ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕೊರೊನಾ ಸಾವಿನ ಬೇಟೆ, ಒಂದೇ ದಿನ 1813 ಸಾವು

|
Google Oneindia Kannada News

ವಾಷಿಂಗ್ಟನ್, ಮೇ 14: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೊನಾ ವೈರಸ್ ಕಾಟ ಸ್ವಲ್ಪವೂ ಕಡಿಮೆಯಾಗಿಲ್ಲ. ಮೇ 13ರ ವರದಿಯಂತೆ ಯುಎಸ್‌ನಲ್ಲಿ ಕೊವಿಡ್ ಸಾವಿನ ಸಂಖ್ಯೆ 84,059 ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಸುಮಾರು 1813 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಮೆರಿಕ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ ಸುಮಾರು 22,008 ಕೊವಿಡ್ ಪ್ರಕರಣಗಳು ಯುಎಸ್‌ನಲ್ಲಿ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,389,935ಕ್ಕೆ ಏರಿಕೆಯಾಗಿದೆ ಎಂಬ ವರದಿ ಲಭ್ಯವಿದೆ.

ಲಸಿಕೆ ಸಂಶೋಧನೆ ಹ್ಯಾಕ್: ಅಮೆರಿಕ ಆರೋಪಕ್ಕೆ ಚೀನಾ ಹೇಳಿದ್ದೇನು?

ಅಮೆರಿಕ ಪೈಕಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ನಗರಗಳಲ್ಲಿ ಹೆಚ್ಚು ಸೋಂಕಿತರು ವರದಿಯಾಗಿದ್ದಾರೆ. ನಿನ್ನೆ ನ್ಯೂಯಾರ್ಕ್ ನಗರದಲ್ಲಿ 2193 ಹೊಸ ಕೇಸ್ ದಾಖಲಾಗಿದ್ದು, 115 ಜನರು ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ ನಿನ್ನೆ 782 ಹೊಸ ಕೇಸ್ ವರದಿಯಾಗಿದ್ದು, 186 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

us-recorded-1813-coronavirus-deaths-in-past-24-hours

ಜಗತ್ತಿನಾದ್ಯಂತ 4,427,757 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ಅತಿ ಹೆಚ್ಚು ಜನರು ಅಮೆರಿಕದವರು ಎನ್ನುವುದು ಆತಂಕದ ವಿಷಯ. ಅಮೆರಿಕ ಬಿಟ್ಟರೆ ಸ್ಪೇನ್, ರಷ್ಯಾ, ಯುಕೆ, ಇಟಲಿ ದೇಶಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ.

English summary
United States recorded 1,813 coronavirus deaths in the past 24 hours, bringing the total to 84,059.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X