್ತೆ, 134 ಸಾವು

|

ದೆಹಲಿ, ಮೇ 14: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 78 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3722 ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. 134 ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 78003ಕ್ಕೆ ಏರಿಕೆಯಾಗಿದೆ. ಈವರೆಗೂ 2549 ಜನರು ಸೋಂಕಿನಿಂದ ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಬೇಟೆ, ಒಂದೇ ದಿನ 1813 ಸಾವು

ಕೇಂದ್ರದ ಅಂಕಿ ಅಂಶದ ಪ್ರಕಾರ ಇನ್ನು 49219 ಪ್ರಕರಣಗಳು ಸಕ್ರಿಯವಾಗಿದೆ. 26235 ಜನರು ಕೊವಿಡ್ ಮಹಾಮಾರಿಯಿಂದ ಚೇತರಿಕೆ ಕಂಡಿದ್ದಾರೆ.

ಪ್ರತಿದಿನದ ಅಂಕಿ ಅಂಶ ಗಮನಿಸುತ್ತಿದ್ದಾರೆ ಮುಂದಿನ ದಿನದಲ್ಲಿ ಕೊವಿಡ್ ಹಾವಳಿ ದೇಶದಲ್ಲಿ ಹೆಚ್ಚಾಗಬಹುದು ಎಂಬ ಆತಂಕ ಕಾಡುತ್ತಿದೆ. ಆದರೆ, ಸರ್ಕಾರಗಳು ಮಾತ್ರ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಲಾಕ್‌ಡೌನ್‌ ವಿನಾಯಿತಿ ನೀಡಲು ಮುಂದಾಗಿದೆ.

ಜಗತ್ತಿನಲ್ಲಿ ಈವರೆಗೂ ಒಟ್ಟು 44 ಲಕ್ಷ (4,429,725) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 298,174 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 1,659,791 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಯುಎಸ್‌ನಲ್ಲಿ 85,197 ಜನರು ಮೃತಪಟ್ಟಿದ್ದಾರೆ. ಯುಕೆಯಲ್ಲಿ 33,186 ಜನರು ಸಾವನ್ನಪ್ಪಿದ್ದಾರೆ.

English summary
In India 3722 COVID19 cases & 134 deaths in the last 24 hours. Total positive cases in the country is now at 78003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X